Showing posts with label ಗುರುರಾಜಾ ಗುರುರಾಜಾ ಮಂತ್ರಾಲಯಪ್ರಭು lakumeesha. Show all posts
Showing posts with label ಗುರುರಾಜಾ ಗುರುರಾಜಾ ಮಂತ್ರಾಲಯಪ್ರಭು lakumeesha. Show all posts

Monday, 6 September 2021

ಗುರುರಾಜಾ ಗುರುರಾಜಾ ಮಂತ್ರಾಲಯಪ್ರಭು ankita lakumeesha

 ankita ಲಕುಮೀಶ 

ರಾಗ: [ಮಾಯಾಮಾಳವಗೌಳ]    ತಾಳ: [ಆದಿ]


ಗುರುರಾಜಾ ಗುರುರಾಜಾ ಮಂತ್ರಾಲಯಪ್ರಭು 

ಶರಣಜನರ ಶ್ರೀಸುರರಮಹೀಜ


ಬಾಗಿ ಭಜಿಪೆ ಭವರೋಗವ ಓಡಿಸಿ

ಭಾಗವತರ ಸಂಗ ಸಂತತ ಕರುಣಿಸು  1

ಆದಿಯುಗದಿ ಪ್ರಹ್ಲಾದ ನೀನೆನಿಸುತ

ಬಾಧೆ ಸಹಿಸಿ ಪಿತಗೆ ಶ್ರೀದನ ತೋರಿದ  2

ವ್ಯಾಸರಾಜರಾಗಿ ವ್ಯಾಸತ್ರಯಗೈದೆ

ದಾಸ ಪುರಂದರರ ಭಾಸುರ ಗುರುವೆ  3

ತಿಮ್ಮಣ್ಣ ದಂಪತಿ ತಿಮ್ಮನ ಭಜಿಸಲು

ಜನ್ಮವ ತಾಳಿದೆ ಎಮ್ಮನು ಪೊರೆಯಲು  4

ಸುಖಮುನಿವಾಸ ಶ್ರೀ ಲಕುಮೀಶನಂಘ್ರಿಯ

ಸುಕರುಣದಿ ನಿತ್ಯ ಸಕಲೇಷ್ಠದಾಯಕ  5

***