Showing posts with label ಧರೆಯವೊಳಗೆ ನಮ್ಮ ಗುರು gopala vittala suladi ರಾಘವೇಂದ್ರಸ್ತೋತ್ರ ಸುಳಾದಿ DHAREYOLAGE NAMMA GURU suladi RAGHAVENDRA STOTRA SULADI. Show all posts
Showing posts with label ಧರೆಯವೊಳಗೆ ನಮ್ಮ ಗುರು gopala vittala suladi ರಾಘವೇಂದ್ರಸ್ತೋತ್ರ ಸುಳಾದಿ DHAREYOLAGE NAMMA GURU suladi RAGHAVENDRA STOTRA SULADI. Show all posts

Sunday, 8 December 2019

ಧರೆಯವೊಳಗೆ ನಮ್ಮ ಗುರು gopala vittala suladi ರಾಘವೇಂದ್ರಸ್ತೋತ್ರ ಸುಳಾದಿ DHAREYOLAGE NAMMA GURU suladi RAGHAVENDRA STOTRA SULADI




1st Audio by Mrs. Nandini Sripad

2nd Audio by Vidwan Sumukh Moudgalya


just scroll down for other devaranama 


ಶ್ರೀ ಗೋಪಾಲದಾಸಾರ್ಯ ವಿರಚಿತ 
 ಶ್ರೀ ರಾಘವೇಂದ್ರ ಸ್ತೋತ್ರಸುಳಾದಿ 

 ರಾಗ ಕಲ್ಯಾಣಿ 

 ಧ್ರುವತಾಳ 

ಧರೆಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು ।
ಇರುತಿಪ್ಪ ವಿವರ ಅರಿದಷ್ಟು ವರ್ಣಿಸುವೆ ।
ಸ್ಥಿರವಾಗಿ ಮಂತ್ರಾಲಯಪುರ ತುಂಗಾತೀರದಿ ।
ಹರಿಭಕ್ತ ಪ್ರಹಲ್ಲಾದ ವರಯಾಗ ಇಲ್ಲಿ ಮಾಡಿ ।
ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯೆ ಮಾಡಿ ।
ಪರಿಸಿದ್ಧನಾದನೆಂದು ಅರಿದು ಈ ಸ್ಥಳದಲ್ಲಿ ।
ಗುರುರಾಘವೇಂದ್ರರಾಯ ಶರೀರ ಪೋಗಾಡಿ ಇಲ್ಲಿ ।
ಪರಲೋಕಕ್ಕೆ ಸಾಧನ ಪರಿಪೂರ್ತಿಯ ಮಾಡಿಕೊಂಡು ।
ಸಿರಿಕೃಷ್ಣನ್ನ ಚರಣಕ್ಕೆರಗಿ ಸಂತೋಷದಲ್ಲಿ ।
ಧರೆಯ ಮ್ಯಾಲಿದ್ದ ಜನರ ಪೊರೆಯಬೇಕೆಂದೆನುತ ।
ಹರಿ ನುಡಿದನು ಇವರ ಪರಮ ದಯಾಳು ತನವ ।
ಗುರುವಂತರ್ಯಾಮಿಯಾಗಿ ವರವನೀಯಲಿ ಜಗಕೆ ।
ನರಹರಿ ತಾನೆ ನಿಂದು ನಿತ್ಯ ಪೂಜೆಯಗೊಂಡು ।
ಸಿರಿವುಳ್ಳ ಕೀರುತಿಯ ಸುರರಪಾಲಕ ಚಕ್ರ- ।
ಧರ ನಾರಾಯಣ ತಾನೆ ವರಸನ್ನಿಧಾನನಾಗಿ- ।
ವರಿಗೆ ಫಲ ತಂದೀವ ಇಹಪರದಲ್ಲಿನ್ನು ।
ಕರುಣಾಕರ ರಂಗ ಗೋಪಾಲವಿಠ್ಠಲ ತನ್ನ ।
ಶರಣರ ಪೊರೆವಂಥ ಚರಿಯ ಪರಿಪರಿ ಉಂಟೊ ॥ 1 ॥

