..
kruti by ವರದೇಶ ವಿಠಲರು varadesha vittala dasaru
ಹರಿದಾಸವೃಂದ ಸ್ತೋತ್ರ
ದಾಸವರ್ಯರಿಗೊಂದಿಪೆ
ದಾಸವರ್ಯರಿಗೆರಗಿ ಜನ್ಮಾಂತರದ
ದೋಷವ ಪರಿಹರಿಸಿಕೊಂಬೆ ಪ
ನಾರದ ಮುನಿಹರಿಯಾಜ್ಞ್ಞೆಯಿಂದಲೆ ಪುರಂ -
ದರ ದಾಸರಾಗಿಜನಿಸಿದ ದಾ -
ನಾರಾಯಣನ ದಿವ್ಯನಾಮದ ಮಹಿಮೆಯ
ಮೂರು ಲೋಕಗಳಲ್ಲಿ ಹರಹಿದ 1
ಭಜಿಸುವ ಭಕುತರ ಅಗಣಿತದೋಷವ
ನಿಜವಾಗಿ ಪರಿಹರಿಸುವಂಥ ದಾಸ -
ಸುಜನ ಪೋಷಕ ದುಷ್ಟಕುಜನ ಕುಠಾರ ಶ್ರಿ
ವಿಜಯರಾಯರ ಪಾದಕ್ಕೆರಗುವೆ 2
ಕೋಪರಹಿತಭಕ್ತ ಪಾಪವಿದೂರಕ
ಶ್ರೀಪತಿ ಪಾದಕಮಲ ಭೃಂಗ ದಾ -
ತಾಪ ಸೋತ್ತುಮಭವ ತಾಪನಿವಾರಕ
ಗೋಪಾಲದಾಸರಿಗೆರಗುವೆ 3
ಧರಿಯಸುರರ ಉದ್ಧರಿಸಲೋಸುಗ ದಿವ್ಯ
ಹರಿಕಥಾಮೃತ ಸಾರಗ್ರಂಥವದಾ -
ವಿರಚಿಸುತಜ್ಞಾನಪರಿಹರಿಸಿದಂಥ
ಹರಿಭಕ್ತಾಗ್ರಣಿ ಶ್ರೀ ಜಗನ್ನಾಥ 4
ಧರೆಯೊಳು ಹರಿಲೀಲಾಮೃತ ವೃಷ್ಟಿಗರೆಯಲು
ಪರಿಪರಿ ಕಥೆಗಳ ರಚಿಸಿದ ದಾ -
ವರದೇಂದ್ರ ಮುನಿಗಳ ಪಾದಸಾರಸಭೃಂಗ
ಪರನುಸುಚರಿತ ಶ್ರೀ ಪ್ರಾಣೇಶ 5
ಹರಿಭಕ್ತಿ ಮಾರ್ಗವ ಪರಿಪರಿಶಿಷ್ಯರಿ
ಗರುಹಿ ಕರುಣದಿಂದುದ್ಧರಿಸಿದ ದಾ -
ಪರಮತತಿಮರಕ್ಕೆ ತರಣಿಸ್ವರೂಪ ಶ್ರೀ
ಗುರುಪ್ರಾಣೇಶಾರ್ಯರಿಗೆರಗುವೆ6
ಗುರುಪಾದ ಸೇವೆಯ ಪರಿಪರಿಗೈದು ಈ
ಧರಿಯೊಳು ಧನ್ಯರೆಂದೆನಿಸಿದ ದಾ -
ಹರಿದಾಸ ಕುಲರತ್ನ ಸರುವ ಸದ್ಗುಣ ಪೂರ್ಣ
ವರಶ್ರೀಪ್ರಾಣೇಶದಾಸಾರ್ಯ 7
ಗುರುಪ್ರಾಣೇಶರ ಕರಸರಸಿಜ ಸಂಜಾತ
ಪರಮಭಾಗವತರೆನಿಸಿದ ದಾ
ಮರುತಮತದ ತತ್ವವರಿದಂಥ ಸುಖದ ಸುಂ -
ದರವಿಠಲ ಮೋದ ವಿಠಲರೆಂಬ 8
ಭೂಮಿಯೋಳ್ ವರದೇಶ ವಿಠ್ಠಲನ ನಿಜಭಕ್ತ
ಸ್ತೋಮಕ್ಕೆ ಶಿರಬಾಗಿ ನಮಿಸುವೆ ದಾ
ಆ ಮಹಾತ್ಮರಪಾದರಜಾದೊಳೆನ್ನನು ದೇವ
ನೇಮದಿಂದಲಿ ಹೊರಳಾಡಿಸೊ 9
***