Showing posts with label ಅರಿಯದೆ ಬಂದೆವು ಕಿಂಸನ್ purandara vittala. Show all posts
Showing posts with label ಅರಿಯದೆ ಬಂದೆವು ಕಿಂಸನ್ purandara vittala. Show all posts

Tuesday, 3 December 2019

ಅರಿಯದೆ ಬಂದೆವು ಕಿಂಸನ್ purandara vittala

ರಾಗ ಸಾರಂಗ ತ್ರಿಪುಟ ತಾಳ

ಅರಿಯದೆ ಬಂದೆವು ಕಿಂಸನ್
ಪರಿಹರಿಸಯ್ಯ ಭಂಸನ್ ||ಪ||
ಪರಿಪರಿಯಿಂದಲೆ ಹರಿ ಹರಿಯೆಂದರೆ
ದುರಿತದ ಭಯ ಒಂದಿಲ್ಲಲ್ಲಾ ||ಅ||

ಮತ್ಸ್ಯಾವತಾರಗೆ ಕಿಂಸನ್
ಕೂರ್ಮಾವತಾರಗೆ ಭಂಸನ್
ಸ್ವಚ್ಛಾನಂತನ ಸ್ಮರಣೆಯ ಮಾಡಿದರೆ
ಮೋಕ್ಷಪದವೇಕಲ್ಲಲ್ಲಾ ||

ಕನಕಾಕ್ಷ ಕೊಂದವಗೆ ಕಿಂಸನ್
ಪ್ರಹ್ಲಾದಗೆ ಒಲಿದಗೆ ಭಂಸನ್
ನಾರಾಯಣ ನಿಮ್ಮ ನಾಮವ ನೆನೆದರೆ
ನರಕದ ಭಯವೊಂದಿಲ್ಲಲ್ಲಾ ||

ಧರೆಯನಳೆದಗೆ ಕಿಂಸನ್
ಕೊಡಲಿಯ ಪಿಡಿದಗೆ ಭಂಸನ್
ಪರಿಪರಿಯಿಂದಲೆ ಹರಿಹರಿಯೆಂದರೆ
ದುರಿತದ ಭಯವೊಂದಿಲ್ಲಲ್ಲಾ ||

ರಾವಣನಳಿದಗೆ ಕಿಂಸನ್
ಗೋವಳಕೃಷ್ಣಗೆ ಭಂಸನ್
ಭಾವೆ ದ್ರೌಪದಿ ಸಭೆಯಲ್ಯಾಗಭಿ
ಮಾನವ ಕಾಯ್ದನಲ್ಲಲ್ಲಾ ||

ಬತ್ತಲೆ ನಿಂತಗೆ ಕಿಂಸನ್
ಮತ್ತಶ್ವವನೇರ್ದಗೆ ಭಂಸನ್
ಸತ್ಯದಿ ಪುರಂದರ ವಿಠಲನ ನೆನೆದರೆ
ಸತ್ಯಲೋಕವಾಯ್ತಲ್ಲಲ್ಲಾ ||
***

pallavi

ariyade bandevu kimsan pariharisayya bhamsan

anupallavi

paripariyindale hari hariyendare duritada bhaya ondillallA

caraNam 1

matsyAvatArage kimsan kUrmAvatArage bhamsan
svacchAnandana smaraNeya mADidare mOkSapadavEkallallA

caraNam 2

kanakAkSa kondavage kimsan prahlAdage olidavage bhamsan
nArAyaNa nimma nAmava nenedare narakada bhayavondillallA

caraNam 3

dhareyanaLedage kimsan koDaliya piDidage bhamsan
pariparuyindale draupadi sabheyalyAgabhi mAnava kAyidanallallA

caraNam 4

battale nintage kimsan mattashvavanErdage bhamsan
satyadi purandara viTTalana nenedare satyalOka vAidallallA
***