 ಮಟ್ಟತಾಳ 

ನರಹರಿ ಕೃಷ್ಣ ರಾಮ ಸಿರಿವೇದವ್ಯಾಸ ।
ಎರಡೆರಡು ನಾಲ್ಕು ಹರಿಯ ಮೂರ್ತಿಗಳು ।
ಪರಿವಾರ ಸಹಿತಾಗಿ ಸಿರಿ ಸಹಿತದಿ ನಿಂದು ।
ಸುರಗುರುವರ್ಯರು ಮಧ್ವಾಚಾರ್ಯರೇ ಮೊದಲಾಗಿ ।
ತರುವಾಯದಲಿನ್ನು ತರತಮ್ಯ ಅನುಸಾರ ।
ಪರಿಪರಿ ಯತಿಗಳು ಇರುತಿಪ್ಪರು ಇಲ್ಲಿ ।
ಹರುಷದಿಂದಲಿ ವೇದ ಒರೆದು ಶಾಸ್ತ್ರಗಳನ್ನು ।
ಪರಿಪರಿ ಪುರಾಣಭಾರತ ಗಾನದಲಿ ।
ಸರಿಸರಿ ಬಂದಂತೆ ಸರಿಗಮವೆನುತಲಿ ।
ಭರದಿಂದಲಿ ಕುಣಿದು ಭಕುತಿಯಿಂದಲಿ ಇನ್ನು ।
ಹರಿಯ ಪೂಜಿಸುತ್ತ ಹಗಲಿರುಳು ಬಿಡದೆ ।
ಪರತತ್ವದ ವಿವರ ಪರಿಪರಿ ಪೇಳುವರು ।
ಗರುಡವಾಹನರಂಗ ಗೋಪಾಲವಿಠ್ಠಲ ।
ಶರಣರ ಪಾಲಿಸುತ ಇರುತಿಪ್ಪನು ಇಲ್ಲಿ ॥ 2 ॥

 ತ್ರಿವಿಡಿತಾಳ 

ನರಹರಿ ರೂಪನಾಗಿ ವಾಸವಾಗಿ ಇಲ್ಲಿ ।
ದುರಿತ ದುಷ್ಕೃತ ಬ್ರಹ್ಮೇತಿಗಳ ಓಡಿಸುವ ।
ಸಿರಿರಾಮನಾಗಿಲ್ಲಿ ಪರಿ ಪರಿ ಪರಿ ದೇಶಾಂ - ।
ತರ ಅನ್ನ ಕಳಕೊಂಡು ನರರಿಲ್ಲಿ ಬಂದರೆ ।
ಸ್ಥಿರಪಟ್ಟ ಕಟ್ಟುವ ।
ಸಿರಿ ಕೃಷ್ಣನಾಗಿಲ್ಲಿ ಪರಿಪರಿಯಲಿ ಬಂದ ।
ಪರಮಾತುರರಿಗೆ ವರವೀವ । 
ಪುತ್ರೋತ್ಸವ ಮುಂಜಿ ಮದುವೆಯ ಹರಕಿಗಳ ।
ಕೈಕೊಂಡು ಹರುಷ ಬಡಿಸುವನವರ ।
ಸಿರಿ ವೇದವ್ಯಾಸನಿಲ್ಲಿ ಭರದಿಂದಲಿ ಬಂದ ।
ದುರುವಾದಿಗಳನೆಲ್ಲ ಧುರದಿಂದಲೋಡಿಸಿ ।
ಮುರಿದು ಅವರ ಶಾಸ್ತ್ರ ಹರಿಸರ್ವೋತ್ತಮನೆಂದು ।
ಇರುವನಿಲ್ಲಿ ತೋರಿ ಶರಣಜನಕ ಇನ್ನು ।
ವರ ಜ್ಞಾನಸುಧೆಯನ್ನು ಕರೆದು ಕೊಡುತಲಿಪ್ಪ ।
ಸಿರಿ ವಂದಿತಪಾದ ಗೋಪಾಲವಿಠ್ಠಲ ।
ಪರಿಪರಿಯಲಿ ಇಲ್ಲಿ ವಾಲಗ ಕೈಕೊಂಬ ॥ 3 ॥

