Showing posts with label ಎಂದು ಪಿಡಿಯುವಿ ಕೈಯ್ಯ ಇಂದಿರೇಶ ಚಲುವ ಕೃಷ್ಣನೆ krishnavittala. Show all posts
Showing posts with label ಎಂದು ಪಿಡಿಯುವಿ ಕೈಯ್ಯ ಇಂದಿರೇಶ ಚಲುವ ಕೃಷ್ಣನೆ krishnavittala. Show all posts

Monday 2 August 2021

ಎಂದು ಪಿಡಿಯುವಿ ಕೈಯ್ಯ ಇಂದಿರೇಶ ಚಲುವ ಕೃಷ್ಣನೆ ankita krishnavittala

ಯೆಂದು ಪಿಡಿಯುವಿ ಕೈಯ್ಯ

ಇಂದಿರೇಶ ಚಲುವ ಕೃಷ್ಣನೆ ಪ


ಮುಂದೆ ಹೋಗಲು ಬಂಧಮಾಡುತ

ಕುಂದು ಅಳಿಯುತ ತಂದೆ ದಯೆತೊರಿ ಅ.ಪ


ಒಂದು ಅರಿಯದ ಮಂದ ನಾನಯ್ಯ

ಕಂದಿ ಕುಂದಿದೆ ಭವದಿ ಕೇಳಯ್ಯ

ಬಂಧು ಬಳಗವು ಯಾರು ಇಲ್ಲಯ್ಯ

ನಿಂದು ಮುಂದಿನ ದಾರಿ ನಡೆಸಯ್ಯ ಜೀಯಾ

ಅಂದು ಸಭೆಯೊಳು ಮಂದಗಮನೆಯ

ಒಂದು ನೊಡದೆ ಬಂದು ಸಲಹಿದ

ಸಿಂಧು ಶಯನಾನಂದ ಮೂರುತಿ

ನಂದನಂದನ ಶ್ಯಾಮಸುಂದರ

ಬಂಧು ಸರ್ವರ ಬಂಧಮೋಚಕ

ಮಂದರಾದ್ರಿ ಧರನೆ ಯದುಕುಲ

ಚಂದ್ರ ಶೋಭಾಸಾಂದ್ರ ಕೃಷ್ಣನೆ

ಬಂದು ಚಂದದಿ ಸಲಹಿ ಎನ್ನನು 1


ಬಾಲತನದಲ್ಲಿ ಲೀಲೆಗೋಷ್ಠಿಲಿ ಮೆರೆದೆ ನಾನಲ್ಲಿ

ಮೇಲೆ ಯೌವನ ಒಡನೆ ಬಂತಲ್ಲಿ

ಲಲನೆ ಕೇಳಿಲಿ ಮುಳುಗಿ ಹೋದೆನು ಅಲ್ಲಿ

ಮೆಲ್ಲಮೆಲ್ಲನೆ ಮುಪ್ಪು ಬಂತಲ್ಲಿ

ಕಾಲಕಳೆದೆನು ಪಗಡೆ ಜೂಜಿನಲಿ

ಮಲ್ಲಮರ್ದನ ಮಾತುಲಾಂತಕ

ಚಲ್ವಸೂಕರ ಪುಲ್ಲಲೊಚನ

ಪುಲ್ಲನಾಭನೆನಲ್ಲ ಸರ್ವರ ಬಿಂಬರೂಪನೆ

ಎಲ್ಲ ಕಾಲದಿ ಎಲ್ಲಮಾಡುತ ನಿಲ್ಲದೆಜಗ

ವೆಲ್ಲಸಲಹುವ ಎಲ್ಲ ವೇದದ ಸಾರ ಶ್ರೀ

ನಲ್ಲ ನಿನ್ನಯ ಎಲ್ಲ ಬಲ್ಲವರಿಲ್ಲ ಎಲ್ಲಿಯೂ

ಚಲ್ವನಾರಿ ವೇಷಧಾರಿಯೆ ಬುದ್ಧ ಕಲ್ಕಿಯೆ

ಸೊಲ್ಲು ಲಾಲಿಸಿ ಒಲಿದು ಬಂದ ನಾರಸಿಂಹನೆ

ಇಲ್ಲ ಸಮರು ಅಧಿಕರೈಯ್ಯ ಪೂರ್ಣದೇವನೆ2


