Showing posts with label ಗಿರಿರಾಜ ಚಿತ್ತ ಉದಾರ ಜೀಯಾ ನಾ ನಿನ್ನ ಪಾದ vyasa vittala GIRIRAJA CHITTA UDAARA JIYA NAA NINNA PAADA. Show all posts
Showing posts with label ಗಿರಿರಾಜ ಚಿತ್ತ ಉದಾರ ಜೀಯಾ ನಾ ನಿನ್ನ ಪಾದ vyasa vittala GIRIRAJA CHITTA UDAARA JIYA NAA NINNA PAADA. Show all posts

Wednesday, 16 October 2019

ಗಿರಿರಾಜ ಚಿತ್ತ ಉದಾರ ಜೀಯಾ ನಾ ನಿನ್ನ ಪಾದ ankita vyasa vittala GIRIRAJA CHITTA UDAARA JIYA NAA NINNA PAADA

Audio by Mrs. Nandini Sripad

ಶ್ರೀ ವಿಜಯದಾಸರ ಕೃತಿ 

 ರಾಗ ಆನಂದಭೈರವಿ           ಆದಿತಾಳ 

ಗಿರಿರಾಜ ಚಿತ್ತ ಉದಾರ ಜೀಯಾ । ನಾ ನಿನ್ನ ಪಾದ - ।
ಕ್ಕೆರಗಿ ಯಾಚಿಸುತಲೆ ಮುಗಿವೆನು ಕೈಯ್ಯಾ । ನೆರೆ ನಂಬಿದವರನು ।
ಎರವು ಮಾಡಲು ನಿನಗೊಳಿತೇನಯ್ಯಾ । ಪಿಡಿ ಬೇಗನೆ ಕೈಯ್ಯ ॥ 
ಕರುಣಿಗಳರಸನೆ ಕಾಮಿತ ಫಲದನೆ । 
ಕರಿರಾಜನ ಭೀಕರ ಹರ , ವೇಂಕಟ ॥ ಪ ॥

ಆಪಾರ ಮಹಿಮಾ ಆಪದ್ಬಂಧೋ । ಆಪನ್ನರ ಪಾಲಿಪ ।
ವ್ಯಾಪಾರ ನಿನಗಲ್ಲದೆ ಮತ್ತೊಂದು । ಕಾಣೆನು ಜಗದೀ ।
ಭೂಪಾನೆ ಭೂಮ್ನಾ ಗುಣಗಣಸಿಂಧೋ । ಸ್ವಾಮಿಯೆ ಎನಗಿಂದು ॥
ಪಾಪಾದ ಪರ್ವತ ಲೇಪವಾಗದಂ -
ತೀ ಪರಿಪಾಲಿಸು ಶ್ರೀಪತಿ ಅಂಜನ ॥ 1 ॥

ಕಲಿಯುಗದೊಳಗೀ ಪರ್ವತಕೆಲ್ಲಿ । ಸರಿಗಾಣೆನು ಯೆಂದು ।
ನೆಲಸಿದೆ ನೀನೆ ಈ ಸ್ಥಳದಲ್ಲಿ । ವೈಕುಂಠಕಿಂತ ।
ನೆಲೆಯು ವೆಗ್ಗಳವೆಂದು ನೀ ಬಲ್ಲೀ । ಆದ ಕಾರಣ ಇಲ್ಲೀ ॥
ಜಲಜ ಭವಾದ್ಯರು ಒಲಿದೊಲಿದೊಲಿಯುತ
ತಲೆದೂಗುವರಯ್ಯಾ ಭಳಿರೆ ಕಾಂಚನ ॥ 2 ॥

