ankita ಲಕುಮೀಶ
ರಾಗ: [ಮಾಯಾಮಾಳವಗೌಳ] ತಾಳ: [ಆದಿ]
ಗುರುರಾಜಾ ಗುರುರಾಜಾ ಮಂತ್ರಾಲಯಪ್ರಭು
ಶರಣಜನರ ಶ್ರೀಸುರರಮಹೀಜ ಪ
ಬಾಗಿ ಭಜಿಪೆ ಭವರೋಗವ ಓಡಿಸಿ
ಭಾಗವತರ ಸಂಗ ಸಂತತ ಕರುಣಿಸು 1
ಆದಿಯುಗದಿ ಪ್ರಹ್ಲಾದ ನೀನೆನಿಸುತ
ಬಾಧೆ ಸಹಿಸಿ ಪಿತಗೆ ಶ್ರೀದನ ತೋರಿದ 2
ವ್ಯಾಸರಾಜರಾಗಿ ವ್ಯಾಸತ್ರಯಗೈದೆ
ದಾಸ ಪುರಂದರರ ಭಾಸುರ ಗುರುವೆ 3
ತಿಮ್ಮಣ್ಣ ದಂಪತಿ ತಿಮ್ಮನ ಭಜಿಸಲು
ಜನ್ಮವ ತಾಳಿದೆ ಎಮ್ಮನು ಪೊರೆಯಲು 4
ಸುಖಮುನಿವಾಸ ಶ್ರೀ ಲಕುಮೀಶನಂಘ್ರಿಯ
ಸುಕರುಣದಿ ನಿತ್ಯ ಸಕಲೇಷ್ಠದಾಯಕ 5
***
No comments:
Post a Comment