Showing posts with label ಏನು ಮಾಡಿದರೇನು ನಾನಾ ಸಾಧನೆಗಳನು ಜ್ಞಾನಿಗಳ ಕೂಡ gurumahipati. Show all posts
Showing posts with label ಏನು ಮಾಡಿದರೇನು ನಾನಾ ಸಾಧನೆಗಳನು ಜ್ಞಾನಿಗಳ ಕೂಡ gurumahipati. Show all posts

Wednesday, 1 September 2021

ಏನು ಮಾಡಿದರೇನು ನಾನಾ ಸಾಧನೆಗಳನು ಜ್ಞಾನಿಗಳ ಕೂಡ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಏನು ಮಾಡಿದರೇನು ನಾನಾ ಸಾಧನೆಗಳನು | ಜ್ಞಾನಿಗಳ ಕೂಡದನಕಾ ಮರುಳೇ ಪ 


ಸಕಲ ಸಾಮಗ್ರಿಯನು ತಂದಿರಲೇನು ಪಾ | ಕಕೆ ವಹ್ನಿ ಇಲ್ಲದನಕಾ ಮರುಳಾ 1 

ಪ್ರಕಟವಾಗಿರಲು ನಯನಾದಿಂದ್ರಿಯಗಳಿಗೆ ಐಂ | ದ್ರಿಕ ಬೆಳಗವಿಲ್ಲದನಕಾ ಮರುಳೇ 2 ಹಸನ ಭೂಮಿಯ ಮಾಡಿ ಬೀಜ ಉಡಿಗಟ್ಟಿರಲು | ವಸೆದು ಮಳೆಯಾಗದನಕಾ ಮರುಳೇ 3 

ಪ್ರಕಟಿಸಿದ ಅನ್ನ ಭಕ್ಷದಿ ಶಾಖಗಳಿರಲು | ಯಶವಾಜ್ಯ ಬಡಿಸದನಕಾ ಮರುಳೇ 4 

ತುಂಬಿ ಕುಳಿತೇನು ದೊಡ್ಡವರೆಲ್ಲಾ ನಾವಿಯೊಳು | ಅಂಬಿಗನು ಬಾರದನಕಾ ಮರುಳೇ 5 

ನಂಬಿ ಗುರು ಮಹಿಪತಿಸುತಸ್ವಾಮಿ ಶ್ರೀಚರಣ | ದಿಂಬವನು ಪಡೆಯದನಕಾ ಮರುಳೇ 6

***