Showing posts with label ಏಳಯ್ಯ ಮಹಾರಾಜ ಬೆಳಗಾಯಿತೇಳಯ್ಯ ರಂಗ ಬಾ rajesha hayamukha ELAYYA MAHARAJA BELAGAAYITELAYYA RANGA BAA. Show all posts
Showing posts with label ಏಳಯ್ಯ ಮಹಾರಾಜ ಬೆಳಗಾಯಿತೇಳಯ್ಯ ರಂಗ ಬಾ rajesha hayamukha ELAYYA MAHARAJA BELAGAAYITELAYYA RANGA BAA. Show all posts

Thursday, 5 August 2021

ಏಳಯ್ಯ ಮಹಾರಾಜ ಬೆಳಗಾಯಿತೇಳಯ್ಯ ರಂಗ ಬಾ ankita rajesha hayamukha ELAYYA MAHARAJA BELAGAAYITELAYYA RANGA BAA


ರಾಗ : ಚಕ್ರವಾಕ    ಖಂಡಛಾಪು Vidwan.Sumukha Maudgalya 


kruti by ವಿಶ್ವೇಂದ್ರತೀರ್ಥರು vishwendra teertharu, pontiff of sode mutt (1881-1943)

(ಶ್ರೀವಿಶ್ವವಲ್ಲಭ ತೀರ್ಥರ ಪರಮ ಗುರುಗಳು)


ಏಳಯ್ಯ ಮಹಾರಾಜ ಬೆಳಗಾಯಿತೇಳಯ್ಯ ರಂಗ ಬಾ ಬಾ (ಪ)


ಬಾಗಿಲಲಿ ಕೂಗುವರು ಸನಕಾದಿ ಮುನಿವರರು

ನಾಗಭೂಷಣನು ಕೈಮುಗಿದು ನಿಂತ |

ಜಾಗರವ ಮಾಡಿರ್ಪ ಸುರರೆಲ್ಲ ಬಂದಾಯ್ತು

ಯೋಗಿಗಳು ಪೊಗಳುವರು ನಿನ್ನಂಘ್ರಿಯ  ೧


ಲಂಕೆಯನು ಬಿಟ್ಟು ವಿಭೀಷಣನು ನಿಂತಿರ್ದ

ಗಂಗೆಯನು ಬಿಟ್ಟೇಳು ಜಗದೀಶನೆ |

ತಂಗಿಯನು ಬೇಡುವರೆ ಭಾವ ಪಾರ್ಥನು ಬಂದ

ಮಂಗಳದ ನುಡಿ ನಿನಗೆ ಕೇಳಲಿಲ್ಲವೊ ಹರಿಯೆ  ೨


ಪುಟ್ಟಾದ ಮುನಿ ಬಂದನಿಷ್ಟ ಭೀಮನು ಬಂದ

ಥಟ್ಟನೆ ಏಳು ಯಾದವರಿಗರಸ |

ಸೃಷ್ಟಿಗೊಡೆಯನೆ ಕೇಳು ಭೂಸುರನು ರುಕ್ಮಿಣಿಯ

ಪುಟ್ಟ ವಾಲೆಯ ತಂದ ನೀ ನೋಡು ನೋಡು  ೩


ಕೋಪಿಗಳರಸಾದಿ ದುರ್ವಾಸ ಮುನಿ ಬಂದ |

ಇಂಪಾಗಿ ಪಾಡುತಿಹ ಸುರಮುನಿಯು ಬಂದ |

ಕೋಪದೊಳೊದೆದ ಮುನಿ ಬಂದ ಬೇಗೇಳು

ಪುಷ್ಪಶರ ಮಗ ಬಂದ ಬೇಗೇಳು ರಂಗ  ೪


ಸಿರಿದೇವಿ ನಿನ್ನಂಘ್ರಿಗಳನೊತ್ತ ಬಿಡಳೇನೊ |

ಮಾರುತಿಯ ಜಪವಿನ್ನು ಮುಗಿಯಲಿಲ್ಲೊ |

ಕರುಣದಿಂದಲಿ ಕಾಯೋ ರಾಜೇಶ ಹಯಮುಖನೆ

ನರರೆಲ್ಲ ನಗುವಂತೆ ಮಾಡದಿರೊ ರಂಗ  ೫

***


ಏಳಯ್ಯ ಮಹಾರಾಜ ಬೆಳಗಾಯಿತೇಳಯ್ಯ ರಂಗ ಬಾ ಪ


ಬಾಗಿಲಲಿ ಕೂಗುವರು ಸನಕಾದಿ ಮುನಿವರರು

ನಾಗಭೂಷಣನು ಕೈಮುಗಿದು ನಿಂತ |

ಜಾಗರವ ಮಾಡಿರ್ಪ ಸುರರೆಲ್ಲ ಬಂದಾಯ್ತು

ಯೋಗಿಗಳು ಪೊಗಳುವರು ನಿನ್ನಂಘ್ರಿಯ 1


ಲಂಕೆಯನು ಬಿಟ್ಟು ವಿಭೀಷಣನು ನಿಂತಿರ್ದ

ಗಂಗೆಯನು ಬಿಟ್ಟೇಳು ಜಗದೀಶನೆ |

ತಂಗಿಯನು ಬೇಡುವರೆ ಭಾವ ಪಾರ್ಥನು ಬಂದ

ಮಂಗಳದ ನುಡಿ ನಿನಗೆ ಕೇಳಲಿಲ್ಲವೊ ಹರಿಯೆ 2


ಪುಟ್ಟಾದ ಮುನಿ ಬಂದನಿಷ್ಟ ಭೀಮನು ಬಂದ

ಥಟ್ಟನೆ ಏಳು ಯಾದವರಿಗರಸ |

ಸೃಷ್ಟಿಗೊಡೆಯನೆ ಕೇಳು ಭೂಸುರನು ರುಕ್ಮಿಣಿಯ

ಪುಟ್ಟ ವಾಲೆಯ ತಂದ ನೀ ನೋಡು ನೋಡು 3


ಕೋಪಿಗಳರಸಾದಿ ದುರ್ವಾಸ ಮುನಿ ಬಂದ |

ಇಂಪಾಗಿ ಪಾಡುತಿಹ ಸುರಮುನಿಯು ಬಂದ |

ಕೋಪದೊಳೊದೆದ ಮುನಿ ಬಂದ ಬೇಗೇಳು

ಪುಷ್ಪಶರ ಮಗ ಬಂದ ಬೇಗೇಳು ರಂಗ 4


ಸಿರಿದೇವಿ ನಿನ್ನಂಘ್ರಿಗಳನೊತ್ತ ಬಿಡಳೇನೊ |

ಮಾರುತಿಯ ಜಪವಿನ್ನು ಮುಗಿಯಲಿಲ್ಲೊ |

ಕರುಣದಿಂದಲಿ ಕಾಯೋ ರಾಜೇಶ ಹಯಮುಖನೆ

ನರರೆಲ್ಲ ನಗುವಂತೆ ಮಾಡದಿರೊ ರಂಗ 5

***