Showing posts with label ಪೋಗಿ ಬರುವೆ ಗೋಪ ನಾಗವೇಣಿಯರೆ ramasundara vittala POGI BARUVE GOPA NAGAVENIYARE. Show all posts
Showing posts with label ಪೋಗಿ ಬರುವೆ ಗೋಪ ನಾಗವೇಣಿಯರೆ ramasundara vittala POGI BARUVE GOPA NAGAVENIYARE. Show all posts

Friday, 23 July 2021

ಪೋಗಿ ಬರುವೆ ಗೋಪ ನಾಗವೇಣಿಯರೆ ankita ramasundara vittala POGI BARUVE GOPA NAGAVENIYARE


Audio by Mrs. Nandini Sripad

 

ಶ್ರೀ ರಾಮಸುಂದರವಿಟ್ಠಲ ದಾಸರ ಕೃತಿ 

(ರಾಮಸುಂದರವಿಟ್ಠಲ ದಾಸರ ಕಾಲ ಕ್ರಿ.ಶ 19 - 20 ನೆಯ ಶತಮಾನ. ಶ್ರೀಜಗನ್ನಾಥದಾಸರಿಂದ ಪ್ರಭಾವಿತರಾದವರು. ಸ್ಥಳ ಆದವಾನಿ) 

