RAO COLLECTIONS SONGS refer remember refresh render DEVARANAMA
..
ಮಂಗಳಂ ಮಂಗಳಂ ಜಯ
ಮಂಗಳಂ ಶ್ರೀ ಸುಶೀಲೇಂದ್ರ ಸನ್ಮುನಿಪ ಪ
ದಾತ ಧರಾಮರ | ವ್ರಾತ ವಿನುತ ಯತಿ
ನಾಥ ಶ್ರೀರಾಯರ ಪ್ರೀತ ಪ್ರಖ್ಯಾತ 1
ಯತಿವರ ನತಸುರ ಕ್ಷಿತಿರುಹ ಜಿತ ರತಿ
ಪತಿ ಶರ ಸುಕೃತೀಂದ್ರ ಸುತ ಸೂರಿವರಿಯ 2
ಸೋಮಧರಾರ್ಚಿತ | ಶಾಮಸುಂದರ ಮೂಲ
ರಾಮಪದಾರ್ಚಕ ಕೋಮಲಕಾಯ 3
***