..
kruti: tandevaradagopala vittala (ಪ್ರಹ್ಲಾದಗೌಡರು)
ಭಜಿಪೇನೆ ನಿನ್ನ ಭಕುತಿಯಿತ್ತು ಪೊರೆ ಎಮ್ಮಾ ಪ
ಭಾರ ನಿನ್ನದು ಭರತರಾಯನ ಪ್ರೀತಿ ವಿಷಯಳೆ ಅ.ಪ.
ಬಂದ ಕಾರ್ಯವಾಗುವಂತೆ ಮಾಡೆನಿನ್ನ ದ್ವಂದ್ವಕೆ ನಮಿಪೆ ಅನ್ಯರ ಬೇಡೇಬನ್ನ ಬಡುತಿಹ ಧಮ್ಮ ಭಕುತನ ನೋಡೆ ಸುe್ಞÁನವಿತ್ತು ಕರಪಿಡಿದು ಕಾಪಾಡೆ 1
ತರಳನ ಮತಿಯನ್ನು ಸರಳಮಾಡಿ ಉರುಳಿಸು ಸುಧೆಯಾಂಬುಧಿಯೊಳಗೆನ್ನ ಗರಳವಾಗಿದೆ ಮನವೆಲ್ಲಾ...ಪಾಶಾದಿ ಸುತ್ತಿ ಇನ್ನು ಅರಳಿಸಿದೆ ಮೋಹಸತಿಯೊಡನೆ ಪಾದಾ 2
ದಾಸಾನಿಗೆ ನಿನ್ನ ದಾಸನಾಗುವದೆಂಬೊ ಆಶಾಪುಟ್ಟಿದ್ದಕ್ಕೆ ದಾಸನ ಮಾಡಿಕೊ ಉದಾಶಿಸದೆ ಏಸು ಮಾತುಗಳಾಡಿದರೂ ಕಾಸು ಬಾಳದು ಸಾಸಿರ ಮಾತಿಗೆ ಒಂದೇ ತಂದೆವರದಗೋಪಾಲವಿಠ್ಠಲನತೋರೆ 3
***