Showing posts with label ಸಲಹೊ ಸಾತ್ತ್ವಿಕ ದೈವವೆ ಕಾಗಿನೆಲೆಯಾದಿ ಕೇಶವ vijaya vittala. Show all posts
Showing posts with label ಸಲಹೊ ಸಾತ್ತ್ವಿಕ ದೈವವೆ ಕಾಗಿನೆಲೆಯಾದಿ ಕೇಶವ vijaya vittala. Show all posts

Thursday, 17 October 2019

ಸಲಹೊ ಸಾತ್ತ್ವಿಕ ದೈವವೆ ಕಾಗಿನೆಲೆಯಾದಿ ಕೇಶವ ankita vijaya vittala

ವಿಜಯದಾಸ
ಸಲಹೊ ಸಾತ್ತ್ವಿಕ ದೈವವೆ ಕಾಗಿನೆಲೆಯಾದಿ ಕೇಶವ
ನೀಲದ ವರ್ಣ ಆದಿಕೇಶವಾ ಪ

ಕನಕ ಕಾಮಿನಿ ಕುಂಭಿಣಿಯಿಂದ ಬರುವ ಚಿಂತೆ |
ಕನಸಿನೊಳಗಾದರೂ ದೂರಾಗಲಿ |
ಕನಕೋದರಗೆ ಸಾಮ್ಯವಾದ ಜೀವನದಲ್ಲಿ |
ಕನಲದೆ ಭಕುತಿ ಇರಲಿ ಎಂದೆಂದಿಗೆ |
ಮನವು ನಿನ್ನಾಧೀನ ದೇವರದೇವ 1

ಕನಕ ನಯನ ಮಯನ ಕಂಡವರಿಗೆ ಜ್ಞಾನ |
ಕನಕವರುಷವ ಕÀರೆವ ವಾಸುದೇವಾ |
ಕನಕಕೇಶಪ್ರಿಯ ಕಾಮಿತಫಲದಾಯಕ |
ಕನಕ ಪರ್ವತದಿಂದ ಬಂದ ಗೋವಿಂದ ವ |
ಚನವೇ ನಿನ್ನಾಧೀನವೋ ದೇವರ ದೇವ 2

ಕನಕ ಮಾಲಿಗೆ ಒಲಿದ ಕಮಲದ ಲೋಚನ |
ಮೂರ್ತಿ |
ಕನಕಕಾಯ ನಮ್ಮ ವಿಜಯವಿಠ್ಠಲರೇಯ |
ಕನಕರಿಸುವಾಗ ನಿನ್ನ ಧ್ಯಾನವೆ ಕೊಡು |
ತನುವೆ ನಿನ್ನಾಧೀನವೊ ದೇವರದೇವ 3
****

ಶ್ರೀಕನಕದಾಸರು ಅಭೂತಪೂರ್ವ ಜ್ಞಾನಿಗಳು, ಶ್ರೇಷ್ಟತಮವಾದ ಹರಿಭಕ್ತರು, ಗಾಢವಾದ ತತ್ವಜ್ಞಾನಿಗಳು, ತಮ್ಮ ಆರಾಧ್ಯದೈವವಾದ ಆದಿಕೇಶವನಿಗೆ 
ತಮ್ಮ ಸಮಸ್ತವನ್ನೂ ಅರ್ಪಿಸಿಕೊಂಡ ದಾಸೋತ್ತಮರು.
ಶ್ರೀವ್ಯಾಸರಾಜರ ಪರಮಾನುಗ್ರಹಕ್ಕೆ ಪಾತ್ರರಾದವರು. ಶ್ರೀವಾದಿರಾಜರ ಮತ್ತು ಪುರಂದರದಾಸರ* ಸಮಕಾಲೀನರು*
ಶ್ರೀವ್ಯಾಸತೀರ್ಥರು ಶ್ರೀವಾದಿರಾಜತೀರ್ಥರ ಪರ್ಯಾಯ ಕಾಲದಲ್ಲಿ ಶ್ರೀಪುರಂದರ ದಾಸರ ಜೊತೆಯಲ್ಲಿ ಉಡುಪಿಗೆ ಆಹ್ವಾನದಂತೆ  ದಯಮಾಡಿಸಿ ಕೆಲವುದಿನಗಳು ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಗುರುಗಳ ಜೊತೆ ಕನಕದಾಸರು ಬಂದಿದ್ದರು.

