Showing posts with label ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ purandara vittala HARI KOTTA KAALAKKE UNALILLA. Show all posts
Showing posts with label ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ purandara vittala HARI KOTTA KAALAKKE UNALILLA. Show all posts

Saturday, 7 December 2019

ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ purandara vittala HARI KOTTA KAALAKKE UNALILLA


 ಪುರಂದರದಾಸರು
ರಾಗ ಪೂರ್ವಿ. ಝಂಪೆ ತಾಳ 

ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ
ಹರಿ ಕೊಡದ ಕಾಲಕೆ ಬಾಯಿ ಬಿಡುವ್ಯಲ್ಲೊ ಪ್ರಾಣಿ

ಹತ್ತು ಸಾವಿರ ಹೊನ್ನು ತಿಪ್ಪೇಲಿ ಹೂಳಿಟ್ಟು
ಮತ್ತೆ ಉಪ್ಪಿಲ್ಲದೆ ಉಂಡ್ಯಲ್ಲೊ ಪ್ರಾಣಿ
ಹತ್ತು ಸಾವಿರ ಹೊನ್ನು ತಿಪ್ಪೇಲಿ ಪೋಪಾಗ
ಮೃತ್ತಿಕೆ ಬಾಯಲ್ಲಿ ಬಿತ್ತಲ್ಲೊ ಪ್ರಾಣಿ

ಹುಗ್ಗಿಯು ತುಪ್ಪವು ಮನೆಯೊಳಗಿರಲಿಕ್ಕೆ
ಗುಗ್ಗುರಿಯನ್ನವ ತಿಂದ್ಯಲ್ಲೊ ಪ್ರಾಣಿ
ವೆಗ್ಗಳದ ಭಾಗ್ಯ ಗಳಿಗೇಲಿ ಪೋಪಾಗ
ಬುಗ್ಗೆಯ ಹೋಯ್ಕೊಂಡು ಹೋದ್ಯಲ್ಲೊ ಪ್ರಾಣಿ

ನೆಂಟರಿಷ್ಟರು ಬಂದು ಮನೆ ಮುಂದೆ ಕುಳಿತಿರಲು
ಕುಂಟ ಸುದ್ದಿ ನೀನಾಡಿದ್ಯಲ್ಲೊ ಪ್ರಾಣಿ
ಕಂಟಕ ಯಮನವರು ಕುಂಠಿಸುತ್ತೆಳೆವಾಗ
ನೆಂಟ ಪುರಂದರವಿಟ್ಟಲೆನ್ನು ಪ್ರಾಣಿ ||
( "ನೆಂಟ ಪುರಂದರವಿಟ್ಟಲನು ಪ್ರಾಣಿ")
***


pallavi

hari koTTa kAlakke uNalilla hari koTTa kAlake bAyi biDuvyallo prANi

caraNam 1

hattu sAvira honnu tipbEli hULiTTu matte uppillade uNDyallo prANi
hattu sAvira honnu tipbEli pOpAga mruttike bAyalli bittallo prANi

caraNam 2

hukkiyu tuppavu maneyoLagiralikke gugguriyannava tindayallo prANi
veggaLada bhAgya gaLigEli pOpAga buggeya hOikoNDu hOdyallo prANi

caraNam 3

neNtariSTu bandu mane munde kuLitiralu kuNTa suttu nInADidyallo prANi
kaNTaka yamanavaru kuNDisutteLevAga neNTa purandara viTTalennu prANi
***

ಹರಿ ಕೊಟ್ಟಕಾಲಕ್ಕೆ ಉಣಲಿಲ್ಲ |
ಹರಿಕೊಡದ ಕಾಲಕ್ಕೆ ಬಾಯಿಬಿಡುವೆಯೊ ಪ್ರಾಣಿಪ.

ಉಡಲಿಲ್ಲ ಉಣಲಿಲ್ಲ ಕೊಡಲಿಲ್ಲ ಧರ್ಮವ |ಅಡಗಿಸಿ ಇಟ್ಟಿಹೆ ಮಣ್ಣೊಳಗೆ ||ಬಡತನ ಬಂದು ಕಂಬಳಿ ಹೊದೆವಾಗ |ತುಡುಗು ನಿನ್ನ ಜನ್ಮ ಸುಡು ಕಾಣೊಖೋಡಿ1

ಹುಗ್ಗಿಯು ತುಪ್ಪವು ಮನೆಯೊಳಗಿರಲಿಕ್ಕೆ |ಗುಗ್ಗರಿಯನು ಮಾಡಿ ತಿನ್ನುವಿಯೊ ||ವೆಗ್ಗಳವಾದ ಯಮಧೂತರು ಎಳೆವಾಗ |ಬುಗ್ಗೆಯ ಹೊಯ್ಕೊಂಡು ಹೋದೆಯೊ ಖೋಡಿ 2

ನಂಟರು - ಬಂಧುಗಳೂರೊಳಗಿರಲಿಕ್ಕೆ |ಕುಂಟು ಸುದ್ದಿಗಳನು ಆಡುವೆ ನೀ ||ಕಂಟಕರಾದ ಯಮದೂತರು ಎಳೆವಾಗ |ನಂಟ ಪುರಂದರವಿಠಲನ ದ್ರೋಹಿ 3
*********