 ಅಟ್ಟತಾಳ 

ರಾಘವೇಂದ್ರನೆಂಬೊ ರೂಪ ತಾನೇ ಆಗಿ ।
ರಾಘವೇಂದ್ರನೆಂಬೊ ನಾಮ ಇಡಿಸಿಕೊಂಡು ।
ರಾಘವೇಂದ್ರರಿನ್ನು ಮಾಡಿದಂಥ ಪುಣ್ಯ ।
ಭೋಗವರಿತು ತನ್ನ ಭಾಗವತರ ಕೀರ್ತಿ ।
ಸಾಗಿಸಿ ಸಲಹಲಿ ತ್ರಿಜಗದೊಳಗಿನ್ನು ।
ಮೇಘ ಸುರಿದಂಥ ಅಮೋಘ ಕೀರುತಿಯನ್ನು ।
ರಾಘವ ಇವರಿಗೆ ರಾಜ್ಯದಿ ತಂದೀವ ।
ರಾಘವೇಂದ್ರಮೂರ್ತಿ ಗೋಪಾಲವಿಠ್ಠಲ ।
ಭಾಗವತರಲ್ಲಿ ಬಹು ಪೂಜೆಯನುಗೊಂಬ ॥ 4 ॥

 ಆದಿತಾಳ 

ದಿನದಿನಕಿಲ್ಲಿ ನೂತನ ಪೂಜೆಗಳಾಗುವವು ।
ದಿನದಿನಕಿಲ್ಲಿ ನೂತನ ವಾರ್ತೆಗಳಾಗುವವು ।
ದಿನದಿನಕಿಲ್ಲಿ ನೂತನ ಉತ್ಸವಗಳಾಗುವವು ।
ಜನರ ಸಂದಣಿ ಪ್ರತಿದಿನ ವಿಪ್ರಭೋಜನ ।
ಜನರ ಕೈಯಿಂದ ಪ್ರತಿಜನರೀಪ್ಸಿತ ತುಂಬುವರು ।
ಜನುಮ ಸಫಲ ತಮ್ಮ ಜನನವ ನೀಗುವರು ।
ದಿನಸಪ್ತ ಶತವರುಷ ದಿನ ಪರಿಯಂತರ ।
ದಿನಕರ ಶತತೇಜ ಜಗನ್ನಾಥ ತಾನಿಲ್ಲಿ ।
ಅನುವಾಗಿ ತಾನಿಂದು ಜನರ ಪಾಲಿಪುದಕ್ಕನುಮಾನ ಸಲ್ಲದೊ ।
ಗುಣಗಣ ಪರಿಪೂರ್ಣ ಗೋಪಾಲವಿಠ್ಠಲ ।
ಅಣೋರಣಿಯ ಎಂಬುವಗೆ ಎಣೆಯಾರೊ ಜಗದೊಳಗೆ॥ 5 ॥

 ಜತೆ 

ಮಂತ್ರಸಿದ್ಧಿಕ್ಷೇತ್ರ ಇದು ನೋಡಿ ಕೋವಿದರು ।
ಮಂತ್ರ ಪ್ರತಿಪಾದ್ಯ ಗೋಪಾಲವಿಠ್ಠಲ ನಿಂದ ॥ರಾಗ – ನಾದನಾಮಕ್ರಿಯಾ 
*****

