ಎಂದೆಂದು ನಿನ್ನ ಪಾದವೆ ಗತಿಯೆನಗೆ ಗೋ-
ವಿಂದ ಬಾರಯ್ಯ ಎನ್ನ ಹೃದಯಮಂದಿರಕೆ ||ಪ||
ಮೊದಲಿಂದ ಬರಬಾರದೆ ನಾ ಬಂದೆ
ಇದರಿಂದ ಗೆದ್ದು ಪೋಗುವುದು ಕಾಣೆ ಮುಂದೆ
ತುದಿ ಮೊದಲಿಲ್ಲದೆ ಪರರಿಂದ ನೊಂದೆ
ಪದುಮನಾಭನೆ ತಪ್ಪು ಕ್ಷಮೆ ಮಾಡೊ ತಂದೆ ||
ಹೆಣ್ಣು ಹೊನ್ನು ಮಣ್ಣಿನಾಸೆಗೆ ಬಿದ್ದು
ಪುಣ್ಯಪಾಪವನು ನಾ ತಿಳಿಯದೆ ಇದ್ದು
ಅನ್ಯಾಯವಾಯಿತು ಇದರೇನು ಮದ್ದು
ನಿನ್ನ ಧ್ಯಾನ ಎನ್ನ ಹೃದಯದೊಳಿದ್ದು ||
ಹಿಂದೆ ನಾ ಮಾಡಿದ ಪಾಪವ ಕಳೆಯೆ
ಮುಂದೆನ್ನ ಜನ್ಮ ಸಫಲ ಮಾಡಿ ಪೊರೆಯೆ
ತಂದೆ ಪುರಂದರ ವಿಠಲನ್ನ ನೆರೆಯೆ
ಎಂದೆಂದಿಗಾನಂದ ಸುಖವನ್ನೆ ಕರೆಯೆ ||
****
ರಾಗ ಕಾಂಭೋಜ ತ್ರಿಪುಟ ತಾಳ (raga, taala may differ in audio)
Endendu ninna paadave gatiyenage
govinda barayya enna hrudaya mandirake || pa ||
Modalinda barabaarade naa bande
idarinda geddu poguvudu kaane munde |
Tudi modalillade pararinda nonde
Padumanaabhane tappu kshame maadu tande || 1 ||
Hennu honnu manninaasege biddu
punya paapavanu tiliyade iddu |
Anyaaya vaayitu idakenu maddu
ninna dhyaana enna hrudayadoliddu || 2 ||
Hinde naa maadida paapava kaleyo
mundenna janma saphala maadi poreyo |
Tande Shree Purandara Vitalana neneyo
endendigaananda sukhavannu padeyo || 3 ||
***
pallavi
endendu ninna pAdave gatiyenage gOvinda bArayya enna hrdaya mandirake
caraNam 1
modalinda bara bArade nA bande idarinda geddu pOguvudu kANe munde
tudi modalillade pararinda nonde padumanAbhane tappu kSame mADo tande
caraNam 2
heNNu honnu maNNinAsege biddu puNya pApavanu nA tiLiyade iddu
anyAyavAyidu idarEnu maddu ninna dhyAna enna hrdayadoLiddu
caraNam 3
hinde nA mADida pApava kaLeyo mundenna janma saphala mADi poreyo
tande purandara viTTalanna nereyo endendigAnanda sukhavanne kareyo
***
ಗೋವಿಂದ ಬಾರೈ ಎನ್ನ ಹೃದಯ ಮಂದಿರಕೆ ಪ
ಮೊದಲಿಲ್ಲಿ ಬರಬಾರದು ನಾ ಬಂದೆತುದಿಮೊದಲಿಲ್ಲದ ಭವದಿಂದ ನೊಂದೆ ||ಇದರಿಂದ ಗೆದ್ದು ಹೋಗುವುದೆಂತು ಮುಂದೆಪದುಮನಾಭನೆ ತಪ್ಪುಕ್ಷಮೆಮಾಡುತಂದೆ1
ಹೆಣ್ಣು ಹೊನ್ನು ಮಣ್ಣಿನಾಶೆಗೆ ಬಿದ್ದುಪುಣ್ಯ ಪಾಪಂಗಳ ನಾನರಿತಿದ್ದು ||ಅನ್ಯಾಯವಾಯಿತು ಇದಕೇನು ಮದ್ದುನಿನ್ನ ಧ್ಯಾನವ ಕೊಡು ಹೃದಯದೊಳಿದ್ದು 2
ಹಿಂದೆ ನಾ ಮಾಡಿದ ಪಾಪವ ಕಳೆದುಮುಂದೆನ್ನ ಜನ್ಮ ಸಫಲ ಮಾಡಿ ಪೊರೆದು ||ತಂದೆ ಶ್ರೀಪುರಂದರವಿಠಲ ನೀನಿಂದುಬಂದು ಸಲಹೊ ನನ್ನ ಹೃದಯದಿನಿಂದು3
******