ಮೇಲಿನ ವಿಚಾರವನ್ನು ಶ್ರೀವಿಜಯದಾಸರು ತಮ್ಮ ಕಾಗಿನೆಲೆ ಯಾತ್ರೆಯ ಸಂದರ್ಭದಲ್ಲಿ ನೆರೆದ ಭಕ್ತಸ್ತೋಮಕ್ಕೆ ತಿಳಿಸಿಕೊಟ್ಟಿದ್ದಾರೆ.ಕೆಲವು ಕಾಲ 
ಅಲ್ಲಿ ತಂಗಿದ್ದ  ಶ್ರೀವಿಜಯದಾಸರು ಶ್ರೀಕನಕದಾಸರ ಜೀವನದ ಅನೇಕ 
ಭಕ್ತಿಪರವಶವಾದ ವಿಶೇಷ ಸಂಗತಿಗಳನ್ನು ಕಾಗಿನೆಲೆಯ ಭಕ್ತರಿಗೆ ಸವಿಸ್ತಾರವಾಗಿ ತಿಳಿಸಿಕೊಟ್ಟು , ಶ್ರೀಕನಕದಾಸರ ಮಹಿಮೆಯನ್ನು ಮನಸಾರೆ ಹೊಗಳಿ ಕೊಂಡಾಡಿದರು.

ಪರಿವಾರ ಸಹಿತ ಅಲ್ಲಿಂದ ಹೊರಡುವ ಮುನ್ನ ಶ್ರೀಆದಿಕೇಶವ ಮಂದಿರದಲ್ಲಿ ಕೈಜೋಡಿಸಿ ನಿಂತು ಭಕ್ತಿಭರದಿಂದ ಶ್ರೀಸ್ವಾಮಿಯ ಸನ್ನಿಧಿಯಲ್ಲಿ ಹಾಡಿದ ಪದವಿದು:

ರಾಗ ಕೇದಾರಗೌಳ    ಆದಿತಾಳ

ಸಲಹೋ ಸಾತ್ವಿಕದೈವವೆ ಕಾಗಿನೆಲೆಯಾದಿಕೇಶವ ನೀಲವರ್ಣ

ಕನಕಕಾಮಿನಿಕುಂಭಿಣಿಯಿಂದ ಬರುವ ಚಿಂತೆ
ಕನಸಿನೊಳಗಾದರೂ ದೂರಾಗಲಿ
ಕನಕೋದರನ ಸಾಮ್ಯವಿರುವಂಥ ಜೀವನಲಿ1
ಕನಲದೆ ಭಕುತಿಯಿರಲಿ ಎಂದೆಂದಿಗೂ
ಮನವು ನಿನ್ನಾಧೀನವೋ ದೇವರ ದೇವ

ಕನಕನಯನ ನಿನ್ನ ಕಂಡವರಿಗೆ
ಜ್ಞಾನಕನಕವರುಷ ಕರೆವ ವಾಸುದೇವ
ಕನಕೇಶಪ್ರಿಯ2 ಕಾಮಿತಫಲದಾಯಕ
ಕನಕಪರ್ವತದಿಂದ3 ಬಂದ ಗೋವಿಂದ
ವಚನವೇ ನಿನ್ನಾಧೀನವೋ ದೇವರ ದೇವ

ಕನಕಮಾಲಿಗೆ ಒಲಿದ ಕಮಲಲೋಚನ
ಕನಕಾಂಬರಧರಾನಂದಮೂರ್ತಿ
ಕನಕಕಾಯ ನಮ್ಮ 
🌸ವಿಜಯವಿಟ್ಠಲರೇಯ 🌸
ಕನಕರಿಸುವಾಗ4 ನಿನ್ನ ಧಾನ್ಯವೆ ಕೊಡು
ತನುವೇ ನೀನ್ನಾಧೀನವೋ ದೇವರ ದೇವ
1 ಶ್ರೀವಾಯುದೇವರು
2 ರುದ್ರದೇವರು 
3 ವೆಂಕಟಾದ್ರಿ
4 ಸ್ವಪ್ನದ ಕನವರಿಕೆ
ಹರೇ ಶ್ರೀನಿವಾಸ
ಸಂಗ್ರಹ ಲೇಖನ
ದೊ.ವೆಂ.ಶ್ರೀ.
*****