Showing posts with label ಭುವನವನಾ ಯಂಧ್ಯಾಗಿದ್ದರೆಕರ pranesha vittala. Show all posts
Showing posts with label ಭುವನವನಾ ಯಂಧ್ಯಾಗಿದ್ದರೆಕರ pranesha vittala. Show all posts

Thursday 14 November 2019

ಭುವನವನಾ ಯಂಧ್ಯಾಗಿದ್ದರೆಕರ ankita pranesha vittala

by ಪ್ರಾಣೇಶದಾಸರು
ಭುವನವನಾ ಯಂಧ್ಯಾಗಿದ್ದರೆಕರ|ಸುವದು ನಿರಂತರ ಲೋಕದಲೀ ||ಅವಿದಿತ ನಾನು ಅದನ್ನ ಆಪನಿತು |ವಿವರಿಸುವೆನು ಕಲಿಗಳು ಕೇಳೀ ಪ

ರವಿಮೂಡವ ಮುಂಚೇಳುತ ಶ್ರೀಮಾ |ಧವನ ಸ್ಮರಿಸುತಿರಲದೆ ಭವನಾ ||ಯುವತಿಯರಾ ವ್ಯಾಳ್ಯದಲಿ ಮೊಸರು ಮಥ |ನವ ಮಾಡುತಿಹರು ಅದೆ ಭವನಾ 1

ಶಂಖ ಚಕ್ರ ಮೊದಲಾಯುಧ ಧರಿಸದೆ |ಮಂಕುಗಳಿರುತಿಹರದೇ ವನಾ ||ಸಂಕಟ ಚೌತೀ ಶಿವನಿಸಿ ಭೂತ ಶ |ಶಾಂಕನ ಪೂಜಿಪರದೇ ವನಾ 2

ಅಂಗನಿಯರು ತಿಲಕಾಯುಧ ಕುಂಕುಮ |ಶ್ರಿಂಗರವಾಗಿ ಹರದೆ ಭವನಾ ||ಅಂಗಣದಲಿ ವೃಂದಾವನ ಗೋವ್ಗಳು |ರಂಗವಲಿಕ್ಕುವರದೆ ಭವನಾ 3

ಸರುವರು ಸರ್ವದ ದುಷ್ಟ ಶಬ್ದ ಉ |ಚ್ಚರಿಸುತಲಿಪ್ಪರು ಅದೇ ವನಾ ||ಹರಿಗತಿ ಪ್ರಿಯಕರ ತುಲಸಿಲ್ಲದ ಮಂ |ದಿರವೆ ನಿಶ್ಚಯವಾಗಿ ವನಾ 4

ರಾಮಾರ್ಪಿತದನ್ನವ ಹೋಮಿಸಿದ |ಧೂಮ ವ್ಯಾಪಿಸಿಹದದೆ ಭವನಾ ||ಭಾಮಿನಿಯರು ಕೆಲಸವ ಮಾಡುತಖಳ|ಭೀಮನ ಸ್ಮರಿಸುವರದೆ ಭವನಾ 5

ದೇವಪೂಜೆ ನೈವೇದ್ಯವು ವೈಶ್ವ |ದೇವ ಯಂಬದಿಲ್ಲದೇ ವನಾ ||ಆವ ಕಾಲಕೂ ವೇದ ವೇದ್ಯ ಭೂ |ದೇವರು ಬರದಿಹದದೇ ವನಾ6

ವೇದ ಪುರಾಣದ ಘೋಷವು ಸರ್ವದ |ಭೂ ದಿವಿಜರ ಸಂದಣೆ ಭವನಾ ||ವಾದಿಗಳ ಹಳಿದು ಮಧ್ವರಾಯರಾ |ರಾಧನೆ ಮಾಡುವರದೆ ಭವನಾ 7

ಹಿಕ್ಕದೆ ತಲಿ ಕಚ್ಚಿಲ್ಲದೆ ತಿರುಗುತ |ಮಕ್ಕಳನಳಿಸುವರದೇ ವನಾ ||ಸೊಕ್ಕಿಲಿ ಗಂಡತ್ತಿಗಳಿಗೆ ಬೈತಿಹ |ರಕ್ಕಸಿ ಹೆಂಗಸಿಹದೇ ವನಾ 8

ತಂಬೂರಿ ತಾಳಂಗಳ ಸುಸ್ವರ |ತುಂಬಹದೆಂದೆಂದು ಭವನಾ ||ಉಂಬುವಾಗಪ್ರತಿಪ್ರತಿ ತುತ್ತಿಗೆ | ಪೀತಾಂಬರನ ಸ್ಮರಿಪರದೆ ಭವನಾ 9

ರೌಚ ದಂತ ಧಾವನ ಮೊದಲಾದ ಸ |ದಾಚಾರಿಲ್ಲಲ್ಲದೇ ವನಾ ||ಯಾಚಕರಿಗೆ ತುತ್ತನ್ನವಿಲ್ಲ ಮ |ತ್ತ್ಯೋಚನಿ ಯಾತಕೆ ಅದೇ ವನಾ 10

ಹರಿದಿನದಲಿ ಸರ್ವರು ನಿರ್ಜಲ ಜಾ |ಗರವನು ಮಾಡುವರದೇ ಭವನಾ ||ಮರುದಿನ ಭೋಜನ ಸೂರ್ಯೋದಯ ಕಂ |ತರಿಸದೆ ಮಾಡುವರದೆ ಭವನಾ 11

ಉದಯಾಗಿ ತಾಸಾದರನ್ನನರ|ಸುದತಿಯರೇಳದ ಮನೇ ವನಾ ||ಪದುಮನಾಭ ನಾಮೋಚ್ಚಾರಣೆ ಯಂ |ಬದು ಎಂದೆಂದಿಲ್ಲದೇ ವನಾ 12

ಪ್ರತಿದಿನ ಧರ್ಮಕೆ ಪ್ರತಿಕೂಲಾಗದ |ಸತಿಸುತರಿದ್ದರೆ ಅದೆ ಭವನಾ ||ವೃತಗಳು ಸದ್ದಾನಗಳು ತಿಳಿದನವ |ಕತ ಮಾಡುತಿಹ್ಯರದೆ ಭವನಾ 13

ರೊಕ್ಕವಿದ್ದು ಸದ್ವ್ಯಯವಾಗದ ಯಳಿ |ಮಕ್ಕಳಿಲ್ಲದಿಹ ಸದನೇ ವನಾ ||ಮುಕ್ಕುಂದನ ದಾಸರ ನಿಂದಿಸುತಿಹ್ಯ |ಚಿಕ್ಕ ಮತಿಗಳೀಹದೇ ವನಾ 14

ಮಾರುತ ಮತವನುಸರಿಸುತಲೀ ವ್ಯವ |ಹಾರ ಮಾಡುವದೆ ಭವನಾ ||ಮಾರುತಿ ಸುತ ಪ್ರಾಣೇಶ ವಿಠ್ಠಲನ ಪ |ದಾರಾಧನೆ ಮಾಡುವರದೆ ಭವನಾ 15
********