just scroll down for other devaranama and suladi
 
ಶ್ರೀ ಗೋಪಾಲದಾಸಾರ್ಯ ವಿರಚಿತ  ಶ್ರೀ ರಾಘವೇಂದ್ರ ಸ್ವಾಮಿಗಳ ಸ್ತೋತ್ರ ಸುಳಾದಿ 

 ರಾಗ ಕಲ್ಯಾಣಿ 

 ಧ್ರುವತಾಳ 

ಧರಿಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು ।
ಇರುತಿಪ್ಪ ವಿವರ ಅರಿದಷ್ಟು ವರಣಿಸುವೆ ।
ಸ್ಥಿರವಾಗಿ ಮಂತ್ರಾಲಯ ಪುರ ತುಂಗ ತೀರದಿ ।
ಹರಿಭಕ್ತ ಪ್ರಹ್ಲಾದ ವರ ಯಾಗ ಇಲ್ಲಿ ಮಾಡಿ ।
ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ ಮಾಡಿ ।
ಪರಿಸಿದ್ಧನಾದನೆಂದು ಅರಿದು ಈ ಸ್ಥಳದಲ್ಲಿ ।
ಗುರುರಾಘವೇಂದ್ರರಾಯ ಶರೀರ ಪೋಗಾಡಿದಿಲ್ಲಿ ।
ಪರಲೋಕಕ್ಕೆ ಸಾಧನ ಪರಿಪೂರ್ತಿಯ ಮಾಡಿಕೊಂಡು ।
ಸಿರಿ ಕೃಷ್ಣನ್ನ ಚರಣಕ್ಕೆರಗಿ ಸಂತೋಷದಲ್ಲಿ ।
ಧರಿಯ ಮ್ಯಾಲಿದ್ದ ಜನರ ಪೊರೆಯ ಬೇಕೆಂದೆನುತ ।
ಹರಿ ನುಡಿದನು ಇವರ ಪರಮ ದಯಾಳು ತಾನು ।
ಗುರುವಂತರ್ಯಾಮಿಯಾಗಿ ವರವಾ ನೀಯಲಿ ಜಗಕೆ ।
ನರಹರಿ ತಾನೆ ನಿಂದು ನಿತ್ಯ ಪೂಜೆಯಗೊಂಡು ।
ಸಿರಿವುಳ್ಳ ಕೀರುತಿಯ ಸುರರಪಾಲಕ ಚಕ್ರ- ।
ಧರ ನಾರಾಯಣ ತಾನೆ ವರಸನ್ನಿಧಾನನಾಗಿ - ।
ವರಿಗೆ ಫಲ ತಂದೀವ ಇಹಪರದಲ್ಲಿನ್ನು ।
ಕರುಣಾಕರ ರಂಗ ಗೋಪಾಲವಿಟ್ಠಲ ತನ್ನ ।
ಶರಣರ ಪೊರೆವಂಥ ಚರಿಯಾ ಪರಿಪರಿ ಉಂಟೊ ॥ 1 ॥

 ಮಟ್ಟತಾಳ 

ನರಹರಿ ಕೃಷ್ಣರಾಮ ಸಿರಿ ವೇದವ್ಯಾಸ ।
ಎರಡೆರಡು ನಾಲ್ಕು ಹರಿಯ ಮೂರ್ತಿಗಳು ।
ಪರಿವಾರ ಸಹವಾಗಿ ಸಿರಿ ಸಹಿತದಿ ನಿಂದು ।
ಸುರ ಗುರುವರ್ಯರು ಮಧ್ವಾಚಾರ್ಯರೆ ಮೊದಲಾಗಿ ।
ತರುವಾಯದಲಿನ್ನು ತರತಮ್ಯನುಸಾರ ।
ಪರಿಪರಿ ಯತಿಗಳು ಇರುತಿಪ್ಪರು ಇಲ್ಲಿ ।
ಹರುಷದಿಂದಲಿ ವೇದಗರೆದು ಶಾಸ್ತ್ರಗಳನ್ನು ।
ಪರಿಪರಿ ಪುರಾಣ ಭಾರತ ಗಾನದಲ್ಲಿ ।
ಸರಿಸರಿ ಬಂದಂತೆ ಸರಿಗಮ ವೆನುತಲಿ ।
ಭರದಿಂದಲಿ ಕುಣಿದು ಭಕುತಿಯಿಂದಲಿ ಇನ್ನು ।
ಹರಿಯ ಪೂಜಿಸುತ್ತ ಹಗಲಿರುಳು ಬಿಡದೆ ।
ಪರತತ್ವದ ವಿವರ ಪರಿಪರಿ ಪೇಳುವರು ।
ಗರುಡವಾಹನರಂಗ ಗೋಪಾಲವಿಟ್ಠಲ ।
ಶರಣರ ಪಾಲಿಸುತ ಇರುತಿಪ್ಪನು ಇಲ್ಲಿ ॥ 2 ॥

