Showing posts with label ನಿನ್ನ ನಂಬಿದೆ ರಾಘವೇಂದ್ರನೆ ಎನ್ನ ಬಿನ್ನಪ gurushyamasundara. Show all posts
Showing posts with label ನಿನ್ನ ನಂಬಿದೆ ರಾಘವೇಂದ್ರನೆ ಎನ್ನ ಬಿನ್ನಪ gurushyamasundara. Show all posts

Thursday, 6 May 2021

ನಿನ್ನ ನಂಬಿದೆ ರಾಘವೇಂದ್ರನೆ ಎನ್ನ ಬಿನ್ನಪ ankita gurushyamasundara


ನಿನ್ನ ನಂಬಿದೆ ರಾಘವೇಂದ್ರನೆ ಎನ್ನ ಬಿನ್ನಪ ಲಾಲಿಸೊ

ಘನ್ನ ಮಹಿಮ ಮುನೀಂದ್ರ ಬೇಡುವೆ ನಿನ್ನ ಕರುಣೆಯ ಕರುಣಿಸೊ ಪ


ಏನು ಬೇಡುವುದಿಲ್ಲ ನಿನ್ನಯ ಪಾದ ಸ್ಮರಣೆಯ ನಿರುತವು

ಸಾನುರಾಗದಿ ಈಯುತೆನ್ನನು ಪಾರುಗಾಣಿಸೊ ಧರೆಯೊಳು 1

ಮೂಲರಾಮನ ಪಾದ ಭಜಕನೆ ಲೋಲ ನರಹರಿ ಪ್ರೀಯನೆ

ಕಾಲಕಾಲಕೆ ಹರಿಯ ಅನುದಿನ ಶೀಲನಾಮವ ನುಡಿಸೆಲೊ 2

ಬಲ್ಲಿದನು ನೀ ಶ್ರೀ ಪ್ರಹ್ಲಾದರಾಯನೆ ಖುಲ್ಲ ದೈತ್ಯನ ವಚನಕೆ

ಮೆಲ್ಲ ಶ್ರೀ ನರಹರಿಯ ಕಂಭದಿ ಅಲ್ಲೆ ತರಿಸುತ ತೋರಿದಿ 3

ಏಸು ನಿನ್ನಯ ಮಹಿಮೆ ಜಗದೊಳು ಸೂಸುತಿದೆ ಸದಾ ಕಾಲವು

ವ್ಯಾಸರಾಜ ಯತೀಂದ್ರ ನಿನ್ನಲಿ ದಾಸನಾ ಮತಿ ಬೇಡುವೆ 4

ತುಂಗತೀರ ವಿಹಾರ ರಾಜನೆ ಮಂಗಳಪ್ರದ ಮಹಿಮನೆ

ಹಿಂಗದೆನ್ನಯ ಪಾಪರಾಶಿಯ ಭಂಗ ಪಡಿಸುತ ಕರುಣಿಸು 5

ಮಂತ್ರ ತಂತ್ರ ವಿಚಾರ ಕೋವಿದ ಮಂತ್ರಧಾಮ ವಿಹಾರನೆ ಶ್ರೀ-

ಕಾಂತನನುದಿನ ಸೇವೆಗೈಯುವ ಧೀಮಂತ ರಾಘವ ಭಜಕನೆ 6

ಕಾಮವರ್ಜಿತ ಹೇಮಶಯ್ಯಜ ನೇಮದಿಂ ನಿನ್ನ ಸ್ಮರಿಪಗೆ

ಕಾಮಿತಾರ್ಥಗಳಿತ್ತು ಸಲಹುವಿ ಗುರುಶಾಮಸುಂದರ ಭಜಕನೆ 7

***

 ರಾಗ: [ರೇವತಿ] ತಾಳ: [ಮಿಶ್ರನಡೆ] (raga tala may differ in audio)