..
kruti by ವೀರನಾರಾಯಣ Veeranarayana
ಎಷ್ಟು ಭಜಿಸಿದರು ಸಾಕಷ್ಟು ನನಗಾಗದೊ ಪ
ಕಷ್ಟ ಮೂರ್ತಿ ನೀನು ಎಷ್ಟು ತುಷ್ಟಿವಡೆದರು ಅ.ಪ.
ಅಂಗಜಪಿತ ಮೋಹನಾಂಗಚೆಂಗೊಳಲನು ನುಡಿಸುತಲಿರುವಭಂಗಿಯಲಿ ನಿನ್ನ ರೂಪಕಂಗಳಿಂದ ನೋಡಿ ನೋಡುತ 1
ಪೂರ್ಣ ಗುಣ ನಿರ್ದೋಷನೆಸುವರ್ಣಗರ್ಭ ನಿನ್ನ ಲೀಲೆವರ್ಣಿಸುತಿಹ ಕೀರ್ತನೆಯನುಕರ್ಣದಿಂದ ಕೇಳಿ ಕೇಳುತ 2
ಅಪ್ಪ ನಿತ್ಯ ಮನಕೆ ಮುದವತಪ್ಪ ನಿನ್ನ ನಾಮ ಸುಧೆಯಚಪ್ಪರಿಸುತ ನಾಲಗೆಯಲಿಒಪ್ಪಿ ಸವಿದು ಸವಿಯುತಿರಲು 3
ಅಮಮ ನಿನ್ನ ತನುವಿನಿಂದಘಮಘಮಿಸುತ ಬರುವ ಗಂಧಅಮಿತ ಮುದವ ಮೂಗಿಗಿಡಲುರಮಿಸಿ ಮೂಸಿ ನೋಡುತಿರಲು 4
ಪಾವನತರ ನಿನ್ನಡಿಯಲಿಸೇವೆಗೊಳ್ಳು ನಿರುತದಲಿಕಾವುದಯ್ಯ ಶ್ರೀ ಗದುಗಿನದೇವ ವೀರನಾರಯಣ 5
***