ತರುಜಾತಿ ಮೃಗಪಕ್ಷಿಗಳಾಕಾರ । ಮೊದಲಾದ ರೂಪದಿ |
ಸುರರು ಕಿನ್ನರರು ತಮ್ಮ ಪರಿವಾರ । ಒಡಗೂಡಿ ನಿನ್ನ ।
ಚರಣಾರಾಧನೆ ಮಾಡಿದ ವಿಸ್ತಾರ । ಈ ಬಗೆ ಶೃಂಗಾರ ॥
ದೊರೆತನ ಠೀವಿಗೆ ಧರಣಿ ಮಂಡಲದಿ
ಸರಿಗಾಣೆನೊ ಹೇ ತಿರುಪತಿ ವೇಂಕಟ ॥ 3 ॥

ಹದಿನಾಲ್ಕು ಲೋಕದ ಭಾಗ್ಯಗಳೆಲ್ಲ । ಅಮರರ ತತಿಗೆ ಕೊಟ್ಟ ।
ವಿಧವೆಲ್ಲಾ ಪ್ರತ್ಯಕ್ಷವು ಪುಸಿಯೆಲ್ಲ । ನಾನವರ ನೋಡೆ ।
ಅಧಮಾಧಮನು ನೀನೆ ಬಲ್ಲೆಲ್ಲಾ । ಎನ್ನ ಯೋಗ್ಯತದ ॥
ಹದುಳವೇನಿಹುದು ಒಡಗೂಡಿಸದಲೆ
ಒದಗಿ ಪಾಲಿಸೋ ವಸುಮತಿ ಧರ ಫಣಿ ॥ 4 ॥

ಸುವರ್ಣಮುಖರೀ ತೀರನಿವಾಸ । ನವರಾತ್ರಿಯಲ್ಲೀ ।
ಅವ ಬ್ರಹ್ಮೋತ್ಸವ ನೋಡಲು ಶ್ರೀಶ । ಸಂಪದವನಿತ್ತು ಪೊ - ।
ರೆವಾನು ಕಲುಷದ ಭಯ ಬರಲೀಸ । ಶ್ರೀ ಶ್ರೀನಿವಾಸ ॥
ಶ್ರೀವರ ಭೂಧರ ವಿಜಯವಿಠಲ ಪ -
ರಾವರೇಶ ಭೂದೇವರ ವರದ ॥ 5 ॥
*******

ಗಿರಿರಾಜ ಚಿತ್ತವುದಾರ ಜೀಯಾ | ನಾ ನಿನ್ನ ಪಾದಕ್ಕೆರಗಿ ಯಾಚಿಸುತಲಿ ಮುಗಿವೆನು ಕೈಯಾ | ನೆರೆ ನಂಬಿದವರನುಎರವು ಮಾಡಲು ನಿನಗೊಳಿತೇನಯ್ಯಾ | ಪಿಡಿ ಬೇಗ ಕೈಯಾ ಪ

ಕರುಣಿಗಳರಸನೆ ಕಾಮಿತ ಫಲದನೆ ಕರಿರಾಜನ ಭೀಕರ ಹರ ವಂಕಟ ಅ.ಪ.
ಅಪಾರ ಮಹಿಮಾ ಆಪದ್ಬಂಧೂ | ಆಪನ್ನರ ಪಾಲಿಪ ವ್ಯಾಪಾರ ನಿನಗಲ್ಲದೆ ಮತ್ತೊಂದೂ | ನಾ ಕಾಣೆನೊ ಜಗದಿಭೂಪಾನೆ ಭೂಮಾ ಗುಣ ಗಣ ಸಿಂಧೂ | ಸ್ವಾಮಿಯೆ ಸಿರಿಗೆಂದೂ ||ಪಾಪದ ಪಂಕವು ಲೇಪವಾಗದಂ | ತೀ ಪರಿಪಾಲಿಸೊ ಶ್ರೀಪತಿ ಅಂಜನ 1