 ತ್ರಿವಿಡಿತಾಳ 

ನರಹರಿ ರೂಪನಾಗಿ ವಾಸವಾಗಿ ಇಲ್ಲಿ ।
ದುರಿತ ದುಷ್ಕೃತ ಬ್ರಹ್ಮೇತಿಗಳೋಡಿಸುವ ।
ಸಿರಿ ರಾಮನಾಗಿಲ್ಲಿ ಪರಿ ಪರಿ ಪರಿ ದೇಶಾಂ - ।
ತರ ಅನ್ನ ಕಳಕೊಂಡು ನರರಿಲ್ಲಿ ಬಂದರೆ ।
ಸ್ಥಿರಪಟ್ಟ ಕಟ್ಟುವ ಸಿರಿ ಕೃಷ್ಣನಾಗಿಲ್ಲಿ ।
ಪರಿಪರಿಯಲಿ ಬಂದ ಪರಮಾತುರರಿಗೆ ।
ವರವೀವ ಪುತ್ರೋತ್ಸವ ಮುಂಜಿ ಮದುವೆಯ ।
ಹರಕಿಗಳ ಕೈಕೊಂಡು ಹರುಷ ಬಡಿಸುವವರ ।
ಸಿರಿ ವೇದವ್ಯಾಸನಿಲ್ಲಿ ಭರದಿಂದಲಿ ಬಂದ ।
ದುರುವಾದಿಗಳನೆಲ್ಲ ಧುರದಿಂದಲೋಡಿಸಿ ।
ಮುರಿದು ಅವರ ಶಾಸ್ತ್ರ ಹರಿ ಸರ್ವೋತ್ತಮನೆಂದು ।
ಇರುವನಿಲ್ಲಿ ತೋರಿ ಶರಣಜನಕ ಇನ್ನು ।
ವರ ಜ್ಞಾನಸುಧಿಯನ್ನು ಕರದು ಕೊಡುತಲಿಪ್ಪ ।
ಸಿರಿವಂದಿತ ಪಾದ ಗೋಪಾಲವಿಟ್ಠಲ ।
ಪರಿಪರಿಯಲಿ ಇಲ್ಲಿ ವಾಲಗ ಕೈಕೊಂಬ ॥ 3 ॥

 ಅಟ್ಟತಾಳ 

ರಾಘವೇಂದ್ರನೆಂಬೊ ರೂಪ ತಾನೆ ಆಗಿ ।
ರಾಘವೇಂದ್ರನೆಂಬೊ ನಾಮ ಇಡಿಸಿಕೊಂಡು ।
ರಾಘವೇಂದ್ರರಿನ್ನು ಮಾಡಿದಂಥ ಪುಣ್ಯ ।
ಭೋಗವರಿತು ತನ್ನ ಭಾಗವತರ ಕೀರ್ತಿ ।
ಸಾಗಿಸಿ ಸಲಹಲಿ ತ್ರಿಜಗದೊಳಗಿನ್ನು ।
ಮೇಘ ಸುರಿದಂತಮೋಘ ಕೀರುತಿಯನು ।
ರಾಘವ ಇವರಿಗೆ ರಾಜ್ಯದಿ ತಂದೀವ ।
ರಾಘವೇಂದ್ರ ಮೂರ್ತಿ ಗೋಪಾಲವಿಟ್ಠಲ ।
ಭಾಗವತರಲ್ಲಿ ಬಹು ಪೂಜೆಯನು ಗೊಂಬ ॥ 4 ॥

