Showing posts with label ದೇವ ನೀನಹುದೈ ಭುವನತ್ರಯದ ಜೀವ ವಾಸುದೇವ mahipati. Show all posts
Showing posts with label ದೇವ ನೀನಹುದೈ ಭುವನತ್ರಯದ ಜೀವ ವಾಸುದೇವ mahipati. Show all posts

Wednesday, 1 September 2021

ದೇವ ನೀನಹುದೈ ಭುವನತ್ರಯದ ಜೀವ ವಾಸುದೇವ ankita mahipati

 ದೇವ ನೀನಹುದೈ ಭುವನತ್ರಯದ ಜೀವ ವಾಸುದೇವ ಪ  

ದೇವಕಿಯ ಕಂದ ದೈತ್ಯಾರಿ ಶ್ರೀ ಗೋವಿಂದ ಮಾಧವ ಮುಕುಂದ 1 

ಮದನ ಮೋಹನಮೂರ್ತಿ ಯದುಕುಲೋದ್ಭವ ಕೀರ್ತಿ ಆದಿ ಪಾಂಡವ ಸಾರ್ಥಿ ಬುಧಜನರ ಸ್ಪೂರ್ತಿ 2 

ಶರಣ ಜನರಾಭಣ ಸಿರಿಲೋಲನೆ ಪೂರ್ಣ ತರಳ ಮಹಿಪತಿಸ್ವಾಮಿ ಘನಕರಣ 3

***