ಮೂರು ತಾಪವ ಹರಿಪ ಬಗೆಯೇನೋ

ವೈರಿ ಆರರ ಭರದಿ ತರಿ ನೀನೂ

ಮೂರು ಋಣಗಳು ಉಳಿಯೆಗತಿಯೇನು

ಮೂರು ಕರ್ಮದಿ ಬಿಡಿಸಿ ಹೊರೆಯನ್ನು ಭಕ್ತಸುರಧೇನು

ಸಾರಸಜ್ಜನ ಪ್ರಾಪ್ಯ ಶುಭಗುಣ

ಸಾರ ಕರುಣಾ ಪೂರ್ಣವಾರಿಧಿ

ಮಾರಜನಕನೇ ಋಷಭಮಹಿದಾಸ

ತೋರು e್ಞÁನವ ಬಾದರಾಯಣ

ಮೀರಲಾರೆನು ವಿಷಯವಾಸನೆ

ಭಾರತೀಶನ ಒಡೆಯ ಕೃಷ್ಣನೆ

ಭಾರ ನಿನ್ನದು ಎನ್ನ ಪೊರೆವದು

ಶೂರ ಭಾರ್ಗವ ಮತ್ಸ್ಯ ವಾಮನ

ಧೀರ ಧೃವನಾ ಪೊರೆದ ವರದನೆ

ಬೀರಿ ಭಕ್ತಿ e್ಞÁನ ವೈರಾಗ್ಯ 3


ಎನ್ನ ಯೋಗ್ಯತೆ ನೋಡಿ ಫಲವೇನು

ನಿನ್ನ ಘನತೆ ತೋರಿ ಪೊರೆ ನೀನು

ನಿನ್ನ ದಾಸನ ಮಾಡು ಎನ್ನನ್ನು

ಅನ್ಯಹಾದಿಯ ಕಾಣೆ ನಾ ನಿನ್ನು

ಬೆನ್ನು ಬಿದ್ದೆನು ಇನ್ನೂಮುನ್ನೂ

ಮಾನ್ಯ ಮಾಧವ ವಿಶ್ವ ತೈಜಸ

ಪ್ರಾಜ್ಞತುರಿಯ ಹಂಸ ವಿಷ್ಣುವೇ

e್ಞÁನ ಭೋಧಕ ಸನತ್ಕುಮಾರನೇ

ಮೌನಿ ದತ್ತಾತ್ರೇಯ ಹಯಮುಖ

ದೀನವತ್ಸಲ ಯಜ್ಞ ಧನ್ವಂತ್ರಿ

ಶ್ರೀನಿವಾಸ ರಾಮ ಕಪಿಲನೆ

e್ಞÁನ ನಿಧಿ ಮುನಿ ನಾರಾಯಣನೆ

ನೀನೆ ಅನಿರುದ್ಧಾದಿ ರೂಪನು

ಧ್ಯಾನಗೊಚರ ಶಿಂಶುಮಾರನೆ

ಸಾನುಕೂಲದಿ ನೀನೆ ವಲಿಯುತ

ಊನ ಮಾಡಿಸಿ ಕರ್ಮ ಸಂಚಯ4


ಆದಪೊದ ಮಾತು ಏಕ್ಕಯ್ಯ

ಮಧ್ವರಾಯರ ಪ್ರೀಯ ಶೃತಿಗೇಯ

ಮೋದದಾಯಕ ಮುಂದೆ ಸಲಹೈಯ್ಯ

ಪಾದಪದ್ಮದಿ ಶರಣು ಅಲ್ಲದೆ ಏನು ಮಾಡಲಿ ಜೀಯ ಅಯ್ಯ

ತಿದ್ದಿ ಮನವನು ಕದ್ದು ಅಘವನು

ಒದ್ದು ಲಿಂಗವ ಶುದ್ಧe್ಞÁನದ

ಸಾಧು ಜಯಮುನಿ ವಾಯುವಂತರ

ಮಾಧವ ಶ್ರೀ ಕೃಷ್ಣವಿಠಲನೆ

ಪಾದ ಮಧುಪರ ವೃಂದ ಮಧ್ಯದಿ

ವೇದ ಸಮ್ಮತ ಗಾನ ಸುಧೆಯನು

ಶುದ್ಧಭಕ್ತಿ e್ಞÁನದೊಡಗೂಡಿ

ಮೆದ್ದು ಪಾಡುತ ಕುಣಿವ ಭಾಗ್ಯವ

ಮುದ್ದು ಕೃಷ್ಣನೆ ನೀನೆ ಎನಗಿತ್ತು 5

****