Thursday, 5 August 2021

ಭಜಿಪೇನೆ ನಿನ್ನ ಭಕುತಿಯಿತ್ತು ಪೊರೆ ಎಮ್ಮಾ ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)


ಭಜಿಪೇನೆ ನಿನ್ನ ಭಕುತಿಯಿತ್ತು ಪೊರೆ ಎಮ್ಮಾ ಪ


ಭಾರ ನಿನ್ನದು ಭರತರಾಯನ ಪ್ರೀತಿ ವಿಷಯಳೆ ಅ.ಪ.


ಬಂದ ಕಾರ್ಯವಾಗುವಂತೆ ಮಾಡೆನಿನ್ನ ದ್ವಂದ್ವಕೆ ನಮಿಪೆ ಅನ್ಯರ ಬೇಡೇಬನ್ನ ಬಡುತಿಹ ಧಮ್ಮ ಭಕುತನ ನೋಡೆ ಸುe್ಞÁನವಿತ್ತು ಕರಪಿಡಿದು ಕಾಪಾಡೆ 1

ತರಳನ ಮತಿಯನ್ನು ಸರಳಮಾಡಿ ಉರುಳಿಸು ಸುಧೆಯಾಂಬುಧಿಯೊಳಗೆನ್ನ ಗರಳವಾಗಿದೆ ಮನವೆಲ್ಲಾ...ಪಾಶಾದಿ ಸುತ್ತಿ ಇನ್ನು ಅರಳಿಸಿದೆ ಮೋಹಸತಿಯೊಡನೆ ಪಾದಾ 2

ದಾಸಾನಿಗೆ ನಿನ್ನ ದಾಸನಾಗುವದೆಂಬೊ ಆಶಾಪುಟ್ಟಿದ್ದಕ್ಕೆ ದಾಸನ ಮಾಡಿಕೊ ಉದಾಶಿಸದೆ ಏಸು ಮಾತುಗಳಾಡಿದರೂ ಕಾಸು ಬಾಳದು ಸಾಸಿರ ಮಾತಿಗೆ ಒಂದೇ ತಂದೆವರದಗೋಪಾಲವಿಠ್ಠಲನತೋರೆ 3

***


No comments:

Post a Comment