ರಾಗ ಪೂರ್ವಿ ಅಟತಾಳ
ಕಂಗೊಳಿಗೊಶವಿಲ್ಲವೆ ರಂಗನ ನೋಟ ||ಪ||
ಅಂಗಳದೊಳು ಬೆಳದಿಂಗಳು ತುಂಬಿತು ||ಅ||
ಚಂದನದಿಂದ ಕುಚಂಗಳ ತವಿಸಲು
ಇಂದುಕಿರಣ ಬಂದು ಕುಂದಿಸಲು
ಮಂದಮಾರುತದಲಿ ನಿಂದಿರಲಾರೆನೆ
ಕಂದರ್ಪತಾಪವು ಹೋಹುದೇನೆ ಹೆಣ್ಣೆ ||
ಬಂಗಾರ ದೇಹಕೆ ಭಾರವಾಗಿಯಿದೆ
ಶೃಂಗರಿಸಿಕೊಳಲಾರಿಗಾಗಿ
ಅಂಗಜಶರತಾಪ ತಾಳಲಾರೆನು ನಾನು
ಉಂಗುರವು ಕೈಗೆ ಉಚಿತವೇನೆ ಹೆಣ್ಣೆ ||
ಮುನ್ನ ಪುರಂದರವಿಠಲರಾಯ ಕೂಡಿ
ಇನ್ನೂ ಬಾರೆಂದರೆ ಬಾರನೇಕೆ
ಅನ್ನಪಾನ ರುಚಿಯಾಗಿ ತೋರಲಿಲ್ಲ
ನಿನ್ನಾಣೆ ಕಣ್ಣಿಗೆ ನಿದ್ರೆ ಬಾರದು ಹೆಣ್ಣೆ ||
***
ಕಂಗೊಳಿಗೊಶವಿಲ್ಲವೆ ರಂಗನ ನೋಟ ||ಪ||
ಅಂಗಳದೊಳು ಬೆಳದಿಂಗಳು ತುಂಬಿತು ||ಅ||
ಚಂದನದಿಂದ ಕುಚಂಗಳ ತವಿಸಲು
ಇಂದುಕಿರಣ ಬಂದು ಕುಂದಿಸಲು
ಮಂದಮಾರುತದಲಿ ನಿಂದಿರಲಾರೆನೆ
ಕಂದರ್ಪತಾಪವು ಹೋಹುದೇನೆ ಹೆಣ್ಣೆ ||
ಬಂಗಾರ ದೇಹಕೆ ಭಾರವಾಗಿಯಿದೆ
ಶೃಂಗರಿಸಿಕೊಳಲಾರಿಗಾಗಿ
ಅಂಗಜಶರತಾಪ ತಾಳಲಾರೆನು ನಾನು
ಉಂಗುರವು ಕೈಗೆ ಉಚಿತವೇನೆ ಹೆಣ್ಣೆ ||
ಮುನ್ನ ಪುರಂದರವಿಠಲರಾಯ ಕೂಡಿ
ಇನ್ನೂ ಬಾರೆಂದರೆ ಬಾರನೇಕೆ
ಅನ್ನಪಾನ ರುಚಿಯಾಗಿ ತೋರಲಿಲ್ಲ
ನಿನ್ನಾಣೆ ಕಣ್ಣಿಗೆ ನಿದ್ರೆ ಬಾರದು ಹೆಣ್ಣೆ ||
***
pallavi
kangaLigOshavillavE rangana nODa
anupallavi
angaLadoLu baudingaLu tumbidu
caraNam 1
candanadinda kucangaLa tavisalu indu kiraNa bandu kandisalu
manda mArutadali nindiralArene kandarpa tApavu hOhudEne heNNe
caraNam 2
bangAra dEhake bhAravAgiyide shrngarisi koLalyArigAgi
angaja sharatApa tALalArenu nAnu unguravu kaige ucitavEne heNNe
caraNam 3
munna purandara viTTalarAya kUDi innU bArendare bAraneke
annapAna ruciyAgi tOralilla ninnANe kaNNIge nidre bAradu heNNe
***