Showing posts with label ಕೃಷ್ಣನ ನೋಡಿದೆ ಸರ್ವೋತ್ಕೃಷ್ಟನ ಪಾಡಿದೆ venugopala vittala KRISHNANA NODIDE SARVOTKRUSHTANA PAADIDE. Show all posts
Showing posts with label ಕೃಷ್ಣನ ನೋಡಿದೆ ಸರ್ವೋತ್ಕೃಷ್ಟನ ಪಾಡಿದೆ venugopala vittala KRISHNANA NODIDE SARVOTKRUSHTANA PAADIDE. Show all posts

Monday, 6 December 2021

ಕೃಷ್ಣನ ನೋಡಿದೆ ಸರ್ವೋತ್ಕೃಷ್ಟನ ಪಾಡಿದೆ ankita venugopala vittala KRISHNANA NODIDE SARVOTKRUSHTANA PAADIDE





ಶ್ರೀ ಪಂಗನಾಮ ತಿಮ್ಮಣ್ಣದಾಸರ ಕೃತಿ ( ವೇಣುಗೋಪಾಲವಿಠಲ ಅಂಕಿತ)

ಕೃಷ್ಣನ ನೋಡಿದೆ ಸರ್ವೋತ್ಕೃಷ್ಟನ ಪಾಡಿದೆ ॥ ಪ ॥

ಕೃಷ್ಣನ ನೋಡಿ ಸಾಷ್ಟಾಂಗವ ಮಾಡಿದೆ
ಕಷ್ಟವ ಪರಿಹರಿಸಿ ಇಷ್ಟವನೀವನ ॥ ಅ ಪ ॥

ಶಿಷ್ಟನ ನೋಡಿದೆ ವರನಿರ್ದುಷ್ಟನ ಪಾಡಿದೆ
ಹೃಷ್ಟಪುಷ್ಟಸಂತುಷ್ಟನ ಶ್ರೇಷ್ಠನ
ಶಿಷ್ಟರ ಕಷ್ಟನಿವಿಷ್ಟನ ದೇವನ ॥ 1 ॥

ರಂಗನ ನೋಡಿದೆ ದೇವೋತ್ತುಂಗನ ಪಾಡಿದೆ
ಅಂಗಸಿಂಗ ಕಾಳಿಂಗಮರ್ದನನ
ಮಂಗಳಾಂಗ ಭವಭಂಗನ ನೋಡಿದೆ ॥ 2 ॥

ದೇವನ ನೋಡಿದೆ ಮುಕುತಿಯೀವನ ಪಾಡಿದೆ
ಗೋವಕಾವ ಭೂದೇವವಂದಿತ ಬಲ -
ದೇವಾನುಜ ಹಯಗ್ರೀವನ ನೋಡಿದೆ ॥ 3 ॥

ಧೀರನ ನೋಡಿದೆ ಜಗದೋದ್ಧಾರನ ಪಾಡಿದೆ
ವೀರ ಶೂರ ಪರಾತ್ಪರ ತಾನ -
ಕ್ರೂರವರದ ಸಿರಿಧಾರನ ನೋಡಿದೆ ॥ 4 ॥

ಶ್ಯಾಮನ ನೋಡಿದೆ ಬಲುನಿಸ್ಸೀಮನ ಪಾಡಿದೆ
ವಾಮನ ರಾಮನ ಕಾಮನ ಅಯ್ಯನ
ಸಾಮನ ಸೀಮನ ಸೋಮನ ನೋಡಿದೆ ॥ 5 ॥

ಬಾಲನ ನೋಡಿದೆ ಲಕುಮಿವಿಲೋಲನ ಪಾಡಿದೆ
ಶೀಲ ಶೂಲಧರಪಾಲ ಲೀಲ ಶಿಶು -
ಪಾಲಕಾಲ ವನಮಾಲನ ನೋಡಿದೆ ॥ 6 ॥

ಜಾಣನ ನೋಡಿದೆ ಬಲುವಿನೋದನ ಪಾಡಿದೆ
ಗುಣಗಣ ಅಗಣಿತಪ್ರಾಣರ ಪ್ರಾಣನ
 ವೇಣುಗೋಪಾಲವಿಠ್ಠಲ ಕಲ್ಯಾಣನ ॥ 7 ॥
***

 ರಾಗ ಯಮನ್ ಕಲ್ಯಾಣಿ           ರೂಪಕತಾಳ