Showing posts with label ಶ್ರೀಹನುಮ ಮಾಂ ಪಾಹಿ ಪವನ jagannatha vittala. Show all posts
Showing posts with label ಶ್ರೀಹನುಮ ಮಾಂ ಪಾಹಿ ಪವನ jagannatha vittala. Show all posts

Saturday, 14 December 2019

ಶ್ರೀಹನುಮ ಮಾಂ ಪಾಹಿ ಪವನ ankita jagannatha vittala

ಜಗನ್ನಾಥದಾಸರು
ಶ್ರೀ ಹನುಮ ಮಾಂ ಪಾಹಿ ಪವನ ಜ
ಖಗ ವಾಹನನ ದಾಸ
ನೇಹದಲಿ ಬಿಂಬರೂಪ ತೋರೆನಗೆ ಪ

ಭಾನುಸುತ ಪವಮಾನ ನಂದನ
ನೀನೆ ಸಲಹಿದೆ
ಮಾನನಿಧಿ ರಾಮಬಾಣದಲಿ ಇಂದ್ರ
ಸೂನುವಿನ ಪ್ರಾಣ
ಹಾನಿಯ ಗೈಸಿ ಮೇಣ್ ಆ ಕಿಷ್ಕಿಂಧ ನಗರದಲ್ಲಿ
ವಾನರೇಂದ್ರಗೆ
ನಾನಾ ಪರಿಯಲ್ಲಿ ಆನಂದವಿತ್ತ
e್ಞÁನಿ ನಿನ್ನ ಅಧೀನದವನೆಂದೆಂದು 1

ಸುರೇಶನಂದನ ಮಾರುತನೆ ನಿನ್ನ
ಕರುಣವು ಎನ್ನೊ
ಳಿರದ ಕಾರಣ ಹರಿ ಮುನಿದನೆಂದು
ಅರಿದು ಮನದಿ ದ್ವಾ
ಪರದಲ್ಯವ ತರಿಸಿ ಗುರುವರ್ಯ ನಿಮ್ಮ
ರಣ ಸೇವಿಸೆ
ಪೊರೆದೆ ಅಂದು ಸಮರದಿ ಕೃಷ್ಣನ
ಪರಮಕೃಪೆ ಪಡೆದವರಿಗೆ ನಿನ್ನಯ ಕರುಣ ಕಾರಣವೊ 2

ಮೂರನೆಯ ಅವತಾರದಿಂದಲಿ
ಧಾರುಣಿಯೊಳು .......... ಬೀರಿದ್ದ ಶಾಸ್ತ್ರವ
ಬೇರೊರಿಸಿ ಕೀಳ್ದು
ತೋರಿಸಿದಿ ಹರಿಯ ಆರು ನಿನ್ನನು
ಆರಾಧಿಪರೊ ಆ
ಧೀರರಿಗೆ ದೋಷ ಸೇರಲಮ್ಮವು
ಮಾರಪಿತ ಜಗನ್ನಾಥ ವಿಠಲನ ಕರುಣ ವಾಹುದೊ 3
*********