ತರು ಜಾತಿ ಮೃಗಪಕ್ಷಿಗಳಾಕಾರ | ಮೊದಲಾದ ರೂಪದಿಸುರರೂ ಕಿನ್ನರರೂ ತಮ್ಮ ಪರುವಾರ | ಒಡಗೂಡಿ ನಿನ್ನಾಶರಣರ ಚರಣಾರಾಧನೆಗೆ ವಿಸ್ತಾರ | ಈ ಬಗೆ ಶೃಂಗಾರಾ ||ದೊರೆತನ ಠೀವಿಗೆ ಧರಣಿ ಮಂಡಲದಿ | ಸರಿಗಾಣೆನೊ ಹೇ ತಿರುಪತಿ ವೆಂಕಟ 2

ಹದಿನಾಲ್ಕು ಲೋಕದ ಭಾಗ್ಯವನೆಲ್ಲಾ | ಅಮರರಿಗೆ ಕೊಟ್ಟವಿಧವೆಲ್ಲಾ ಪ್ರತ್ಯಕ್ಷವು ಪುಸಿಯಲ್ಲಾ | ನಾನವರನು ನೋಡೆಅಧಮಾಧಮನು ಸರಿ ಬಲ್ಲೆಲ್ಲಾ | ಎನ್ನ ಯೋಗ್ಯ ತದಾ ||ಹದುಳವೆ ನೀವುದು ಹದಗೆಡಿಸದಲೆ | ವದಗಿ ಪಾಲಿಸು ವಸುಮತಿಧರ ಫಣಿ 3

ಕಲಿಯುಗದೊಳಗೀ ಪರ್ವತದಲ್ಲಿ | ಸರಿಗಾಣೆನೊ ಎಂದುನೆಲೆಸೀದೆ ನೀನೆ ಈ ಸ್ಥಳದಲ್ಲಿ | ವೈಕುಂಠಕಿಂತನೆಲೆಯಾ ವೆಗ್ಗಳವೆಂದು ನೀ ಬಲ್ಲಿ | ಅದ ಕಾರಣದಲ್ಲಿ ||ಜಲಜ ಭವಾದ್ಯರು ಒಲಿದೊಲಿಯುತ | ತಲೆದೂಗುವರೈ ಭಳಿರೆ ಕಾಂಚನ 4

ಸುವರ್ಣ ಮುಖರಿ ತೀರವಾಸ | ಆ ಬ್ರಹ್ಮೋತ್ಸವನವರಾತ್ರಿಯಲ್ಲಿ ನೋಡಲು ಶ್ರೀಶ | ಸಂ ಪದವಿಯನಿತ್ತುಕಾವನು ಕಲುಷದ ಭಯ ಬರಲೀಸ | ಶ್ರೀ ಶ್ರೀನಿವಾಸ ||ಶ್ರೀವರ ಭೂಧರ ವ್ಯಾಸವಿಠಲ* ಪ | ರಾವರೇಶ ಶ್ರೀ ದೇವನೆ ದೇವಾ 5
***********

check following

may not be by vijaya dasa 
ಶ್ರೀ ವಿಜಯದಾಸರ ಕೃತಿ 

 ರಾಗ ಆನಂದಭೈರವಿ    ಆದಿತಾಳ 

ಗಿರಿರಾಜ ಚಿತ್ತ ಉದಾರ ಜೀಯಾ । ನಾ ನಿನ್ನ ಪಾದ - ।
ಕ್ಕೆರಗಿ ಯಾಚಿಸುತಲೆ ಮುಗಿವೆನು ಕೈಯ್ಯಾ । ನೆರೆ ನಂಬಿದವರನು ।
ಎರವು ಮಾಡಲು ನಿನಗೊಳಿತೇನಯ್ಯಾ । ಪಿಡಿ ಬೇಗನೆ ಕೈಯ್ಯ ॥ ಪ ॥
ಕರುಣಿಗಳರಸನೆ ಕಾಮಿತ ಫಲದನೆ । 
ಕರಿರಾಜನ ಭೀಕರ ಹರ , ವೇಂಕಟ ॥ ಅ ಪ ॥

