Showing posts with label ಮುಟ್ಟಬೇಡಿ ಮುಟ್ಟಬೇಡಿ ಮುರಹರನ ದಾಸರನು neleyadikeshava MUTTABEDI MUTTABEDI MURAHARANA DAASARANU. Show all posts
Showing posts with label ಮುಟ್ಟಬೇಡಿ ಮುಟ್ಟಬೇಡಿ ಮುರಹರನ ದಾಸರನು neleyadikeshava MUTTABEDI MUTTABEDI MURAHARANA DAASARANU. Show all posts

Saturday, 4 December 2021

ಮುಟ್ಟಬೇಡಿ ಮುಟ್ಟಬೇಡಿ ಮುರಹರನ ದಾಸರನು ankita neleyadikeshava MUTTABEDI MUTTABEDI MURAHARANA DAASARANU



ಮುಟ್ಟಬೇಡಿ ಮುಟ್ಟಬೇಡಿ ಮುರಹರನ ದಾಸರನು ಪ

ಕಟ್ಟು ಮಾಡಿದ ಯಮನು ತನ್ನ ದೂತರಿಗೆ ಅ


ತಿರುಮಣಿ ತಿರುಚೂರ್ಣ ಶೃಂಗಾರ ಧರಿಸುವರಸಿರಿತುಳಸಿ ವನಮಾಲೆಯಿಂದೊಪ್ಪುವವರತಿರುಮಂತ್ರ ತೀರ್ಥಪ್ರಸಾದಕೊಳಗಾದವರತಿರುಪತಿ ಯಾತ್ರೆಯನು ಮಾಡುವ ಮಹಾತ್ಮರ 1


ಬಡವರಾಗಲಿ ಭಾಗ್ಯವಂತರಾಗಲಿ ಅವರುಕಡು ಕರ್ಮಿ ಘೋರಪಾತಕರಾಗಲಿನಡೆನುಡಿಗೆ ಮಾಧವನ ಬಿಡದೆ ಕೊಂಡಾಡುವರಗೊಡವೆ ಬೇಡೆಂದು ಯಮಧರ್ಮ ಸಾರಿದನು 2


ವಾಸುದೇವನ ವಾಸರವನಾಚರಿಸುವವರಬೇಸರಿಸದೆ ಹರಿಪ್ರಸಂಗ ಮಾಳ್ಪವರಶೇಷಶಯನ ಕಾಗಿನೆಲೆಯಾದಿಕೇಶವನದಾಸಾನುದಾಸರಿಗೆ ದಾಸರಾದವರ3

***

Muṭṭabēḍa muṭṭabēḍa muraharana dāsaranu ||pa||


kaṭṭu māḍida yamanu tanna dūtarige||a.Pa||


tirumaṇi tirucūrṇa śr̥ṅgāra dharisuvara

siri tuḷasi vanamāleyindoppuva

varatirumantra tīrthaprasādakoḷagādavara

tirupati yātreyanu māḍuva mahātmara ||1||


baḍavarāgali bhāgyavantarāgali avaru

kaḍu karmi ghōrapātakarāgali naḍe

nuḍige mādhavana biḍade koṇḍāḍu vara

goḍave bēḍendu yamadharma sāridanu ||2||


vāsudēvana vāsaravanācarisuva

vara bēsarisade hari prasaṅga māḷpavara

śēṣaśayana kāgineleyādi

kēśavanadāsānudāsarige dāsarādavara||3||

***