Monday, 11 November 2019

ಕಮಲೇಶ ನಿನ್ನ ವಿಮಲಯುಗಳ ಪಾದ ankita prasannavenkata

by ಪ್ರಸನ್ನವೆಂಕಟದಾಸರು
ರಾಗ - : ತಾಳ -

ಕಮಲೇಶ ನಿನ್ನ ವಿಮಲ ಯುಗಳ ಪಾದ
ಕಮಲಕೆ ಅಮರರು ಭ್ರಮರಗಳು ll ಪ ll

ಅತಿಸುವಟು ರೂಪದಿ ವಿತರಣ ಬೇಡಲು
ಕ್ರತದೆಡೆ ಮೂರಡಿ ಕ್ಷಿತಿ ನೋಡೆ 
ಅತುಳ ಚರಿತ ವಸುಮತಿಯನಳೆಯುತಲಿ 
ದ್ವಿತಿಯ ಪದಕೆ ಅಬ್ಧಿಸತಿಯ ಪಡೆದ ಪಾದಕೆ ll 1 ll

ಹಲವು ಕಾಲವು ತನ್ನ ನಲ್ಲನ ಶಾಪದಿ ಅ
ಹಲ್ಯೆಯು ತಾನಿಳೆಯಲ್ಲಿ ಕಲ್ಲಾಗಿರಲು
ಸುಲಭದಿ ಭಕ್ತರ ಸಲಹುವ ಬಿರುದಿಗೆ
ಲಲನೆಯ ಮಾಡಿದ ಸುಲಲಿತ ಪಾದಕೆ ll 2 ll

ಚಿನ್ನತನದೊಳೆ ಉನ್ನತ ಭಕ್ತ ಧ್ರು
ವನ್ನ ದೃಢಮತಿಯನ್ನೆ ಕಂಡು
ತನ್ನ ಕರುಣದಿ ಪಾವನ ಪದವಿತ್ತ ಪ್ರ
ಸನ್ನ ವೆಂಕಟೇಶನ ಶ್ರೀಪಾದಕೆ ll 3 ll
***

ಕಮಲೇಶ ನಿನ್ನ ವಿಮಲಯುಗಳ ಪಾದ ಕಮಲಕೆ ಅಮರರುಭ್ರಮರಗಳು ಪ. 

ಅತಿಸುವಟು ರೂಪದಿ ವಿತರಣ ಬೇಡಲುಕ್ರತದೆಡೆ ಮೂರಡಿಕ್ಷಿತಿನೋಡೆಅತುಳಚರಿತ ವಸುಮತಿಯನಳೆಯುತಲಿದ್ವಿತಿಯ ಪದಕೆ ಅಬ್ಧಿಸತಿಯ ಪಡೆದ ಪಾದಕೆ 1

ಹಲವು ಕಾಲವು ತನ್ನ ನಲ್ಲನ ಶಾಪದಿ ಅಹಲ್ಯೆಯು ತಾನಿಳೆಯಲ್ಲಿ ಕಲ್ಲಾಗಿರಲುಸುಲಭದಿ ಭಕ್ತರ ಸಲಹುವ ಬಿರುದಿಗೆಲಲನೆಯ ಮಾಡಿದ ಸುಲಲಿತ ಪಾದಕೆ 2

ಚಿನ್ನತನದೊಳೆ ಉನ್ನತ ಭಕ್ತ ಧ್ರುವನ್ನ ದೃಢಮತಿಯನ್ನೆ ಕಂಡುತನ್ನ ಕರುಣದಿ ಪಾವನ ಪದವಿತ್ತ ಪ್ರಸನ್ನ ವೆಂಕಟೇಶನ ಶ್ರೀಪಾದಕೆ 3
***

No comments:

Post a Comment