CHAITRA SURESH RAO AND PRERANA SURESH RAO 1998
writer H S Venkatesha Murthy
ಅಮ್ಮ ಅಮ್ಮ ನಮ್ಮ ತೋಳಿಗೆ ರೆಕ್ಕೆ ಹಚ್ಚು
ಸೊಂಟಕೆ ಬೆಳ್ಳಿ ಪಟ್ಟಿ ಕಟ್ಟಿ ಹಕ್ಕಿ ಪುಚ್ಚಾ ಚುಚ್ಚು ಹಕ್ಕಿ ಪುಚ್ಚಾ ಚುಚ್ಚು ||ಪ ||
ಹಾರುತ್ತಿನಿ ರೆಕ್ಕೆ ಬಿಚ್ಚಿ ತೆಂಗಿನ ಮರಕ್ಕೂ ಮೇಲೆ
ಜಗಲಿ ಮೇಲೆ ನಿಂತೇ ನಮಗೆ ಅಮ್ಮ ಟಾಟಾ ಹೇಳೇ ಅಮ್ಮ ಟಾಟಾ ಹೇಳೇ
ಹಾಗೆ ಹಾಗೆ ಮೇಲೆ ಹೋಗಿ ಮುಟ್ಟುತೀವಿ ಬಾನ
ಹೇಳುತ್ತಿವಿ ಯಾರು ಕೇಳದ ಚುಕ್ಕಿ ಹಾಡೋ ಹಾಡ ಚುಕ್ಕಿ ಹಾಡೋ ಹಾಡ
ತಿನ್ಗಾಳೂರಿನ ಅಂಗಳ ಸೇರಿ ಬೆಳ್ಳಿ ಮೊಲವನು ನೋಡಿ
ಹಿಡಿಯುತ್ತಿವಿ ಆರು ಬಣ್ಣದ ಜಿಂಕೆಯಾ ಹೇಗೋ ಮಾಡಿ ಜಿಂಕೆಯಾ ಹೇಗೋ ಮಾಡಿ
ಕೊಟ್ಟೆ ಕೊಡುವನು ಚಂದ ಮಾಮ ಕೆನ್ನೆ ತುಂಬ ಮುತ್ತು
ಮುದ್ದಿಸಿ ಬಿಟ್ಟನು ತುದಿಗೆ ಇಳಿಸುವನು ಯಾರು ಇಲ್ಲದ ಹೊತ್ತು ಯಾರು ಇಲ್ಲದ ಹೊತ್ತು
***