Showing posts with label ಹರುಷದಿಂದಲಿ ಕಾಯೋ ಹನುಮಾ ಹಾಲಬಾವಿ karpara narahari HARUSHADINDALI KAAYO HANUMA HAALABAAVI. Show all posts
Showing posts with label ಹರುಷದಿಂದಲಿ ಕಾಯೋ ಹನುಮಾ ಹಾಲಬಾವಿ karpara narahari HARUSHADINDALI KAAYO HANUMA HAALABAAVI. Show all posts

Monday, 8 November 2021

ಹರುಷದಿಂದಲಿ ಕಾಯೋ ಹನುಮಾ ಹಾಲಬಾವಿ ankita karpara narahari HARUSHADINDALI KAAYO HANUMA HAALABAAVI



ಹರುಷದಿಂದಲಿ ಕಾಯೋ ಹನುಮಾ ಹಾಲಬಾವಿಯೋಳಿರುವಂಥ  ಭೀಮಾ |


ಗುರು ಮಧ್ವ ರಾಯರ ಚರಣಕೊಂದಿಪೆ  ನಿತ್ಯ |


ಹರಿ ಸರ್ವೋತ್ತಮನೆಂಬ ನಿಜವಾದ ಮತಿ ಕೊಡು ಹನುಮಾ ಹಾಲಬಾವಿಯೋಳಿರುವಂಥ ಭೀಮಾ || ಪ||

ಅoಜನಾದೇವಿ  ಸಂಭೂತಾ | ಧನಂಜಯನಣ್ಣ   ಅತಿ ಪ್ರಖ್ಯಾತಾ |


ಕುಂಜಲೋಚನ ರಾಮ ದೂತಾ | ಕುರು ಭುಂಜಿಸಿ ಆನಂದತೀರ್ಥ |


ಅoಜಿಕಿನ್ಯಾತಕೆ ಸಂಜೀವ ರಾಯಾ | ಸೌಗಂಧಿಕಾ  ಪುಷ್ಪ ತಂದ ಸುಂದರ ತಂದೆ ಶ್ರೀ ಹನುಮಾ ||೧||

ಸಾಗರ ದಾಟಿದ ಧೀರ | ಧರ್ಮರಾಜನ್ನ ನಿಜ ವ್ರಕೋದರ | ಆ ಮಧ್ಯಗೇಹರ  ಕುವರ |


ಹನುಮ ಭೀಮದೇವ ಮಧ್ವವತಾರ | ಆ ಮನೋಹರ ದಿವ್ಯ ರಾಮ ನಾಮಾಮೃತ |


ಪ್ರೇಮದಿ ಕರುಣಿಸೋ ಸ್ವಾಮಿ ದಯನಿಧೆ ಹನುಮಾ ||೨||

ದೂರ ನೋಡದಿರೋ ಹನುಮಾ | ಕರ ಜೋಡಿಸಿ ಪ್ರಾರ್ಥಿಪೆ ಭೀಮಾ |


ಆನಂದ ತೀರ್ಥರ ಪ್ರೇಮದಿಂದ ವ್ಯಾಳ್ಯ  ವ್ಯಾಳ್ಯಕೆ ಹರಿ ನಾಮಾ |


ಪ್ರೇರಣೆ ಮಾಡಿಸೋ ಭಾರತಿ ರಮಣನೆ | ಸಿರಿ ದೊರೆ ನರಹರಿ ವಿಠಲನ ನಿಜದೂತ ಹನುಮಾ ||೩||

***