ರಾಗ - ತೋಡಿ
ತಾಳ - ತ್ರಿವಿಡೆತಾಳ
ಮಧ್ವಾಂತರ್ಗತ ವೇದವ್ಯಾಸ ಮಮ l
ಹೃದ್ವನರುಹಾ ಸನ್ನಿವಾಸಾ l
ಸದ್ವಿದ್ಯಾ ಕೊಡು ಶ್ರೀ ಕೃಷ್ಣದ್ವೈಪಾಯನ ಚಿದಾ l
ಚಿದ್ವಿಲಕ್ಷಣನೆ ಪಾದದ್ವಯಾಂಬುಜಾ ತೋರೊ ll ಪ ll
ಬಾದರಾಯಣ ಬಹುರೂಪಾ ಸನ l
ಕಾದಿ ಸನ್ನುತ ಧರ್ಮಯೂಪಾ l
ವೇದೋದ್ಧಾರ ಆದಾನಾದೀ ಕರ್ತಾ ಪೂರ್ಣ l
ಭೋಧಾ ಸದ್ಗುರುವರಾಧಿತ ಪದಕಂಜ l
ಮೇದಿನಿಯೊಳಾನೋರ್ವ ಪರಮಾಧ l
ಮಾಧಮನ ಕೈಪಿಡಿಯೊ ಕರುಣ ಮ l
ಹೋದದ್ಯೇಕಮನಿಯ ಕಪಿಲ ಪ್ರ l
ಬೋಧ ಮುದ್ರಾಭಯ ಕರಾಂಬುಜ ll 1 ll
ಹರಿತೋಪಲಾಭಾ ಶರೀರಾ ಪರಾ l
ಶರಮುನಿವರ ಸುಕುಮಾರಾ ಪರಮ l
ಪುರುಷ ಕಾರ್ತಃ ಸ್ವರಗರ್ಭಪ್ಪ್ರಮುಖ ನಿ l
ರ್ಜರ ಮುನೀ ಸೇವಿತಾವರ ಪಾದ ಪಂಕಜರ l
ದೂರಾ ಕುರುಕುಲದಿ ಧೃತರಾಷ್ಟ್ರ ಪಾಂಡು ವಿ l
ದುರರ ಪಡದೈವರಿಗೊಲಿದು ಸಂ l
ಹರಿಸಿ ದುರ್ಯೋಧನರ ಭಾರತ l
ವಿರಚಿಸಿದ ಸುಂದರ ಕವೀಂದ್ರಾ ll 2 ll
ಜಾತರೂಪ ಜಟಾಜೂಟಾ ಶ್ರೀನಿ l
ಕೇತನ ತಿಲಕ ಲಲಾಟಾ l
ಪೀತ ಕೃಷ್ಣಾಜೀನಾ ಶ್ವೇತ ಶ್ರೀಯಜ್ನೋಪ l
ವೀತ ಮೇಖಳ ದಂಡಾನ್ವೀತ ಕಾಮಂಡಲಾ l
ಭೂತಭಾವನಾ ಭೂತ ಕೃತ್ಸ l
ಧ್ಭೂತಿದಾಯಕ ಶ್ರೀ ಗುರು ಜಗನ್ನಾಥವಿಟ್ಠಲ ನಿನ್ನ ಮಹಿಮೆಯ l
ನಾ ತುತಿಸ ಬಲ್ಲೆನೆ ಸುಖಾತ್ಮಾ ll 3 ll
***
pallavi
madhvAntargata vEdavyAsA mama hrdvanaruha sannivAsA
anupallavi
sadbuddhiyene koDu shrI krSNa dvaipAyana cida cidvi lakSaNa tatpAdadvayAbjava tOrO
caraNam 1
haritOpa lAbha sharIra miparAsharavara sukumAra parama puruSa
karta svarNa garbha pramukha nirjara munigaNanuta pada pankaja
kula kuladi dhrtarASTra pANDu vidurara paDe daivari golidu samharisi
duryOdhanana bhArata viracisida sudhIndra kavIndra
caraNam 2
bAdarAyaNa bahurUpa sanakAdi sannuta dharmayUpA vEdOddhAraNAda
anAndikarta oUrNa bOdha sadguruvarArAdhi padayuga
mEdiniyoLagOrva paramAdhama kaipiDiyE karuNa mahOdadhiyE
kamanIya kapila prabOdha mudrAbhayankarAmbuja
caraNam 3
jAtarUpa jaTAjUTa shrInikEtana tilaka lalATa pIta krSNAjina
shvEta shrI yajnOpavIta mEkhala daNDAnvita kamaNDala bhuguti krtasad-
bhUtidAyaka shrIpati jagannAtha viThalana tutisa ballene pAtakanu alpAtmakanu nA
***