 ಆದಿತಾಳ 

ದಿನದಿನಕಿಲ್ಲಿ ನೂತನ ಪೂಜೆಗಳಾಗ್ವವು ।
ದಿನದಿನಕಿಲ್ಲಿ ನೂತನ ವಾರ್ತೆಗಳಾಗ್ವವು ।
ದಿನದಿನಕಿಲ್ಲಿ ನೂತನೋತ್ಸವಗಳಾಗ್ವವು ।
ಜನರ ಸಂದಣಿ ಪ್ರತಿದಿನ ವಿಪ್ರಭೋಜನ ।
ಜನನಾಥ ತಾನಿಲ್ಲಿ ಅನುವಾಗಿ ತಾ ನಿಂದು ।
ಘನ ಮಹಿಮೆಯಿಂದಲಿ ।
ಜನರ ಪಾಲಿಸುವದಕ್ಕನುಮಾನ ಸಲ್ಲದೊ ।
ಗುಣಗಣ ಪರಿಪೂರ್ಣ ಗೋಪಾಲವಿಟ್ಠಲ ।
ಅಣೋರಣಿ ಎಂಬುವಗೆ ಎಣೆಯಾರೋ ಜಗದೊಳಗೆ॥ 5 ॥

 ಜತೆ 

ಮಂತ್ರ ಸಿದ್ಧಿ ಕ್ಷೇತ್ರ ಇದು ನೋಡಿ ಕೋವಿದ ।
ಮಂತ್ರ ಪ್ರತಿಪಾದ್ಯ ಗೋಪಾಲವಿಟ್ಠಲ ನಿಂದ ॥
*********


ಧ್ರುವತಾಳ

ಧರೆಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು |
ಇರುತಿಪ್ಪ ವಿವರ ಅರಿತಷ್ಟು ವರಣಿಸುವೆ |
ಸ್ಥಿರವಾಗಿ ಮಂತ್ರಾಲಯ ಪುರ ತುಂಗಾತೀರದಿ |
ಹರಿಭಕ್ತ ಪ್ರಹ್ಲಾದ ವರಯಾಗ ಮಾಡಿ ಇಲ್ಲಿ |
ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯೆ ಮಾಡಿ |
ಪರಿಶುದ್ಧನಾದನೆಂದು ಅರಿದು ಈ ಸ್ಥಳದಲ್ಲಿ |
ಗುರುರಾಘವೇಂದ್ರರಾಯ ಶರೀರ ಪೋಗಾಡಿಸಿಲ್ಲಿ |
ಪರಲೋಕಕ್ಕೆ ಸಾಧನ ಪರಿಪೂರ್ತಿಯ ಮಾಡಿಕೊಂಡು |
ಸಿರಿಕೃಷ್ಣನ್ನ ಚರಣಕ್ಕೆರಗಿ ಸಂತೋಷದಲ್ಲಿ |
ಧರೆಯ ಮ್ಯಾಲಿದ್ದ ಜನರ ಪೊರೆಯಬೇಕೆಂದೆನುತ |
ಹರಿ ನುಡಿದನು ಇವರ ಪರಮ ದಯಾಳು ತಾನು |
ಗುರುವಂತರ್ಯಾಮಿಯಾಗಿ ವರವಾನೀಯಲು ಜಗಕೆ |
ನರಹರಿ ತಾನೆ ನಿಂದು ನಿತ್ಯಪೂಜೆಯಗೊಂಡು |
ಸಿರಿವುಳ್ಳ ಕೀರುತಿಯ ಸುರರಪಾಲಕ ಚಕ್ರಧರ |
ನಾರಾಯಣ ತಾನೆ ವರಸನ್ನಿಧಾನನಾಗಿ |
ಇವರಿಗೆ ಫಲತಂದೀವ ಇಹಪರದಲ್ಲಿನ್ನು ।
ಕರುಣಾಕರ ರಂಗ ಗೋಪಾಲವಿಠ್ಠಲ ತನ್ನ ಶರಣರ |
ಪೊರೆವಂಥ ಚರಿಯಾ ಪರಿಪರಿ ಉಂಟು || ೧ ||

