Audio by Sri. Madhava Rao
ರಾಗ ಭೈರವಿ ತ್ರಿಪುಟತಾಳ
ಇಲ್ಲೇ ವೈಕುಂಠ ನಮ್ಮ ಶ್ರೀಲಕ್ಷುಮಿ
ವಲ್ಲಭ ಪರಿಪೂರ್ಣನೆಂದು ಭಜಿಪರಿಗೆ||ಪ||
ಆಶಾಪಾಶಗಳನ್ನು ಮರೆದು ಶ್ರೀಹರಿಯ ಮೇ-
ಲಾಸೆಯನ್ನು ಮಾಡಿ ನೆಲೆಗೊಳಿಸಿ
ವಾಸುಕಿಶಯನನ ದಾಸನಾಗಿ ಒಡನೆ
ವಾಸುದೇವನ ದಿವ್ಯಮೂರ್ತಿ ನಿಟ್ಟಿಸುವಗೆ ||
ಕಾಮಕ್ರೋಧ ಲೋಭ ಮದಮತ್ಸರವಳಿದು
ಕಾಮಜನಕನ ಕಾರುಣ್ಯದಿಂದ
ನಾಮಾಮೃತವನುಂಡು ನವವಿಧಭಕ್ತಿ
ನೇಮದಿಂದಚ್ಯುತನ ತಿಳಿದು ಭಜಿಪರಿಗೆ ||
ವರಕಾವೇರಿಯೆ ವಿರಜಾನದಿಯೆಂದು
ಪರಮಪದವೆ ರಂಗಕ್ಷೇತ್ರವೆಂದು
ಪರವಾಸುದೇವನೆ ರಂಗನಾಯಕನೆಂದು
ಪರಮಭಕುತಿಯಲಿ ಭಜಿಸುವ ಜನರಿಗೆ ||
ಸ್ನಾನದಾನಾದಿ ಸತ್ಕರ್ಮವ ಮುದದಿಂದ
ಶ್ರೀನರಹರಿಗೆ ಸಮರ್ಪಿಸುವ
ಆನಂದವೈಕುಂಠ ಲಕ್ಷ್ಮೀಶನಡಿಗಳ
ಸಾನುರಾಗದಿ ನಿತ್ಯ ಧ್ಯಾನಿಪ ಜನರಿಗೆ ||
ಉಭಯ ಕಾವೇರಿ ಮಧ್ಯದಲಿ ಪವಡಿಸಿ
ಅಭಯವನೀಯುತ ದಾಸರಿಗೆ
ವಿಭವ ಸಂಪದ ಸಾಲೋಕ್ಯ ಪದವಿಯೀವ
ಅಭಿನವ ಪುರಂದರವಿಠಲನ ಭಜಿಪರಿಗೆ ||
***
pallavi
illE vaikuNTha namma shrI lakshmi vallabha paripUrNanendu bhajiparige
caraNam 1
AshApAshagaLannu maredu shrIhariya mElseyennu mADi nele goLisi
vAsuki shayanana dAsanAgi oDane vAsudEvana divya mUrti niTTisuvage
caraNam 2
kAma krOdha lObha mada matsaravaLidu kAma janakana kAruNyadinda
nAmAmrtavanuNDu nava vidha bhakti nEmadindacyutana tiLIdu bhajiparige
caraNam 3
vara kAvERiya virajA nadiyendu paramapadave ranga kSEtravendu
para vAsudEvane ranganAyakanendu parama bhakutiyinda bhajisuva janarige
caraNam 4
snAna dAnadi satkarmava mudadinda shrI naraharige samirpisuva
Ananda vaikuNTHa lakSmIshanaDigaLa sAnurAgadi nitya dhyAnipa janarige
caraNam 5
ubhya kAvEri madhyadali pavaDisi abhayavanIyuta dAsarige
vibhava sampada sAlOkya padaviyIva abhinava purandara viTTalana bhajiparige
***