ಕಾಖಂಡಕಿ ಶ್ರೀ ಕೃಷ್ಣದಾಸರು
ಬಣ್ಣಿಸಲಳವಲ್ಲ ನಿಮ್ಮ ಪ್ರ ಸನ್ನ ಮೂರುತಿ ಯಲಗೂರ ವಾಸ ಹನುಮಾ ಪ
ಅಂಜನಿಯುದರದಲಿ ಜನಿಸೀ ತೇಜ ಪುಂಜ ರಾಮನ ಸೇವೆಯಲಿ ಮನನಿಲಿಸಿ ಕಂಜ ಛವನ ಪಟ್ಟ ಧರಿಸಿ ಬಲು ರಂಜನೆ ಮೆರೆದ ಭಕ್ತಾಗ್ರಣಿಯೆನಿಸಿ 1
ಜ್ಞಾನ ಭಕುತ ವೈರಾಗ್ಯದಲಿ ಸರಿ ಉರಗ ಲೋಕದಲಿ ಮಾನನಿಧಿಯೇ ವಿಕ್ರಮದಲಿ ಚರ ಣಾಗತೆ ರಕ್ಷಕ ನೇಮ ಬರದಿರಲಿ2
ಮೂರವ ತಾರದಿ ಬಂದು ದೀನೋ ದ್ಧಾರಣ ಮಾಡಿದೆ ಸದ್ಬೋಧ ಗರದು ಕಾರುಣಿ ಗುರುವಾಗೆಂದೆಂದು ಸಹ ಕಾರದಿ ಮಹಿಪತಿ ಸುತಗೊಲಿದಿಂದು 3
***