Showing posts with label ಶೇಷಾ ಭೂಧರನಿವಾಸಾ ಶ್ರೀ ಶ್ರೀನಿವಾಸಾ tulasi. Show all posts
Showing posts with label ಶೇಷಾ ಭೂಧರನಿವಾಸಾ ಶ್ರೀ ಶ್ರೀನಿವಾಸಾ tulasi. Show all posts

Friday, 27 December 2019

ಶೇಷಾ ಭೂಧರನಿವಾಸಾ ಶ್ರೀ ಶ್ರೀನಿವಾಸಾ ankita tulasi

by ತುಳಸೀರಾಮದಾಸರು
ಶೇಷಾ ಭೂಧರನಿವಾಸಾ ಶ್ರೀ ಶ್ರೀನಿವಾಸಾ ಪ

ಶೇಷಶಯನ ಭವದೋಷರಹಿತ ಭಕ್ತಪೋಷಣಕೌಸ್ತುಭಭೂಷಾ ಅಶೇಷಾತ್ಮ ಶೇಷಾ1

ಅರಿದರಕರ ಕನಕಾಂಬರಧರ ಶ್ರೀ ಯಲಮೇಲ್‍ಮಂಗಾ ವಿಹಾರ ಉದಾರೀ ವಿಧೀರಾ 2

ವಿಷಚರಯುಗಮೃಗವೇಷಾ ದ್ವಿನೃಷಚವೇಷಾಪುರಿ ಕುಲದೂಷಾಮಾವಿಷಯ ಸಂತೋಷಾ3

ಕಾಮಜನಕ ತುಲಸೀರಾಮದಾಸ ಹಿತಕಾಮಿತಾರ್ಥವನೀವ ಓ ಶ್ರೀನಿವಾಸ 4
******