..
kruti by bagepalli shesha dasaru ಬಾಗೇಪಲ್ಲಿ ಶೇಷದಾಸರು
ಅಂಗನೆ ರುಕ್ಮಿಣಿ ಮಂಗಳ ಪೀಠಕೆ ಸಂಗ ಸಖಿಯರು ಕರೆವರಲೆ
ಮಂಗಳ ಸುವೇಣಿ ಜಾಣೆ ಬಾರಮ್ಮ ಹಸಗೆ ಕರೆದರು ಪ
ಲೋಕಮಾತೆಯು ನೀಯೆನ್ನುತ ನಿನ್ನನು ಕಮಲ
ಮುಖಿಯರು ಕರೆಯುವರೆ
ಸಾಕು ಬಾರೆ ನಿನ್ನ ಮುಖ ಕಮಲ ತೋರೆ
ಬಾರಮ್ಮ ಹಸೆಗೆ ಕರೆದರು 1
ಆಣಿ ಮುತ್ತಿನ ಹಸೆಯ ಪೀಠಕೆ ಜಾಣೆಯರು
ಬಾರೆಂದು ಕರೆಯುವರು
ಸಾನುರಾಗದಿ ಕಾಲಾಹಿವೇಣಿ ಕಲ್ಯಾಣಿ ದಯಮಾಡು
ಹಸೆಗೆ ಕರೆದರು 2
ವನಜನಾಭ ಶ್ರೀಪ್ರಾಣನಾಥ ವಿಠಲನು ನಿನೆÀ್ನದುರು
ನೋಡುತ್ತಲಿರುವನು
ವನಜಮುಖಿಯರ ಕೂಡಿ ಸುಂದರ ಸುವದನೆ
ದಯಮಾಡು ಹಸೆಗೆ ಕರೆದರು 3
***