Showing posts with label ರೋಮ ರೋಮ ಕಣ್ಣಿನಲ್ಲಿ ರಾಮನಾಮ ತುಂಬಿಕೊಂಡು others ROMA ROMA KANNINALLI RAAMANAAMA TUBIKONDU. Show all posts
Showing posts with label ರೋಮ ರೋಮ ಕಣ್ಣಿನಲ್ಲಿ ರಾಮನಾಮ ತುಂಬಿಕೊಂಡು others ROMA ROMA KANNINALLI RAAMANAAMA TUBIKONDU. Show all posts

Friday, 17 December 2021

ರೋಮ ರೋಮ ಕಣ್ಣಿನಲ್ಲಿ ರಾಮನಾಮ ತುಂಬಿಕೊಂಡು ankita others ROMA ROMA KANNINALLI RAAMANAAMA TUBIKONDU

12 April 2020

lyrics by ಕಲಾಶ್ರೀ ಜಯಶ್ರೀ ಅರವಿಂದ್

ರೋಮ ರೋಮ ಕಣ್ಣಿನಲ್ಲಿ ರಾಮನಾಮ ತುಂಬಿಕೊಂಡು 
ರಾಮನನ್ನೇ ಅಪ್ಪಿಕೊಂಡ ಹನುಮಂತ (ಪ)

ಹನುಮಂತ ನಿಜ ಘನವಂತ 
ಸ್ವಾಮಿ ಎನ್ನುತ್ತಾ ಗತಿ ನೀನೇ ಎನ್ನುತ್ತಾ (ಅ ಪ)

ಅಂಜನಿಯ ಮುದ್ದುಕಂದ ಆಂಜನೇಯ ವೀರಧೀರ
ಸಂಜೀವನ ರಾಯವರ ವಾಯುತನಯ
ವರ ವಾಯುತನಯ
ಇಂದ್ರವರುಣ ಯಮನು ಕೊಟ್ಟ ಅಷ್ಠಸಿದ್ಧಿ ವರಗಳಿಂದ
ತೊಂದರೆಯ ಕಳೆದು ಚಿರಂಜೀವಿಯಾದ
ಚಿರಂಜೀವಿಯಾದ...||

ವಿಶ್ವಕರ್ಮ ಕೊಟ್ಟಸ್ವರ್ಣ ಕರ್ಣಕುಂಡಲವ ಪಡೆದು
 ವಿಜಯವೀರ ಶೂರನಾಗಿ ಧೀರನಾದ ಶೂರ ಧೀರನಾದ
ಪರಬ್ರಹ್ಮ ಭೂಮಿತಾಯ ಕರುಣೆಯ ಪತಿಯಿಂದ
ವೇದಶಾಸ್ತ್ರವೆಲ್ಲಾ ತಿಳಿದು ಜ್ಞಾನಿಯಾದ
ಮಹಾ ಜ್ಞಾನಿಯಾದ... ||
ಪ್ರಾಣನಾಥ ಶ್ರೀ ರಾಮದೂತ....

ರಾಗ : ಏಸುಕಾಯಂಗಾಳ ಕಳೆದು....
*****

just scroll down for other devaranama