Showing posts with label ಕಮಲ ಸಂಭವೆ ಹಿಮನಗಜಾರಮಣ jagannatha vittala. Show all posts
Showing posts with label ಕಮಲ ಸಂಭವೆ ಹಿಮನಗಜಾರಮಣ jagannatha vittala. Show all posts

Saturday, 14 December 2019

ಕಮಲ ಸಂಭವೆ ಹಿಮನಗಜಾರಮಣ ankita jagannatha vittala

ಜಗನ್ನಾಥದಾಸರು
ಕಮಲ ಸಂಭವೆ
ಹಿಮನಗಜಾರಮಣ ಸನ್ನುತೆ
ತಮರಿಪು ಶತ ಸಮಸನ್ನಿಭೆ ಇಭ
ಇಂದಿರೆ ಶೋಭಾನೆ ಪ

ಶೃಂಗಾರ ತರಂಗ ಹೆಳಲಾ
ಬಂಗಾರವ ಪೊಂಗ್ಲಾದಿಗೆ ಬಲಿ
ವಂಗನೆ ಶಿರೋಮಂಗಳ ಮಡಿ ಜಡ ಜಂಗಮ ವ್ಯಾಪ್ತಿ
ಅಂಗಜ ಶರ ಕಂಗಳೆ ದ್ವಿಜೋ
ತ್ತುಂಗಮ ರಂಗನ ನಿಜ ಅ
ರ್ಧಾಂಗಿನಿಯೆ ಬಾ ಹಸಿಯ ಜಗುಲೀಗೆ 1

ಪೊಸುಕುಸುಮ ಶಿರಸದಲೊಪ್ಪುವ
ನೊಸಲಲಿ ರಂಜಿಸುವ ಕಸ್ತೂರಿ
ದಿಶದುಂಬಿದ ಬಿಸಿಜಾನನ ಪ್ರಭೆ
ಎಸೆವ ಕಂಧರ ಕಕ್ಕಜ ಕುಚಕು
ಪ್ಪುಸದಲ್ಲತಿ ಶೋಭಿಸುತಿಹ ಪವಳ
ದಾ ಸರವ ತೂಗುವ ಅಸಮೇ ಬಾ ಹಸೆಯ ಜಗುಲೀಗೆ 2

ಕರಿಸೊಂಡಿಲುತೆರ ಚತುರಕರ
ವರ ಅಭಯಸರಸಿಜಯುಗಧರ ಜಠರಾ
ವರತ್ರಿವಳಿ ಗಂಭೀರನಾಭಿ ಕ
ಟಸೂತರೆ ಹೇಮಾಂಬರೆ
ಚರಣಂದಿಗಿ ಸಪಳಿ ಪೊಂಗೆಜ್ಜೆಯಾ
ಮೆರೆಯುತ ಸರಸಳೆ ಬಾಹಸಿಯ ಜಗುಲೀಗೆ 3

ಮೃಗಲಾಂಛನೆ ಮಿಗೆ ಶೋಭಿಪ ಪದ
ನಖ ಪಂಕ್ತಿಗಳೊಪ್ಪುವ ಗತ
ಅಗಣಿತ ಮಹಿಮಳೆ ಸುಗುಣ ಸಂಪನ್ನೆ
ಭಗವಂತನ ಜಘನದಿ ಪೊಳೆಯುತ
ಖಗರಾಜನ ಪೆಗಲನೇರಿ ಅಮ
ರ ಗಣವ ಚಿರ ಬಾ ಹಸಿಯ ಜಗಲೀಗೆ 4

ಅಂಭೃಣಿ ಸ್ವಾಯಂಭೂ ಸುರ ನಿಕು
ರುಂಬಕರ ಅಂಬುಜ ಪೂಜಿತೆ
ನಂಬಿದ ಜನರ್ಹಂಬಲಿಸುವ ಫಲ
ಸಂಭ್ರಮದಿ ಕೊಡುವಾ ಗಂಭೀರಾ ಸು
ಖಾಂಬೋಧಿ ಹರಿ ನಿತಂಬೆ ಪ
ಯಾಂಬೋಧಿ ಸುತೆ ಜಗದಂಬೆ ಬಾ ಹಸಿಯ ಜಗುಲೀಗೆ 5

ಮಾಯೆ ನಾರಾಯಣಿ ಶ್ರೀ ಭೂ
ಕೃತಿ ಆಯತಾಕ್ಷಳೆ ಕಾಯಜನ ತಾಯೆ ಶರಣೆ
ಪ್ರಿಯ ಪಾವನ್ನೆ ವಾಯುಭುಕು ಶಾಯಿ ಅಮರಾಧೇಯಾ
ಜಗನ್ನಾಥವಿಠಲನ ಜಾಯೆ ಬಾ ಹಸಿಯ ಜಗುಲೀಗೆ 6
****

