Showing posts with label ನಿಗಮ ತಂದುಸುವುಸಿ ಜಗದೊಳಗೆ mahipati. Show all posts
Showing posts with label ನಿಗಮ ತಂದುಸುವುಸಿ ಜಗದೊಳಗೆ mahipati. Show all posts

Wednesday, 1 September 2021

ನಿಗಮ ತಂದುಸುವುಸಿ ಜಗದೊಳಗೆ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ನಿಗಮ ತಂದುಸುವುಸಿ ಜಗದೊಳಗೆ pa 


ನಗ ಬೆನ್ನೆಲಿ ತಾಳಿದ ನೀನಾರೋ ಜಗವ ಕದ್ದೊಯಿದಸುರನ ನೀ ಕೊಂಡು ಬಗೆದು ತರಳಗೊಲಿದವ ನೀನಾರೊ 1 

ಧರಣಿ ನೀ ಮೂರಡಿಯನೆ ಮಾಡಿ ಹಿರಿಯಳ ಶಿರ ಹರಿಗಡಿದವನಾರೊ ಪರ ದೇವತೆಗಳ ಸೆರೆಯ ಬಿಡಿಸಿ ತುರುಗಳಗಾಯ್ದ ಗೋವಳ ನೀನಾರೊ 2 

ನಾರಿಯರ ವ್ರತಗಳನೆ ಹಳಿದು ಏರಿ ಹಯವನು ಸುಳಿವವನಾರೊ ತರಳ ಮಹಿಪತಿ ಮನೋಹರವ ಮಾಡಿ ಗುರುತುತೋರಿದ ಗುರು ಮಹಿಮ ನೀ ಬಾರೊ 3

***