ಪೊರಿ ನಾರಸಿಂಹ ಪರಮ ಪುರುಷ ಕರುಣವಾರಿಧೆ l
ಸರಸಿಜಾಸನ ವಿನುತ ನಿನ್ನ ಕರುಣ ಬೇಡಿದೆ ll ಪ ll
ತನ್ನ ತಂದೆ ಮಾತುಗಳನು ತಾಳಲಾರದೆ l
ನಿನ್ನ ಕರೆಯೆ ನಾರಸಿಂಹ ರೂಪ ತೋರಿದಿ ll 1 ll
ಪಿಡಿದು ತೊಡೆಯೊಳಿಟ್ಟು ನೀನು ಮಡುಹಿ ದಿತಿಜನಾ l
ಸಡಗರದಿ ಪೊಡವಿನಿತ್ತು ಪೊರೆದಿ ನೀ ಬಾಲನ ll 2 ll
ಇಂದಿರೇಶ ಭಜಿಸೆ ನಿನ್ನ ಪೊಂದಿ ಜನಗಳು l
ಬಂಧ ಬಿಡಿಸಿ ಸುಖವನೀವಿ ಇಂದು ಜಗದೊಳು ll 3 ll
***