ರಾಗ ಯದುಕುಲಕಾಂಭೋಜಿ ಯರಕಲಕಾಂಭೋಜ . ಝಂಪೆ ತಾಳ
ಗರುವ ಗಂಭೀರ ನಾಯಕಾ ಹರಿಯೆ ||ಪ ||
ಹರಿಯೆ ಹಳಚಿಕೆವುಳ್ಳನಲ್ಲವೆ
ಸುರೂಪಿ ಸಮಗುಣನು ನೀನಲ್ಲವೆ
ಸಿರಿವಂತ ಸರ್ವಾಕಳಂಕ ನೀನಲ್ಲವೆ
ಕರೆಸಿಕೊಳ್ಳೆಯೇಕೆನ್ನನು ಹರಿಯೆ ||
ವೇಳೆಯಲ್ಲವೆ ಅನು ಬಂದುದು
ಕೇಳುತಿಲ್ಲವೆ ಕಂಜನೇತ್ರ
ಸೋಳ ಸಾಸಿರದ ಗೋಪಿಯರೊಳಗಣ
ಸೂಳುಪಾಳಿನಿಂ ತೆರಹಿಲ್ಲವೆ ||
ಕುಬುಜೆಯ ಕೂಟ ಬೇಟದೊಳಿದ್ದೆಯೊ
ಅಂಬುಜೆಯಾಲಿಂಗನದೊಳಿದ್ದೆಯೊ
ಅಂಬುಜನಾಭ ಪೇಳೆನ್ನಾಣೆ ನಿನ್ನ
ಚುಬುಕ ಪಿಡಿದು ಮುದ್ದಾಡುವೆನೊ ||
ಏನೆನ್ನಬಾರದ ಎತ್ತೆನ್ನಬಾರದ
ಸ್ವಾನುಭಾವಿ ನೀನೆಂತೆಂಬೆಯೊ
ಆನೆ ಮರುಳಾಗಿ ಬಂದೇನಲ್ಲದೆ
ನೀನೇ ಕೊಡೆ ಪಂಥ ಪ್ರಾಣೇಶನೆ ||
ಈಗ ತಾನಾದರೆ ಮನಸಾಯಿತೆ ನಿನ್ನ
ಶ್ರೀಗೆ ಸಿಲುಕಿದ ಸಿರಿವಲ್ಲಭ
ನಾಗಮಂಗಲದ ಚೆನ್ನ ಶ್ರೀಕೇಶವರಾಯ
ಭೋಗಿ ಪುರಂದರವಿಠಲರಾಯನೆ ನಮೋ ||
***
ಗರುವ ಗಂಭೀರ ನಾಯಕಾ ಹರಿಯೆ ||ಪ ||
ಹರಿಯೆ ಹಳಚಿಕೆವುಳ್ಳನಲ್ಲವೆ
ಸುರೂಪಿ ಸಮಗುಣನು ನೀನಲ್ಲವೆ
ಸಿರಿವಂತ ಸರ್ವಾಕಳಂಕ ನೀನಲ್ಲವೆ
ಕರೆಸಿಕೊಳ್ಳೆಯೇಕೆನ್ನನು ಹರಿಯೆ ||
ವೇಳೆಯಲ್ಲವೆ ಅನು ಬಂದುದು
ಕೇಳುತಿಲ್ಲವೆ ಕಂಜನೇತ್ರ
ಸೋಳ ಸಾಸಿರದ ಗೋಪಿಯರೊಳಗಣ
ಸೂಳುಪಾಳಿನಿಂ ತೆರಹಿಲ್ಲವೆ ||
ಕುಬುಜೆಯ ಕೂಟ ಬೇಟದೊಳಿದ್ದೆಯೊ
ಅಂಬುಜೆಯಾಲಿಂಗನದೊಳಿದ್ದೆಯೊ
ಅಂಬುಜನಾಭ ಪೇಳೆನ್ನಾಣೆ ನಿನ್ನ
ಚುಬುಕ ಪಿಡಿದು ಮುದ್ದಾಡುವೆನೊ ||
ಏನೆನ್ನಬಾರದ ಎತ್ತೆನ್ನಬಾರದ
ಸ್ವಾನುಭಾವಿ ನೀನೆಂತೆಂಬೆಯೊ
ಆನೆ ಮರುಳಾಗಿ ಬಂದೇನಲ್ಲದೆ
ನೀನೇ ಕೊಡೆ ಪಂಥ ಪ್ರಾಣೇಶನೆ ||
ಈಗ ತಾನಾದರೆ ಮನಸಾಯಿತೆ ನಿನ್ನ
ಶ್ರೀಗೆ ಸಿಲುಕಿದ ಸಿರಿವಲ್ಲಭ
ನಾಗಮಂಗಲದ ಚೆನ್ನ ಶ್ರೀಕೇಶವರಾಯ
ಭೋಗಿ ಪುರಂದರವಿಠಲರಾಯನೆ ನಮೋ ||
***
pallavi
garuva gambhIra nAyakA hariye
caraNam 1
hariye haucikevuLLanallave surUpi sama guNanu nInallave
sirivanta sarvAkaLanka nInallave karesi koLLe yEkennanu hariye
caraNam 2
vELeyallave anu bandudu kELutillave kanjanEtra
sOLa sAsirada gOpiyaroLagaNa sULupALinim terahillave
caraNam 3
kubujeya kUTa bETadoLiddeyo ambujeyAlinganadoLiddeyo
ambujanAbha pELennANe ninna kabuka piDidu muddADuveno
caraNam 4
EnennabArada ettenne bArada svAnubhAvi nInendebeyo
Ane maruLAgi bandEnallade nInE koDe pantha prANEshane
caraNam 5
Iga tAnAdare manasAyite ninna shrIge silukida sirivallabha
nAgamangalada cenna shrI kEshavarEya bhOgi purandara viTTalarAyane namO
***