 ರಾಗ ಮೋಹನ           ಖಂಡಛಾಪುತಾಳ 


ಪೋಗಿ ಬರುವೆ ಗೋಪ ನಾಗವೇಣಿಯರೆ ಚ - ।

ನ್ನಾಗಿ ಮಮತೆ ಪೂರ್ಣವಾಗಿರಲಿ ॥ ಪ ॥

ಜಾಗು ಮಾಡದೆ ಮುಂದೆ ವೇಗದಿಂದಲಿ ಎನ್ನ ।

ಸಾಗೀಸೀ , ಪತಿಗಳ ಕೂಡೆ । 

ಭೋಗೀಸೀ , ತತ್ಸೇವೆ ಮಾಡಲು ॥

ಪೋಗುವುದು ಪಾಪೌಘವೆಲ್ಲವು ನೀಗುವುದು ಹೃದ್ರೋಗ ಮಂಗಳ ।

ವಾಗುವುದು ಲೇಸಾಗಿ ಹರುಷಿತರಾಗಿ ಕಳುಹಿರಿ ಈಗ ಮಧುರೆಗೆ ॥ ಅ ಪ ॥ 


ಬಾಲಕತನದಿ ನಿಮ್ಮಾಲಯವನೆ ಪೊಕ್ಕು ।

ಪಾಲು ಮೊಸರು ಬೆಣ್ಣೆ ಕದ್ದು ಮೆದ್ದು ॥

ಜಾಲದಿಂದಲಿ ನಿಮ್ಮ ಬಾಲರು ತಿಂದರೆಂ ।

ದ್ಹೇಳೀದೇ , ಮೃಷವಾಡಿ ನಾನು। 

ಬಾಳೀದೇ , ಮೇಲಿಟ್ಟ ಭಾಂಡವ ।

ಸೀಳೀದೇ , ಮಥಿಸುವ ಸುಪಾತ್ರೆಯ ।

ಕಾಲಿಲೊದ್ದು ಬೀಳ ಕೆಡಹಿದೆನೇ , ನವನೀತವನು ಮಾ ।

ರ್ಜಾಲ ಮರ್ಕಟ ಪಾಲ ಮಾಡಿದೆನೇ , ನೀವಿಟ್ಟ ಮೀಸಲ ।

ಶೀಲದಧಿ ಕೆನೆಪಾಲ ಕೆಡಿಸಿದೆನೇ , ಹೀಗುಚಿತವಲ್ಲೆಂ ॥

ದ್ಹೇಳಿದರೆ ಕೇಳದಲೆ ನಾನತಿ ಹೇಳನೆಯ ಬಲು ಧಾಳಿ ಮಾಡಲು ।

ತಾಳಿ ಎನ್ನನು ಪಾಲಿಸಿದಿರಿ ಕೃಪಾಳುಗಳ ಗುಣ ಪೇಳಲೊಶವೆ ॥ 1 ॥ 


ಫುಲ್ಲಲೋಚನೆರ ನಿಮ್ಮೆಲ್ಲರ ಮನಸು ಎ ।

ನ್ನಲ್ಲಿ ಇಟ್ಟಿರುವದ ಬಲ್ಲೆ ಕೇಳಿ ॥

ಇಲ್ಲೇ ನಿಮ್ಮನು ಬಿಟ್ಟು ಎಲ್ಲೋ ಪೋಗುವೆನೆನ್ನ ।

ಸಲ್ಲಾದೇ , ಕಾರ್ಯವೆ ಮುಖ್ಯ ।

ವಲ್ಲಾದೇ , ಬರುವೆನೆ ಅಲ್ಲಿ ।

ನಿಲ್ಲಾದೇ , ಬ್ರಹ್ಮಾಂಡದೊಳಗಾ ।

ವಲ್ಲಿ ನೆನೆಸಿದರಲ್ಲಿ ನಾನಿರುವೇ , ನಾನಿಲ್ಲದಾ ಸ್ಥಳ ।

ವಿಲ್ಲ ಜಗದೊಳಗೆಲ್ಲ ತುಂಬಿರುವೇ , ಆದರಿಸಿ ಕರೆದವ ।

ರಲ್ಲಿ ಅತಿ ತ್ವರದಲ್ಲಿ ಬರುತಿರುವೇ , ಈ ವಿಧದಿ ಪೇಳ್ವದು ॥

ಸುಳ್ಳು ಮಾತುಗಳಲ್ಲಿ ಆಗಮದಲ್ಲಿ ಪೇಳಿದ ಸೊಲ್ಲು ಎಂಬುದ ।

ರಲ್ಲಿ ಸಂಶಯವಿಲ್ಲದಲೆ ನೀವೆಲ್ಲಿ ಸ್ಮರಿಸಿದರಲ್ಲಿಗೊದಗುವೆ ॥ 2 ॥ 


ಹಿಂದಕ್ಕೆ ಒಂದಿನ ನಿಂದು ಕೊಳಲೂದೆ ಸ್ತ್ರೀ ।

ವೃಂದ ಕೇಳುತಲಿ ಆನಂದದಿಂದಾ ॥

ಅಂದು ಬರುತಿರೆ ನಿಮ್ಮ ಬಂಧುಗಳೆಲ್ಲ ನಿ ।

ರ್ಬಂಧೀಸೀ , ಬೇಡೆನ್ನಲವರ ।

ನಿಂದೀಸೀ , ಎನ್ನೊಳು ಮನಸು ।

ಪೊಂದೀಸೀ , ಬೆಳದಿಂಗಳೊಳು ತ್ವರ ।

ದಿಂದ ಎನ್ನನು ಬಂದು ಕೂಡಿದಿರೇ , ರಾಸೋತ್ಸವದಿ ।

ಧಿಂ ಧಿಂ ಧಿಮೀಧಿಮಿಕೆಂದು ಆಡಿದಿರೇ , ಕೀರ್ತಿಯನು ಪದಗತಿ ।

ಯಿಂದ ಸುಖಕರದಿಂದ ಪಾಡಿದಿರೇ , ಬಲ್ಪರಿಯಲಿ ಎ ॥

ನ್ನಿಂದ ಬಂದ ನಿಂದೆ ಕುಂದುಗಳೊಂದು ಎಣಿಸದೆ ಪೊಂದಿದಿರಿ ಎಂ ।

ತೆಂದು ಶ್ರೀರಾಮಸುಂದರವಿಟ್ಠಲಿಂದು ಮುಖಿಯರಿಗಿಂದು ಮೋದದಿ ॥ 3 ॥

****