ಆಪಾರ ಮಹಿಮಾ ಆಪದ್ಬಂಧೋ । ಆಪನ್ನರ ಪಾಲಿಪ ।
ವ್ಯಾಪಾರ ನಿನಗಲ್ಲದೆ ಮತ್ತೊಂದು । ನಾ ಕಾಣೆನೊ ಜಗದೀ ।
ಭೂಪಾನೆ ಭೂಮ್ನಾ ಗುಣಗಣಸಿಂಧೋ । ಸ್ವಾಮಿಯೆ ಎನಗಿಂದು ॥
ಪಾಪಾದ ಪಂಕವು ಲೇಪವಾಗದಂ -
ತೀ ಪರಿಪಾಲಿಸು ಶ್ರೀಪತಿ ಅಂಜನ ॥ 1 ॥

ಕಲಿಯುಗದೊಳಗೀ ಪರ್ವತಕೆಲ್ಲಿ । ಸರಿಗಾಣೆನು ಯೆಂದು ।
ನೆಲಸಿದೆ ನೀನೆ ಈ ಸ್ಥಳದಲ್ಲಿ । ವೈಕುಂಠಕಿಂತ ।
ವೆಲೆಯು ವೆಗ್ಗಳವೆಂದು ನೀ ಬಲ್ಲೀ । ಆದ ಕಾರಣ ಇಲ್ಲೀ ॥
ಜಲಜ ಭವಾದ್ಯರು ಒಲಿದೊಲಿದೊಲಿಯುತ
ತಲೆದೂಗುವರಯ್ಯಾ ಭಳಿರೆ ಕಾಂಚನ ॥ 2 ॥

ತರುಜಾತಿ ಮೃಗಪಕ್ಷಿಗಳಾಕಾರ । ಮೊದಲಾದ ರೂಪದಿ |
ಸುರರು ಕಿನ್ನರರು ತಮ್ಮ ಪರಿವಾರ । ಒಡಗೂಡಿ ನಿನ್ನ ।
ಚರಣಾರಾಧನೆ ಮಾಡಿದ ವಿಸ್ತಾರ । ಈ ಬಗೆ ಶೃಂಗಾರ ॥
ದೊರೆತನ ಠೀವಿಗೆ ಧರಣಿ ಮಂಡಲದಿ
ಸರಿಗಾಣೆನೊ ಹೇ ತಿರುಪತಿ ವೇಂಕಟ ॥ 3 ॥

ಹದಿನಾಲ್ಕು ಲೋಕದ ಭಾಗ್ಯಗಳೆಲ್ಲ । ಅಮರರ ತತಿಗೆ ಕೊಟ್ಟ ।
ವಿಧವೆಲ್ಲಾ ಪ್ರತ್ಯಕ್ಷವು ಪುಸಿಯೆಲ್ಲ । ನಾನವರ ನೋಡೆ ।
ಅಧಮಾಧಮನು ನೀನೆ ಬಲ್ಲೆಲ್ಲಾ । ಎನ್ನ ಯೋಗ್ಯತದ ॥
ಹದುಳವೇನಿಹುದು ಒಡಗೂಡಿಸುತಲೆ
ಒದಗಿ ಪಾಲಿಸೋ ವಸುಮತಿ ಧರ ಫಣಿ ॥ 4 ॥

ಸುವರ್ಣಮುಖರೀ ತೀರನಿವಾಸ । ನವರಾತ್ರಿಯಲ್ಲೀ ।
ಅವ ಬ್ರಹ್ಮೋತ್ಸವ ನೋಡಲು ಶ್ರೀಶ । ಸಂಪದವನಿತ್ತು ಪೊ - ।
ರೆವಾನು ಕಲುಷದ ಭಯ ಬರಲೀಸ । ಶ್ರೀ ಶ್ರೀನಿವಾಸ ॥
ಶ್ರೀವರ ಭೂಧರ ವಿಜಯವಿಠಲ ಪ -
ರಾವರೇಶ ಭೂದೇವನ ವರದ ॥ 5 ॥
**********