Showing posts with label ರಾಧೆ ಗೋಪಾಲ ಕೃಷ್ಣ ರಾಧೆ ಗೋಪಾಲ kamalanabha vittala RADHE GOPALA KRISHNA RADHE GOPALA. Show all posts
Showing posts with label ರಾಧೆ ಗೋಪಾಲ ಕೃಷ್ಣ ರಾಧೆ ಗೋಪಾಲ kamalanabha vittala RADHE GOPALA KRISHNA RADHE GOPALA. Show all posts

Tuesday, 5 October 2021

ರಾಧೆ ಗೋಪಾಲ ಕೃಷ್ಣ ರಾಧೆ ಗೋಪಾಲ ankita kamalanabha vittala RADHE GOPALA KRISHNA RADHE GOPALA


 ..

kruti by Nidaguruki Jeevubai


ರಾಧೆ ಗೋಪಾಲ ಕೃಷ್ಣ ರಾಧೆಗೋಪಾಲ

ರಾಧೆ ಗೋಪಾಲ ಕೃಷ್ಣ ರಾಧೆಗೋಪಾಲ ಪ


ನಂದನಕಂದ ಮುಕುಂದಮುರಾರೆ

ಇಂದಿವರಾಕ್ಷ ಗೋವರ್ದನಧಾರೆ

ವೃಂದಾವನ ಸಂಚಾರ ವಿಹಾರೇ

ಸಿಂಧುಶಯನ ಕ್ಷೀರಾಬ್ಧಿವಿಹಾರ 1


ಶಂಖು ಚಕ್ರಧರ ವೇಣುವಿನೋದ

ಶಂಕರಾದಿ ವಂದಿತ ದಿವ್ಯಪಾದ

ಬಿಂಕದಿಂದ ಕೊಳಲೂದುವನಾದ

ಪಂಕಜಾದಿಗಳು ನಲಿವ ಸುಸ್ವಾದ 2


ಮಂದರಧರÀ ಗೋವರ್ಧನ ಧಾರಿ

ಮಂದೆ ಗೋವತ್ಸವ ಕಾಯ್ವ ಶೌರಿ

ಇಂದಿರೆಯರಸ ಶ್ರೀಹರಿಯೆ ಮುರಾರಿ

ನಂದಯಶೋದೆಯ ಮೋಹದ ಶೌರಿ3


ವೃಂದಾವನದೊಳು ನಿಂದ ಗೋವಿಂದ

ಮಂದಹಾಸ ಮುಖನಗೆ ಮೊಗದಿಂದ

ಸುಂದರ ಗೋಪಿಯರೊಡಗೂಡಿ ಬಂದ

ಮಂದರಧರ ಆನಂದ ಮುಕುಂದ 4


ಕಾಮನಪಿತ ಶ್ರೀ ಕಂಜಜನಾಭ

ಕಾಮಿತ ಫಲಗಳ ಕರುಣಿಪ ಶ್ರೀಧ

ಕಮಲನಾಭ ವಿಠಲ ನಿಮ್ಮ ಪಾದ

ಕರುಣದಿ ನೆನೆವರ ಸಲಹುವಮೋದ 5

***