12 April 2020
lyrics by ಕಲಾಶ್ರೀ ಜಯಶ್ರೀ ಅರವಿಂದ್ರೋಮ ರೋಮ ಕಣ್ಣಿನಲ್ಲಿ ರಾಮನಾಮ ತುಂಬಿಕೊಂಡು
ರಾಮನನ್ನೇ ಅಪ್ಪಿಕೊಂಡ ಹನುಮಂತ (ಪ)
ಹನುಮಂತ ನಿಜ ಘನವಂತ
ಸ್ವಾಮಿ ಎನ್ನುತ್ತಾ ಗತಿ ನೀನೇ ಎನ್ನುತ್ತಾ (ಅ ಪ)
ಅಂಜನಿಯ ಮುದ್ದುಕಂದ ಆಂಜನೇಯ ವೀರಧೀರ
ಸಂಜೀವನ ರಾಯವರ ವಾಯುತನಯ
ವರ ವಾಯುತನಯ
ಇಂದ್ರವರುಣ ಯಮನು ಕೊಟ್ಟ ಅಷ್ಠಸಿದ್ಧಿ ವರಗಳಿಂದ
ತೊಂದರೆಯ ಕಳೆದು ಚಿರಂಜೀವಿಯಾದ
ಚಿರಂಜೀವಿಯಾದ...||
ವಿಶ್ವಕರ್ಮ ಕೊಟ್ಟಸ್ವರ್ಣ ಕರ್ಣಕುಂಡಲವ ಪಡೆದು
ವಿಜಯವೀರ ಶೂರನಾಗಿ ಧೀರನಾದ ಶೂರ ಧೀರನಾದ
ಪರಬ್ರಹ್ಮ ಭೂಮಿತಾಯ ಕರುಣೆಯ ಪತಿಯಿಂದ
ವೇದಶಾಸ್ತ್ರವೆಲ್ಲಾ ತಿಳಿದು ಜ್ಞಾನಿಯಾದ
ಮಹಾ ಜ್ಞಾನಿಯಾದ... ||
ಪ್ರಾಣನಾಥ ಶ್ರೀ ರಾಮದೂತ....
ರಾಗ : ಏಸುಕಾಯಂಗಾಳ ಕಳೆದು....
*****
just scroll down for other devaranama
No comments:
Post a Comment