ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಡಲೋ ಹರಿಪಾದ ಭಜನಿ| ಮನವೇ ನೀ| ಪಾತಕ ಓಡಿಸಿ ಕಳೆವದು| ಕಾಡಿಗೆ ಕೊಂಡಾ ವಾಡಬನಂತೆ ಪ
ಸಿಕ್ಕದು ನರದೇಹಲಿಂದು|ಜನಿಸಿ ಬಂದು| ಪುಕ್ಕಟೆ ನೀಗುವದು ಕುಂದು| ಅಕ್ಕರದಲಿ ವಿಷಯಕ್ಕೆಳಿಸುತಾ|ಭವ| ದಿಕ್ಕಲು ಸಾರುತ ಠಕ್ಕಿಸಿ ಕೊಂಬರೆ 1
ಸಂತರ ಸಹವಾಸ ಮಾಡೀ|ಕರುಣ ಬೇಡಿ| ಅಂತರ ಸುಖವನು ಕೂಡಿ| ತಂತು ವಿಡಿದು ನಿಶ್ಚಿಂತದಿ ಘನ|ವಿ| ಶ್ರಾಂತಿ ಪಡೆದು ಅನಂತನ ಪಾಡುತ2
ಭಕುತಿಯ ಸವಿಸಾರವೆಲ್ಲಾ|ಬಲ್ಲವನೇ ಬಲ್ಲಾ| ಮುಕುತಿಯೊಳಗೆ ಸುಖವಲ್ಲಾ| ಪ್ರಕಟದಿ ಮಹಿಪತಿ ಮಗುವಿಗೆ ಭೋಧಿಸಿ| ತಗಬಗಿ ಬಿಡಿಸಿದ ನಗೆ ಮೊಗದಿಂದ3
****