Showing posts with label ಹರಿಯೆ ನಿನಗನ್ಯರು ಸರಿಯೆ govinda. Show all posts
Showing posts with label ಹರಿಯೆ ನಿನಗನ್ಯರು ಸರಿಯೆ govinda. Show all posts

Monday, 12 April 2021

ಹರಿಯೆ ನಿನಗನ್ಯರು ಸರಿಯೆ ankita govinda

 ರಾಗ - : ತಾಳ -


ಹರಿಯೆ ನಿನಗನ್ಯರು ಸರಿಯೆ

ಮೂರ್ಲೋಕ ದೊರೆಯೆ ll ಪ ll


ಭೂತಿದೇವತೆಯು ನಿನ್ನರಸಿಯು ಮೂರ್ಲೋಕದೊಳು

ಖ್ಯಾತೆಯಾಗಿರುವ ಭಾರತಿ ಸೊಸೆಯು ಸುತೆ ಭಾಗೀರಥಿಯು

ಭೂತೇಶನ ಪಡೆದವನನುಗನು ಪುರು

ಹೂತ ಮುಖ್ಯರು ಸಕಲೋತ್ತಮನೆಂಬರು ll 1 ll


 ನಿನ್ನ ಪೋಲುವ ಕರುಣಾಳುಗಳನ ಕಾಣೆನು ಮೋಹವ

ಅನ್ಯಾಯ ಘಟಿತ ಕರ್ಮಗಳನ್ನು ಮಾಡುವ ಎನ್ನನ್ನ

ಮನ್ನಿಸಿ ಪಾವನ ಮಾಡುವದನ್ನ

ಅನ್ಯರು ತಿಳಿವರೆ ಸುರಗಣ ಮಾನ್ಯ ll 2 ll


ಕೃತಿ ಮಾತ್ರದಿಂದ ಪಾತಕ ಬಂಧ ನಿರ್ಮೋಕಗೈವ

ವಿತತಚಿದಾನಂದ ಮುಕುಂದ ಪಾಲಿಸು ಕೃಪೆಯಿಂದ

ಕ್ಷಿತಿವರಗತ ಬಹು ಮತಿಯನು ಕರುಣಿಪ

ಹಿತ ಶೇಷಾಚಲಪತಿ ಗೋವಿಂದ ll 3 ll

***