Showing posts with label ಕಮಲೇಶ ನಿನ್ನ ವಿಮಲಯುಗಳ ಪಾದ prasannavenkata. Show all posts
Showing posts with label ಕಮಲೇಶ ನಿನ್ನ ವಿಮಲಯುಗಳ ಪಾದ prasannavenkata. Show all posts

Monday, 11 November 2019

ಕಮಲೇಶ ನಿನ್ನ ವಿಮಲಯುಗಳ ಪಾದ ankita prasannavenkata

by ಪ್ರಸನ್ನವೆಂಕಟದಾಸರು
ಕಮಲೇಶ ನಿನ್ನ ವಿಮಲಯುಗಳ ಪಾದ ಕಮಲಕೆ ಅಮರರುಭ್ರಮರಗಳು ಪ. 

ಅತಿಸುವಟು ರೂಪದಿ ವಿತರಣ ಬೇಡಲುಕ್ರತದೆಡೆ ಮೂರಡಿಕ್ಷಿತಿನೋಡೆಅತುಳಚರಿತ ವಸುಮತಿಯನಳೆಯುತಲಿದ್ವಿತಿಯ ಪದಕೆ ಅಬ್ಧಿಸತಿಯ ಪಡೆದ ಪಾದಕೆ 1

ಹಲವು ಕಾಲವು ತನ್ನ ನಲ್ಲನ ಶಾಪದಿ ಅಹಲ್ಯೆಯು ತಾನಿಳೆಯಲ್ಲಿ ಕಲ್ಲಾಗಿರಲುಸುಲಭದಿ ಭಕ್ತರ ಸಲಹುವ ಬಿರುದಿಗೆಲಲನೆಯ ಮಾಡಿದ ಸುಲಲಿತ ಪಾದಕೆ 2

ಚಿನ್ನತನದೊಳೆ ಉನ್ನತ ಭಕ್ತ ಧ್ರುವನ್ನ ದೃಢಮತಿಯನ್ನೆ ಕಂಡುತನ್ನ ಕರುಣದಿ ಪಾವನ ಪದವಿತ್ತ ಪ್ರಸನ್ನ ವೆಂಕಟೇಶನ ಶ್ರೀಪಾದಕೆ 3
*******