ನಮೋ ನಮೋ ರಮೆ ಕಮಲ ಸಂಭವೆ
ಹಿಮನಗಜಾರಮಣ ಸನ್ನುತೆ
ತಮರಿಪು ಶತ ಸಮಸನ್ನಿಭೆ ಇಭ
ಗಮನೆ ಇಂದಿರೆ ಶೋಭಾನೆ ಪ

ಶೃಂಗಾರ ತರಂಗ ಹೆಳಲಾ
ಬಂಗಾರವ ಪೊಂಗ್ಲಾದಿಗೆ ಬಲಿ
ವಂಗನೆ ಶಿರೋಮಂಗಳ ಮಡಿ ಜಡ ಜಂಗಮ ವ್ಯಾಪ್ತಿ
ಅಂಗಜ ಶರ ಕಂಗಳೆ ದ್ವಿಜೋ
ತ್ತುಂಗಮ ರಂಗನ ನಿಜ ಅ
ರ್ಧಾಂಗಿನಿಯೆ ಬಾ ಹಸಿಯ ಜಗುಲೀಗೆ 1

ಪೊಸುಕುಸುಮ ಶಿರಸದಲೊಪ್ಪುವ
ನೊಸಲಲಿ ರಂಜಿಸುವ ಕಸ್ತೂರಿ
ದಿಶದುಂಬಿದ ಬಿಸಿಜಾನನ ಪ್ರಭೆ
ಎಸೆವ ಕಂಧರ ಕಕ್ಕಜ ಕುಚಕು
ಪ್ಪುಸದಲ್ಲತಿ ಶೋಭಿಸುತಿಹ ಪವಳ
ದಾ ಸರವ ತೂಗುವ ಅಸಮೇ ಬಾ ಹಸೆಯ ಜಗುಲೀಗೆ 2

ಕರಿಸೊಂಡಿಲುತೆರ ಚತುರಕರ
ವರ ಅಭಯಸರಸಿಜಯುಗಧರ ಜಠರಾ
ವರತ್ರಿವಳಿ ಗಂಭೀರನಾಭಿ ಕ
ಟಸೂತರೆ ಹೇಮಾಂಬರೆ
ಚರಣಂದಿಗಿ ಸಪಳಿ ಪೊಂಗೆಜ್ಜೆಯಾ
ಮೆರೆಯುತ ಸರಸಳೆ ಬಾಹಸಿಯ ಜಗುಲೀಗೆ 3

ಮೃಗಲಾಂಛನೆ ಮಿಗೆ ಶೋಭಿಪ ಪದ
ಯುಗ ನಖ ಪಂಕ್ತಿಗಳೊಪ್ಪುವ ಗತ
ಅಘ ಸಂಕುಲೆ ಅಗಣಿತ ಮಹಿಮಳೆ ಸುಗುಣ ಸಂಪನ್ನೆ
ಭಗವಂತನ ಜಘನದಿ ಪೊಳೆಯುತ
ಖಗರಾಜನ ಪೆಗಲನೇರಿ ಅಮ
ರ ಗಣವ ಚಿರ ಬಾ ಹಸಿಯ ಜಗಲೀಗೆ 4

ಅಂಭೃಣಿ ಸ್ವಾಯಂಭೂ ಸುರ ನಿಕು
ರುಂಬಕರ ಅಂಬುಜ ಪೂಜಿತೆ
ನಂಬಿದ ಜನರ್ಹಂಬಲಿಸುವ ಫಲ
ಸಂಭ್ರಮದಿ ಕೊಡುವಾ ಗಂಭೀರಾ ಸು
ಖಾಂಬೋಧಿ ಹರಿ ನಿತಂಬೆ ಪ
ಯಾಂಬೋಧಿ ಸುತೆ ಜಗದಂಬೆ ಬಾ ಹಸಿಯ ಜಗುಲೀಗೆ 5

ಮಾಯೆ ನಾರಾಯಣಿ ಶ್ರೀ ಭೂ
ಜಾಯೆ ಕೃತಿ ಆಯತಾಕ್ಷಳೆ ಕಾಯಜನ ತಾಯೆ ಶರಣೆ
ಪ್ರಿಯ ಪಾವನ್ನೆ ವಾಯುಭುಕು ಶಾಯಿ ಅಮರಾಧೇಯಾ
ಜಗನ್ನಾಥವಿಠಲನ ಜಾಯೆ ಬಾ ಹಸಿಯ ಜಗುಲೀಗೆ 6
*****