Showing posts with label ಎನ್ನ ಪಾಲಿಸು ಪರಮಕಾಯ ರಘುರನ್ನ prasannavenkata. Show all posts
Showing posts with label ಎನ್ನ ಪಾಲಿಸು ಪರಮಕಾಯ ರಘುರನ್ನ prasannavenkata. Show all posts

Saturday, 9 November 2019

ಎನ್ನ ಪಾಲಿಸು ಪರಮಕಾಯ ರಘುರನ್ನ ankita prasannavenkata

by ಪ್ರಸನ್ನವೆಂಕಟದಾಸರು
ಎನ್ನ ಪಾಲಿಸು ಪರಮಕಾಯ ರಘುರನ್ನ 
ರಾಮನ ಪ್ರಿಯ ಗುರುಮಧ್ವರಾಯ ಪ.

ಅಂಜನಿ ಆತ್ಮದಲಿ ಬಂದು ರಾಮನಪಾದಕಂಜವಿಡಿದೆ ಕಡಲ ಲಂಘಿಸಿದೆ ಗೋಷ್ಪದದಿಪಂಜು ಬೆಳಗಿದೆ ನಿಶಾಚರನ ಪಟ್ಟಣವಳಿದೆಕಂಜಾಕ್ಷಿಯಳ ತುಷ್ಟಿಗೈದೆ ಗಡಾಸಂಜೀವ ತಂದು ಕಪಿಬಲವ ರಕ್ಷಿಸಿದೆ 1

ಕುರುಕುಲಾಧಮನು ಬಲುಸೊಕ್ಕಿ ಸಂಗರಭಟರನೆರಹಿ ಪಾರ್ಥರ ಬಲವ ಗೆಲುವೆನೆಂದವನ ಭರಮುರಿದೆ ಮಹರಥಿಕರೆದೆ ಹರಿದೆ ಅಸಹಾಯ ಶೂರಸರಿಯಾರು ನಿನಗಸಮಧೀರ ಭಾಪುಕರುಣಾಸಾಗರ ಉದಾರ ಅಜಪದದಧಿಕಾರ 2

ಏಕವಿಂಶತಿಮಾಯಿ ರಚಿತ ಭಾಷ್ಯವ ಜರಿದೆಶ್ರೀಕಾಂತನ ನಾಮಾಮೃತವ ಭಕ್ತರಿಗೆರೆದೆಭೂಕನಕ ವಧು ವಿಷಯಕಾಂಕ್ಷೆಗಳ ಮೇಲೊದೆದೆಲೋಕಕೊಬ್ಬನೆ ಗುರುವೆ ಮೆರೆದೆ ವಿಶ್ವೇಶ ಪ್ರಸನ್ನವೆಂಕಟೇಶನಂಘ್ರಿವಿಡಿದೆ 3
********