ಶ್ರೀ ವಿಜಯದಾಸಾರ್ಯ ವಿರಚಿತ ಮಹಾನಂದಿನಿ ಕ್ಷೇತ್ರ ಸುಳಾದಿ
ರಾಗ : ಕಲ್ಯಾಣಿ
ಧ್ರುವತಾಳ
ಮಹಾ ನಂದಿನಿ ಕ್ಷೇತ್ರ ಮಹಿಯೊಳು ಪ್ರತಿಗಾಣೆ
ಅಹಿಪತಿ ವರ್ಣಿಸಲಾರನಯ್ಯಾ
ಮಹ ಪುರುಷಾರ್ಥ ಪರ ಇಹದಲ್ಲಿ ಸಿದ್ಧ
ಅಹಿಭೂಷಣನಿಲ್ಲಿ ನಲಿಯುತಿದ್ದ
ಅಹಂಕಾರವೆನಿಳಿದು ವಿಹಿತದಿಂದಲಿ ಯಾತ್ರಿ
ರಹಸ್ಯದಲ್ಲಿ ಮಾಡಿದ ನರಗೆ
ದೇಹ ನಿರ್ಮಳ ಪಂಚದ್ರೋಹಗಳೊಡೋವು
ಶ್ರೀ ಹರಿ ದಯದಿಂದ ಪಾಲಿಸುವ
ಮಹಯಜ್ಞನಾಮ ವಿಜಯವಿಠಲನ ದಾ-
ಸೋಹಂನಾಗದತಿ ಫಲವಾಹದೆ ಮರುಳೆ ॥೧॥
ಮಟ್ಟತಾಳ
ಶಿಲವೆಂಬೋವಿಪ್ರಾ ಬಲುಕಾಲಾದಲಿ
ಒಲಿದು ತಪವಮಾಡಿ ಪುಲಿದೊಗಲಾಂಬರನಾ
ಒಲಿಸಿ ಮಕ್ಕಳ ಪಡೆದ ಬಲವಂತರೀರ್ವರನು
ಇಳಿಯೊಳ ‘ಪೆಸರಾದಾ’ ಬಲವಂತ ಮಹಕರ್ಮ ವಿಜಯವಿಠಲನ್ನಾ
ಒಲುಮೆಯಿಂದಲಿ ಕ್ಷೇತ್ರಾಪೊಳೆವುದು ನಿತ್ಯದಲಿ ॥೩॥
ತ್ರಿವಿಡಿತಾಳ
ನಂದನರಾದರು ಸಿಲನೆಂಬೊ ಭೂಸುರಗೆ
ನಂದನಾಪರ್ವತರೆಂಬೊರಿಬ್ಬರು ಮಹಾ-
ನಂದಾದಿಂದಲಿ ತಪವ ಮಾಡಾಲು ಪರ್ವತ
ನೆಂದೆಂಬುವನು ಪೋಗಿ ಶ್ರೀಗಿರಿಯಲಿ ನಿಂತ
ನಂದನನೆಂಬವ ಮನಸು ಧೃಡವಾಗಿ
ನಂದಾನಲ್ಲಿಗೆ ಬರಬೇಕೆಂದಪೇಕ್ಷಿಸಿ
ಒಂದೆ ಭಕುತಿಯಲ್ಲಿ ತಪವನ್ನು ಮಾಡಲು
ಕಂದರ್ಪಪಿತ ಮಹಶಕುತಿ ವಿಜಯವಿಠಲ
ನಂದಾ ಮೂರುತಿಯಾ ಕೃಪೆಯಿಂದವಾಯಿತು ಸಾಧ್ಯ ॥೪॥
ಅಟ್ಟತಾಳ
ಭೂಸುರನೆಸಗಿದ ತಪಸಿಗೆ ಬಲುಮೆಚ್ಚಿ
ಕಾಶಿಯಲಿದ್ದ ಉತ್ತರವಾಹಿನಿ ವಾರ-
ಣಾಸಿ ಗಂಗೆ ಮಧ್ಯ ಬೊಮ್ಮನಾಳದಿಂದ
ತಾ ಸುಲಭಾದಲ್ಲಿ ಗುಪ್ತಗಾಮಿನಿಯಾಗಿ
ಶೇಷಪರ್ವತಕೆ ಬಂದಳು ವಿನಯಾದಿಂದ
ವಾಸರ ನಾಲ್ವತ್ತರೊಳಗೆ ಕೃಷ್ಣಭವ -
ನಾಸಿಮಿಕ್ಕಾದ ಪಂಚತೀರ್ಥವೊಡಗೂಡಿ
ದೋಷವರ್ಜಿತ ಸಿರಿ ವಿಜಯವಿಠಲನ ಪಾ -
ದಾ ಸಲೀಲಲ್ಲಾದೆ ಅನ್ಯತ್ರವಿಲ್ಲಾ ॥೪॥
ಆದಿತಾಳ
ಅಂದಿನಾರಭ್ಯವಾಗಿ ವೃಂದಾರಕಾ ಸರ್ವಸಿದ್ಧ
ಗಂಧರ್ವರೆಲ್ಲ ನಾರಿ ವೃಂದಗಳು ನಿತ್ಯ ನಿತ್ಯ
ಬಂದು ರಾತ್ರಿಯಲ್ಲಿ ಪರಮಾನಂದದ ಲೀಲೆಯಾಡುತ್ತ
ಇಂದುಧರಾ ಸಹಿತಾ ಗೋವಿಂದನಾ ಧ್ಯಾನದಲ್ಲಿ
ಅಂದು ಮೊದಲಾಗಿ ಮಹಾನಂದಿನಿ ಪೆಸರಿನಿಂದ
ಮಂದಾಕಿನಿ ಕರಿಸಿಕೊಂಡು ಚಂದದಿಂದಲಿ ನಲಿವಳು
ಬಂದು ನಿಂದು ಮಿಂದು
ಬಂದು ವಂದನೆ ಎಂದವರಿಗೆ
ಬಂದು ವಿಜಯವಿಠಲಾನು
ಎಂದಿಂದಿಗೆ ಬಿಡದೆ ಪೊರೆವ ॥೫॥
ಜತೆ
ಧೇನುಗರೆದುದೆ ಸಾಕ್ಷಿ ಈ ಕಥೆಯನು ತಿಳಿದೂ
ಈ ನಿಧಿಯಲಿ ವಿಜಯವಿಠಲನ್ನ ಕೊಂಡಾಡಿ ॥೬॥
*******