Showing posts with label ಪರರ ನಿನ್ನಂತೆ ಬಗೆಯಲೊ ಮನವೆ varadesha vittala. Show all posts
Showing posts with label ಪರರ ನಿನ್ನಂತೆ ಬಗೆಯಲೊ ಮನವೆ varadesha vittala. Show all posts

Friday, 19 February 2021

ಪರರ ನಿನ್ನಂತೆ ಬಗೆಯಲೊ ಮನವೆ ankita varadesha vittala

ಪರರ ನಿನ್ನಂತೆ ಬಗೆಯಲೊ ಮನವೆ||ಪ||

ಪರರ ನಿನ್ನಂತೆ ಬಗೆಯದಿದ್ದರೆ ಯಮನು|
ಕೊರೆದು ಕೊಲ್ಲಿ ನಿನ್ನ ನಿರಯದೊಳಗಿರಿಸುವ|ಅ.ಪ||

ಮಂದಿಯ ಮನೆ ಮನೆಗೆ ಪೋಗಿ ಪರ|
ನಿಂದೆಯಾ ಮಾಡಿ ಆನಂದ ಪಡುವಿ|
ಮಂದಮತಿಯೆ ನಿನ್ನ ಹಿಂದೆ ಆಡಿದ್ದು ಕೇಳಿ|
ಹಂದಿ ನಾಯಿಯಂದದಿ ಕದನಕ್ಕೆ ತೆರಳುವಿ||

 ದೊಡ್ಡವರು ಪೂಜ್ಯರೆಂದರಿಯದಲೆ ನೀ|
ಅಡ್ಡಿಯಿಲ್ಲದೇ ಯಿವರ ಹಳಿಯುತಿಪ್ಪೆ|
ಮಡ್ಡಖೋಡಿಯೇ ನಿನ್ನ ಮಡ್ಡನೆಂದರೆ| ಕಣ್ಣು
ಗುಡ್ಡಿಕೀಳ್ವಂದದಿ ರೋಷವ ಪೊಂದುವಿ||
********

PARARA NINNANTE BAGEYALO
✍ಶ್ರೀ ವರದೇಶ ವಿಠ್ಠಲ ದಾಸರು
🙏 ಶ್ರೀಪದ್ಮನಾಭ ಮತ್ತು ಪ್ರಾಜ್ಞ ನಾಮಕ ಪರಮಾತ್ಮನ ಸ್ಮರಣೆ ಮಾಡುತ್ತಾ