Showing posts with label ಇದೇ ನೋಡಿ ಮಂತ್ರಾಲಯ ರಾಯರು ನೆಲೆಸಿಹ others. Show all posts
Showing posts with label ಇದೇ ನೋಡಿ ಮಂತ್ರಾಲಯ ರಾಯರು ನೆಲೆಸಿಹ others. Show all posts

Thursday, 29 July 2021

ಇದೇ ನೋಡಿ ಮಂತ್ರಾಲಯ ರಾಯರು ನೆಲೆಸಿಹ ankita others

 ಇದೇ ನೋಡಿ ಮಂತ್ರಾಲಯ

ರಾಯರು ನೆಲೆಸಿಹ ಪುಣ್ಯ ನಿಲಯ

ಇದೇ ಅವರ ಬೃಂದಾವನ

ಭಕ್ತರ ಹೃದಯ ಸಿಂಹಾಸನ ||


ಪೂಜಾಸಮಯ ಆಯಿತು ಬನ್ನಿ

ತುಂಗೆಯಲಿ ಮಿಂದು ಬೇಗ ಬನ್ನಿ

ಫಲಪುಷ್ಪಗಳ ಪೂಜಿಸೆ ತನ್ನಿ

ರಾಘವೇಂದ್ರ ನಿನ್ನ ನಮಿಸುವೆ ಎನ್ನಿ ||೧||


ಢಂ ಢಂ ಢಂ ಢಂ ಎನಲು ನಗಾರಿ

ಭಂ ಭಂ ಭಂ ಭಂ ಊದಲು ಶಂಖ

ಮೂಲರಾಮನ ಸನ್ನಿಧಿ ಪ್ರಕಾಶ

ಮಂಗಳಾರತಿ ಜೊತೆ ಮಂತ್ರಘೋಷ ||೨||


ವರುಷಗಳು ಏಳು ನೂರರ ಕಾಲ

ನಿರತವು ರಾಯರ ಕರುಣೆಯ ಲೀಲ

ಪ್ರಹ್ಲಾದರಾಯರ ತಪಫಲವೆಲ್ಲ

ಹಂಚುವರಂತೆ ಭಕ್ತರಿಗೆಲ್ಲ ||೩||

***


pUjyAya rAghavEMdrAya satyadharmaratAyacha |

bhajatAM kalpvRukShAya namatAM kAmadhEnavE ||


idE nODi maMtrAlaya

rAyaru nelesiha puNya nilaya

idE avara bRuMdAvana

bhaktara hRudaya siMhAsana ||


pUjAsamaya Ayitu banni

tuMgeyali miMdu bEga banni

phalapuShpagaLa pUjise tanni

rAghavEMdra ninna namisuve enni ||1||


DhaM DhaM DhaM DhaM enalu nagAri

bhaM bhaM bhaM bhaM Udalu shaMkha

mUlarAmana sannidhi prakAsha

maMgaLArati jote maMtraghOSha ||2||


varuShagaLu ELu nUrara kAla

niratavu rAyara karuNeya lIla

prahlAdarAyara tapaphalavella

haMchuvaraMte bhaktarigella ||3||

****