Showing posts with label ನಿನ್ನ ಅಂಜಿಕೆಯು ಎನಗೇನುದೇವಾ ನಿನ್ನ ಭಕುತರಿಗಲ್ಲದಲೆ ಅಂಜುವೆನೆ ನಾನು gurujagannatha vittala. Show all posts
Showing posts with label ನಿನ್ನ ಅಂಜಿಕೆಯು ಎನಗೇನುದೇವಾ ನಿನ್ನ ಭಕುತರಿಗಲ್ಲದಲೆ ಅಂಜುವೆನೆ ನಾನು gurujagannatha vittala. Show all posts

Wednesday, 1 September 2021

ನಿನ್ನ ಅಂಜಿಕೆಯು ಎನಗೇನುದೇವಾ ನಿನ್ನ ಭಕುತರಿಗಲ್ಲದಲೆ ಅಂಜುವೆನೆ ನಾನು ankita gurujagannatha vittala

 ..

ನಿನ್ನ ಅಂಜಿಕೆಯು ಎನಗೇನುದೇವಾ

ನಿನ್ನ ಭಕುತರಿಗಲ್ಲದಲೆ ಅಂಜುವೆನೆ ನಾನು ಪ

ನಿನ್ನ ಬೈದವನಿಗೆ ಪುಣ್ಯಲೋಕಗಳುಂಟು

ನಿನ್ನವರ ನಿಂದಕರಿಗನ್ಯಗತಿಯು

ನಿನ್ನ ನಿಂದಿಸಲು ಫಲವ ನೀಡುವಿ ದೇವಾ

ಜನ್ಮ ಜನ್ಮಕೆ ನಿನ್ನ ಜನ ದ್ವೇಷಸಲ್ಲಾ 1

ರೂಪಕೆಡಿಸಿದವಗಾಪಾರ ಗತಿಯನೆ ಇತ್ತಿ

ಪಾಪಿಯವನಾದರೂ ಪುಣ್ಯಶಾಲೀ

ಕೋಪದಿಂದಲಿ ಒದ್ದ ಭೃಗುಮುನಿಯನು ಕಾದ್ಯಾ

ಮೋಸದ್ವೇಷವ ಮಾಡೆ ಪಾಪನರಕಾ ಅಹುದು 2

ಧಾತಜನಕನೆ ನಿನ್ನ ಘಾತಿಸಲು ಪರವಿಲ್ಲ

ಯಾತಕಾದರು ನಿನ್ನ ದೂತರನ್ನಾ

ಮಾತಿನಿಂದಲಿ ದೂರೆ ಪಾತಕವೆ ಬರುವುದು

ನಿತ್ಯಲ್ಲ ಗುರುಜಗನ್ನಾಥ ವಿಠಲರೇಯಾ 3

***