..
ವ್ಯಾಸರಾಯರು
ನೋಡಿದೇ ನಾ ನೋಡಿದೆ ಪ
ನೋಡಿದೆನೊ ಗುರು ವ್ಯಾಸರಾಯರ
ನೋಡಿದೆನೊ ಶುಭಕಾಯರಾ
ಮಾಡಿದೆ ಶಿರಬಾಗಿ ನಮನವ
ಬೇಡಿದರ್ಥವ ಕೊಡುವ ವಡೆಯರ ಅ.ಪ
ಭಿದುರಮಯವಾದ ವೇದಿಕಾಗ್ರದಿ
ಚದುರದಿಕ್ಕಿಲಿ ಶೋಭಿಸುವ ಶುಭ
ತ್ರಿದಿಶವರ ಮುಖ ದಿವಿಜರೈವರು
ಮುದದಿ ಇರುತಿಹರಿವರ ಮಧ್ಯದಿ
ಪದುಮನಾಭನ ಚತುರರೂಪವÀ
ಹೃದಯ ಮಂದಿರದಲ್ಲಿ ಭಜಿಸುವ
ಪದುಮನಾಭನ ಪ್ರೀತಿಪಾತ್ರರ
ಸದಮಲಾಗುರು ವ್ಯಾಸರಾಯರ 1
ಶ್ರೀನಿವಾಸನು ಶಿರಸಿನೊಳಗಿಹ
ಆನನಾಗ್ರದಿ ಬಾದರಾಯಣ
ಙÁ್ಞನಮಯ ಶಿರಿ ಹಂಸ ಅಚ್ಯುತ
ಮೌನಿ ಕಪಿಲಾನಂತ ಭಾರ್ಗವ
ಮಾನನಿಧಿ ಹಯಗ್ರೀವ ಹಂಸನು
ದಾನವಾಂತಕ ರಾಮಚಂದ್ರ ಸ -
ದಾನುರಾಗದಿ ತೆನೆಗಳಲ್ಲಿ
ಭಾನುನಂದದಿ ಪೊಳೆವ ಬಗೆಯನು 2
ಮಧ್ಯಭಾಗದಿ ಕೃಷ್ಣದೇವನು
ಇದ್ದು ಇವರನು ಸೇವೆ ಮಾಳ್ಪರ
ಶುದ್ಧ ಮಾಡÀ್ಯವರರ್ಥ ಸರ್ವದ
ಶಿದ್ಧಿಮಾಡಿ ಇವರನತಿ ಪ್ರ
ಶಿದ್ಧಮಾಡಿವರಲ್ಲಿ ಪ್ರತ್ಯಕ್ಷ
ಸಿದ್ಧನಾಗಿರುತಿಹನು ನಮ್ಮ ಗುರು
ಮಧ್ವಗುರುಜಗನ್ನಾಥವಿಠಲನ
ಮಧ್ಯಹೃದಯದಿ ಭಜಿಪ ಗುರುಗಳ 3
***