..
Kruti by ಸರಸಾಬಾಯಿ Sarasabai
ಬಂದಾನೋ ಧಯಾನಿದಿ ಬಂದಾನೋ ಪ.
ಬಂದಾನೊ ನಿನ್ನ ದರುಶನ ಮಾಡಿಸಿ ಆನಂದ ಪಡಿಸಿ
ಆನಂದ ಭಾಗ್ಯ ಸುರಿಸಿದೀ ಹರಿಯೆ ಅ.ಪ.
ನೀನು ಬಿಡದೆ ಎನ್ನನು ಕರೆಸಿ
ನಿನ್ನ ಭಕ್ತರ ಸಂಘದೊಳು ಬೆರೆಸಿ
ನಿನ್ನ ದ್ವಾರದೆದುರಿಗೆ ಸ್ಥಳವ ಕೊಡಿಸಿ
ನಿನ್ನ ಪುಷ್ಕರಣಿ ಪ್ರೋಕ್ಷಣೆ ಮಾಡಿಸಿ
ವರಹದೇವರ ದರುಶನ ಮಾಡಿಸಿ 1
ನಿನ್ನ ಧರ್ಮ ದರ್ಶನ ಎನಗೆ ಕೊಡಿಸಿ
ನಿನ್ನ ಪುಷ್ಕರಣಿ ಸ್ನಾನವ ಮಾಡಿಸಿ
ನಿನ್ನ ಭಕ್ತರ ಮಠದಿ ಊಟವ ಮಾಡಿಸಿ
ನಿನ್ನ ಕಲ್ಯಾಣೋತ್ಸವ ತೋರಿಸಿ ಆನಂದಪಡಿಸಿ2
ನಿನ್ನ ವಸಂತೋತ್ಸವ ಎನಗೆ ತೋರಿಸಿ
ನಿನ್ನ ಉತ್ಸವದೊಳೆನ್ನ ದಣಿಸಿ
ನಿನ್ನ ಏಕಾಂತ ಸೇವೆ ಎನ್ನಿಂದ ಮಾಡಿಸಿ
ರಮಾವಲ್ಲಭವಿಠಲನ ಮನದಲಿ ನಿಲಿಸಿ ನಲಿಸಿ 3
***