ಮಟ್ಟತಾಳ

ನರಹರಿ ಕೃಷ್ಣ ರಾಮ ಸಿರಿವೇದವ್ಯಾಸ |
ಎರಡೆರಡು ನಾಲ್ಕು ಹರಿಯ ಮೂರುತಿಗಳು |
ಪರಿವಾರ ಸಹವಾಗಿ ಸಿರಿ ಸಹಿತದಿ ನಿಂದು |
ಸುರಗುರುವರ್ಯರು ಮಧ್ವಾಚಾರ್ಯರೇ ಮೊದಲಾಗಿ |
ತರುವಾಯದಲಿನ್ನು ತಾರತಮ್ಯನುಸಾರ |
ಪರಿಪರಿ ಯತಿಗಳು ಇರುತಿಪ್ಪರು ಇಲ್ಲಿ |
ಹರುಷದಿಂದಲಿ ವೇದಗರೆದು ಶಾಸ್ತ್ರಗಳನ್ನು |
ಪರಿಪರಿ ಪುರಾಣಭಾರತಾಗಮದಲ್ಲಿ  |
ಸರಿಸರಿ ಬಂದಂತೆ ಸರಿಗಮವೆನುತಲಿ |
ಭರದಿಂದಲಿ ಕುಣಿದು ಭಕುತಿಯಿಂದಲಿ ಇನ್ನು |
ಹರಿಯ ಪೂಜಿಸುತ್ತ ಹಗಲಿರುಳು ಬಿಡದೆ |
ಪರತತ್ವದ ವಿವರ ಪರಿಪರಿ ಪೇಳುವರು |
ಗರುಡವಾಹನ ರಂಗ ಗೋಪಾಲವಿಠ್ಠಲ |
ಶರಣರ ಪಾಲಿಸುತ ಇರುತಿಪ್ಪನು ಇಲ್ಲಿ || ೨ ||

ತ್ರಿವಿಡಿತಾಳ

ನರಹರಿರೂಪನಾಗಿ ವಾಸವಾಗಿ ಇಲ್ಲಿ |
ದುರಿತ ದುಷ್ಕೃತ ಬ್ರಹ್ಮಹತ್ಯೆ ಗಳೋಡಿಸುವ |
ಸಿರಿರಾಮನಾಗಿಲ್ಲಿ ಪರಿ ಪರಿ ಪರಿ ದೇಶಾಂ- |
ತರ ಅನ್ನ ಕಳಕೊಂಡು ನರರಿಲ್ಲಿ ಬಂದರೆ |
ಸ್ಥಿರಪಟ್ಟ ಕಟ್ಟುವ ಸಿರಿ ಕೃಷ್ಣನಾಗಿವಾಸವಾಗಿಇಲ್ಲಿ |
ಪರಿಪರಿಯಲಿ ಬಂದ ಪರಮಾತುರರಿಗೆ |
ವರವೀವ ಪುತ್ರೋತ್ಸವ ಮುಂಜಿ ಮದುವೆಯ |
ಹರಕೆಗಳ ಕೈಕೊಂಡು ಹರುಷ ಬಡಿಸುವವರ |
ಸಿರಿ ವೇದವ್ಯಾಸನಿಲ್ಲಿ ಭರದಿಂದಲಿ ಬಂದ |
ದುರುವಾದಿಗಳನೆಲ್ಲ ಧುರದಿಂದಲೋಡಿಸಿ |
ಮುರಿದು ಅವರ ಕುಶಾಸ್ತ್ರ ,ವ ಹರಿಸರ್ವೋತ್ತಮನೆಂದು |
ಇರುವನಿಲ್ಲಿ ತೋರಿ ಶರಣಜನಕೆ ಇನ್ನು |
ವರ ಜ್ಞಾನ ಸುಧೆಯನು ಕರೆದು ಕೊಡುತಲಿಪ್ಪ |
ಸಿರಿ ವಂದಿತಪಾದ ಗೋಪಾಲವಿಠ್ಠಲ |
ಪರಿಪರಿಯಲಿ ಇಲ್ಲಿ ವಾಲಗ ಕೈಕೊಂಬ || ೩ ||

