Showing posts with label ಭಾಗೀರಥೀ ದೇವಿ ಭಯನಿವಾರಣೆ ಗಂಗೆ purandara vittala BHAGEERATHI DEVI BHAYA NIVARANANE GANGE. Show all posts
Showing posts with label ಭಾಗೀರಥೀ ದೇವಿ ಭಯನಿವಾರಣೆ ಗಂಗೆ purandara vittala BHAGEERATHI DEVI BHAYA NIVARANANE GANGE. Show all posts

Tuesday, 14 December 2021

ಭಾಗೀರಥೀ ದೇವಿ ಭಯನಿವಾರಣೆ ಗಂಗೆ purandara vittala BHAGEERATHI DEVI BHAYA NIVARANANE GANGE






CHECK almost same lyrics by Karjagi Dasappa (srida vittalaru)


ಭಾಗೀರಥೀದೇವಿ ಭಯನಿವಾರಣೆ ಗಂಗೆ |
ಸಾಗರನ ನಿಜರಾಣಿ ಸಕಲಕಲ್ಯಾಣಿ ||pa||

ಒಮ್ಮೆ ಶ್ರೀಹರಿ ಪಾದಕಮಲದಿಂದುದುಭವಿಸಿ |
ಬ್ರಹ್ಮಕರ ಪಾತ್ರೆಯಲಿ ನಿಂದು ಬಂದೆ ||
ಶ್ರೀ ಮನ್ನಾರಾಯಣನ ಪಾದತೀರ್ಥವಾಗಿ |
ಬೊಮ್ಮಾಂಡವನು ಪಾವನಮಾಡ ಬಂದೆ ||1||

ದೇವಿ ನೀ ವಿಷ್ಣುಪಾದೋದಕವೆಂದೆನಿಸಿ |
ದೇವತೆಗಳಿಗೆಲ್ಲ ಅಧಿಕವಾದೆ ||
ದೇವರೆಲ್ಲರು ನೆರೆದು ತಲೆಬಾಗಿದರು ಮಹಾ-|
ದೇವನ ಶಿರದಿಂದ ಧರೆಗಿಳಿದು ಬಂದೆ ||2||

ಜಹ್ನವಿನುದರದಿ ಪೂಕ್ಕ ಕಾರಣದಿಂದ |
ಜಾಹ್ನವಿಯೆಂದು ನೀನೆನಿನೆಕೊಂಡೆ ||
ಮುನ್ನ ನರಕಕ್ಕಿಳಿದ ಸಗರರಾಯನ ವಂಶ- |
ವನ್ನು ಪಾವನಮಾಡಿ ಪೊರೆಯಲು ಬಂದೆ ||3||

ನಿಟ್ಟಿಸಲು ಮುನ್ನಾರು ಜನ್ನಪಾತಕಹರಣ |
ದಿಟ್ಟಿಸಲು ಮೂರುಜನ್ಮದಿ ಮುಕುತಿಯು ||
ಮುಟ್ಟಿ ಮಾಡಿದರೊಂದು ಸ್ನಾನಮಾತ್ರದಲಿ |
ಸುಟ್ಟು ಹೋಹುದು ಸಾಸಿರಜನ್ಮ ಪಾಪ ||4||

ಹಲವು ಪರಿಯಲಿ ಹರಿಯ ಸ್ಮರಣೆಯಿಲ್ಲದೆ ಭವ-|
ದೊಳಗೆ ಸಿಲುಕಿ ಕಡುನೊಂದೆ ನಾನು ||
ಹಲವು ಮಾತೇಕೆ ಶ್ರೀ ಪುರಂದರವಿಠಲನ |
ಚೆಲುವಪದದಿಂದಿಳಿದು ಒಲಿದು ದಯೆ ಮಾಡೆ ||5||
***

BAgIrathIdEvi BayanivAraNe gange |
sAgarana nijarANi sakalakalyANi ||pa||

omme SrIhari pAdakamaladinduduBavisi |
brahmakara pAtreyali nindu bande ||
SrI mannArAyaNana pAdatIrthavAgi |
bommAnDavanu pAvanamADa bande ||1||

dEvi nI viShNupAdOdakavendenisi |
dEvategaLigella adhikavAde ||
dEvarellaru neredu talebAgidaru mahA-|
dEvana Siradinda dharegiLidu bande ||2||

jahnavinudaradi pUkka kAraNadinda |
jAhnaviyendu nIneninekonDe ||
munna narakakkiLida sagararAyana vaMSa- |
vannu pAvanamADi poreyalu bande ||3||

niTTisalu munnAru jannapAtakaharaNa |
diTTisalu mUrujanmadi mukutiyu ||
muTTi mADidarondu snAnamAtradali |
suTTu hOhudu sAsirajanma pApa ||4||

halavu pariyali hariya smaraNeyillade Bava-|
doLage siluki kaDunonde nAnu ||
halavu mAtEke SrI purandaraviThalana |
celuvapadadindiLidu olidu daye mADe ||5||
***