ಅಟ್ಟತಾಳ

ರಾಘವೇಂದ್ರನೆಂಬ ರೂಪವೇ ತಾನೇ ಆಗಿ |
ರಾಘವೇಂದ್ರನೆಂಬ ನಾಮ ಇಡಿಸಿಕೊಂಡು |
ರಾಘವೇಂದ್ರರಿನ್ನು ಮಾಡಿದಂಥ ಪುಣ್ಯ |
ಭೋಗವರಿತು ತನ್ನ ಭಾಗವತರ ಕೀರ್ತಿ |
ಸಾಗಿಸಿ ಸಲಹಲಿ ತ್ರಿಜಗದೊಳಗಿನ್ನು |
ಮೇಘ ಸುರಿದಂಥ ಅಮೋಘ ಕೀರುತಿಯನ್ನು |
ರಾಘವ ಇವರಿಗೆ ರಾಜ್ಯದಿ ತಂದೀವ |
ರಾಘವೇಂದ್ರ ಮೂರ್ತಿ ಗೋಪಾಲವಿಠ್ಠಲ ।
ಭಾಗವತರಲ್ಲಿ ಬಹು ಪೂಜೆಯನುಗೊಂಬ || ೪ ||

ಆದಿತಾಳ

ದಿನದಿನಕಿಲ್ಲಿ ನೂತನ ಪೂಜೆಗಳಾಗುವವು |
ದಿನದಿನಕಿಲ್ಲಿ ನೂತನ ವಾರ್ತೆಗಳಾಗುವವು |
ದಿನದಿನಕಿಲ್ಲಿ ನೂತನ ಕೀರ್ತಿಗಳಾಗುವವು|
ದಿನದಿನಕಿಲ್ಲಿ ನೂತನ ಉತ್ಸವಗಳಾಗುವವು |
ಜನರ ಸಂದಣಿ ಪ್ರತಿದಿನ ವಿಪ್ರಭೋಜನ |
ಜನನಾಥ ತಾನಿಲ್ಲಿ ಅನುವಾಗಿ ತಾನಿಂದು |
ಘನ ಮಹಿಮೆಯಿಂದಲಿ |
ಜನರ ಪಾಲಿಸುವದಕ್ಕನುಮಾನ ಸಲ್ಲದೊ |
ಗುಣಗಣ ಪರಿಪೂರ್ಣ ಗೋಪಾಲವಿಠ್ಠಲ |
ಅಣೋರಣಿ ಎಂಬುವಗೆ ಎಣೆಯಾರೊ ಜಗದೊಳಗೆ || ೫ ||

ಜತೆ

ಮಂತ್ರಸಿಧ್ಧಿಕ್ಷೇತ್ರ ಇದು ನೋಡಿ ಕೋವಿದರು |
ಮಂತ್ರಪ್ರತಿಪಾದ್ಯ ಗೋಪಾಲವಿಠ್ಠಲನಿಂದ || ೬ ||
************
ಶ್ರೀ ರಾಘವೇಂದ್ರಸ್ತೋತ್ರ ಸುಳಾದಿ



*****

just scroll down for other devaranama and suladi